Team India Scheduled: ವೆಸ್ಟ್ ಇಂಡೀಸ್ ಮಣಿಸಿದ ಭಾರತದ ಮುಂದಿನ ಪಂದ್ಯ ಯಾವಾಗ ಗೊತ್ತಾ? ಇಲ್ಲಿದೆ ಈ ವರ್ಷದ ಸಂಪೂರ್ಣ ವೇಳಾಪಟ್ಟಿ | india’s Busy 2025: Full Schedule for Cricket Tours Against Australia and South Africa | ಕ್ರೀಡೆ

Team India Scheduled: ವೆಸ್ಟ್ ಇಂಡೀಸ್ ಮಣಿಸಿದ ಭಾರತದ ಮುಂದಿನ ಪಂದ್ಯ ಯಾವಾಗ ಗೊತ್ತಾ? ಇಲ್ಲಿದೆ ಈ ವರ್ಷದ ಸಂಪೂರ್ಣ ವೇಳಾಪಟ್ಟಿ | india’s Busy 2025: Full Schedule for Cricket Tours Against Australia and South Africa | ಕ್ರೀಡೆ
ಆಸ್ಟ್ರೇಲಿಯಾ ವಿರುದ್ಧ ಮುಂದಿನ ಸರಣಿ

ವಿಂಡೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ತನ್ನ ಮುಂದಿನ ಸರಣಿಯಲ್ಲಿ ಆಸ್ಟ್ರೆಲಿಯಾ ತಂಡವನ್ನ ಎದುರಿಸಲಿದೆ. ಆಸ್ಟ್ರೇಲಿಯಾ ವಿರುದ್ಧದ 3 ಒಡಿಐಗಳ ಸರಣಿ ಇದೇ ಅಕ್ಟೋಬರ್ 19ರಂದು ಪರ್ತ್‌ನಲ್ಲಿ ಆರಂಭವಾಗುತ್ತದೆ. ಈ ಸರಣಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಅವರು ಆಡಲಿದ್ದು, 5 ತಿಂಗಳ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳುತ್ತಿದ್ದಾರೆ. ಭಾರತದ ಯುವ ನಾಯಕ ಗಿಲ್​ಗೆ ಇದು ಮೊದಲ ಏಕದಿನ ಸರಣಿಯ ಪರೀಕ್ಷೆಯಾಗಲಿದೆ. ಈ ಸರಣಿಯ ನಂತರ 5 ಟಿ20ಗಳ ಸರಣಿಯೂ ನಡೆಯಲಿದ್ದು, ಭಾರತದ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ ದೊಡ್ಡ ಸವಾಲು ಎದುರಿಸಲಿದೆ.

ಆಸ್ಟ್ರೇಲಿಯಾ ವಿರುದ್ಧದ ಒಡಿಐ ಸರಣಿಯ ವಿವರಗಳು ಹೀಗಿವೆ

ಅಕ್ಟೋಬರ್ 19: ಭಾರತ vs ಆಸ್ಟ್ರೇಲಿಯಾ, 1ನೇ ಒಡಿಐ (ಪರ್ತ್)

ಅಕ್ಟೋಬರ್ 23: ಭಾರತ vs ಆಸ್ಟ್ರೇಲಿಯಾ, 2ನೇ ಒಡಿಐ (ಅಡಿಲೇಡ್)

ಅಕ್ಟೋಬರ್ 25: ಭಾರತ vs ಆಸ್ಟ್ರೇಲಿಯಾ, 3ನೇ ಒಡಿಐ (ಅಡಿಲೇಡ್)

ಈ ಸರಣಿಯ ನಂತರ ಭಾರತವು ಆಸ್ಟ್ರೇಲಿಯಾ ವಿರುದ್ಧ 5 ಟಿ20ಗಳ ಸರಣಿಯನ್ನು ಆಡಲಿದ್ದು, ಇದು ಅಕ್ಟೋಬರ್ 29ರಂದು ಕ್ಯಾನ್ಬರಾದಲ್ಲಿ ಆರಂಭವಾಗುತ್ತದೆ. ಈ ಟಿ20 ಸರಣಿಯು ಭಾರತದ ಯುವ ತಂಡಕ್ಕೆ ದೊಡ್ಡ ಅವಕಾಶ ನೀಡುತ್ತದೆ. ಈಗಾಗಲೇ ಏಷ್ಯಾಕಪ್ ಗೆದ್ದ ವಿಶ್ವಾಸದಲ್ಲಿರುವ ಭಾರತ ತಂಡ ಆಸ್ಟ್ರೇಲಿಯಾ ಮೇಲೆ ಒತ್ತಡ ಏರಿ ಮತ್ತೊಂದು ಟಿ20 ಸರಣಿ ಗೆಲುವಿನ ಆಶಯದಲ್ಲಿದೆ.

ಟಿ20 ಸರಣಿಯ ವಿವರಗಳು

ಅಕ್ಟೋಬರ್ 29: ಭಾರತ vs ಆಸ್ಟ್ರೇಲಿಯಾ, 1ನೇ ಟಿ20 (ಕ್ಯಾನ್ಬರಾ)

ಅಕ್ಟೋಬರ್ 31: ಭಾರತ vs ಆಸ್ಟ್ರೇಲಿಯಾ, 2ನೇ ಟಿ20 (ಮೆಲ್ಬರ್ನ್)

ನವೆಂಬರ್ 2: ಭಾರತ vs ಆಸ್ಟ್ರೇಲಿಯಾ, 3ನೇ ಟಿ20 (ಹೊಬಾರ್ಟ್)

ನವೆಂಬರ್ 6: ಭಾರತ vs ಆಸ್ಟ್ರೇಲಿಯಾ, 4ನೇ ಟಿ20 (ಗೋಲ್ಡ್ ಕೋಸ್ಟ್)

ನವೆಂಬರ್ 8: ಭಾರತ vs ಆಸ್ಟ್ರೇಲಿಯಾ, 5ನೇ ಟಿ20 (ಬ್ರಿಸ್ಬೇನ್)

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ

ಆಸ್ಟ್ರೇಲಿಯಾ ಪ್ರವಾಸದ ನಂತರ ಭಾರತ ತಂಡವು ತವರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್‌ಗಳ ಸರಣಿಯನ್ನು ಆಡಲಿದ್ದು, ಇದು ನವೆಂಬರ್ 14ರಂದು ಕೋಲ್ಕತ್ತಾದಲ್ಲಿ ಆರಂಭವಾಗುತ್ತದೆ. ಈ ಸರಣಿಯು WTC 2025-27ರಲ್ಲಿ ಭಾರತದ ಮುಖ್ಯ ಭಾಗವಾಗಿದ್ದು, ಗಿಲ್ ಅವರ ನಾಯಕತ್ವದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟಾವ ಪ್-2 ಸ್ಥಾನಕ್ಕೆ ತಲುಪುಅವಕಾಶ ಹೊಂದಿದೆ.

ಟೆಸ್ಟ್ ಸರಣಿಯ ವಿವರಗಳು

ನವೆಂಬರ್ 14-18: ಭಾರತ vs ದಕ್ಷಿಣ ಆಫ್ರಿಕಾ, 1ನೇ ಟೆಸ್ಟ್ (ಕೋಲ್ಕತ್ತಾ)

ನವೆಂಬರ್ 22-26: ಭಾರತ vs ದಕ್ಷಿಣ ಆಫ್ರಿಕಾ, 2ನೇ ಟೆಸ್ಟ್ (ಗುಹಾಟಿ)

ವರ್ಷದ ಕೊನೆಯಲ್ಲಿ ಭಾರತವು ಮನೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಒಡಿಐಗಳ ಸರಣಿಯನ್ನು ಆಡಲಿದ್ದು, ಇದು ನವೆಂಬರ್ 30ರಂದು ರಾಂಚಿಯಲ್ಲಿ ಆರಂಭವಾಗುತ್ತದೆ.

ನವೆಂಬರ್ 30: ಭಾರತ vs ದಕ್ಷಿಣ ಆಫ್ರಿಕಾ, 1ನೇ ಒಡಿಐ (ರಾಂಚಿ)

ಡಿಸೆಂಬರ್ 3: ಭಾರತ vs ದಕ್ಷಿಣ ಆಫ್ರಿಕಾ, 2ನೇ ಒಡಿಐ(ರಾಯ್‌ಪುರ)

ಡಿಸೆಂಬರ್ 6: ಭಾರತ vs ದಕ್ಷಿಣ ಆಫ್ರಿಕಾ, 3ನೇ ಒಡಿಐ (ವಿಶಾಖಪಟ್ಟಣಂ)

ಈ ಏಕದಿನ ಸರಣಿ ಮುಗಿದ ಬಳಿಕ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಡಿಸೆಂಬರ್ 9: ಭಾರತ vs ದಕ್ಷಿಣ ಆಫ್ರಿಕಾ (ಕಟಕ್)

ಡಿಸೆಂಬರ್ 11: ಭಾರತ vs ದಕ್ಷಿಣ ಆಫ್ರಿಕಾ (ಚಂಡೀಗಡ)

ಡಿಸೆಂಬರ್ 14: ಭಾರತ vs ದಕ್ಷಿಣ ಆಫ್ರಿಕಾ (ಧರ್ಮಾಶಾಲಾ)

ಡಿಸೆಂಬರ್ 17: ಭಾರತ vs ದಕ್ಷಿಣ ಆಫ್ರಿಕಾ (ಲಖನೌ)

ಡಿಸೆಂಬರ್ 19: ಭಾರತ vs ದಕ್ಷಿಣ ಆಫ್ರಿಕಾ (ಆಹ್ಮದಾಬಾದ್)