Last Updated:
39 ವರ್ಷದ ನೋಮನ್ ಅಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಇತಿಹಾಸದಲ್ಲಿ 6-ವಿಕೆಟ್ ಸಾಧನೆಯನ್ನು 6 ಬಾರಿ ಮಾಡಿದ ಮೊದಲ ಬೌಲರ್ ಎಂಬ ಗೌರವವನ್ನು ಪಡೆದಿದ್ದಾರೆ. ಈ ಸಾಧನೆಯೊಂದಿಗೆ ಅವರು ಭಾರತದ ರವಿಚಂದ್ರನ್ ಅಶ್ವಿನ್ ಅವರ 5 ಸಾಧನೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಪಾಕಿಸ್ಥಾನದ ಎಡಗೈ ಸ್ಪಿನ್ನರ್ ನೋಮನ್ ಅಲಿ (Noman Ali) ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. 39 ವರ್ಷದ ನೋಮನ್, ಮೊದಲ ಇನಿಂಗ್ಸ್ನಲ್ಲಿ 35 ಓವರ್ಗಳಲ್ಲಿ 112 ರನ್ಗಳಿಗೆ 6 ವಿಕೆಟ್ಗಳನ್ನು ಕಬಳಿಸಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಇತಿಹಾಸದಲ್ಲಿ 6-ವಿಕೆಟ್ ಸಾಧನೆಯನ್ನು 6 ಬಾರಿ ಮಾಡಿದ ಮೊದಲ ಬೌಲರ್ ಎಂಬ ಗೌರವವನ್ನು ಪಡೆದಿದ್ದಾರೆ. ಈ ಸಾಧನೆಯೊಂದಿಗೆ ಅವರು ಭಾರತದ ರವಿಚಂದ್ರನ್ ಅಶ್ವಿನ್ ಅವರ 5 ಸಾಧನೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ನೋಮನ್ (6 ಬಾರಿ) ಮತ್ತು ಅಶ್ವಿನ್ (5 ಬಾರಿ) ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ಬಾರಿ 6 ವಿಕೆಟ್ ಸಾಧನೆ ಮಾಡಿದ ಪಟ್ಟಿಯಲ್ಲಿ ಭಾರತದ ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮತ್ತು ಆಸ್ಟ್ರೇಲಿಯಾದ ನೇಥನ್ ಲಿಯಾನ್ ಇದ್ದಾರೆ. ನೋಮನ್ ಅಲಿ WTC ಇತಿಹಾಸದಲ್ಲಿ 18 ಪಂದ್ಯಗಳಲ್ಲಿ 81 ವಿಕೆಟ್ಗಳನ್ನು ತೆಗೆದುಕೊಂಡಿದ್ದಾರೆ, ಇದರಲ್ಲಿ ಈ 6 ಬಾರಿ 6-ವಿಕೆಟ್ ಸಾಧನೆ ಸೇರಿದೆ. ಭಾರತದ ಅಶ್ವಿನ್ 41 ಪಂದ್ಯಗಳಲ್ಲಿ 195 ವಿಕೆಟ್ಗಳೊಂದಿಗೆ 5 ಬಾರಿ ಈ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿದ್ದರೆ, ಅಕ್ಷರ್ ಪಟೇಲ್ (14 ಪಂದ್ಯಗಳಲ್ಲಿ 55 ವಿಕೆಟ್ಗಳು), ಜಸ್ಪ್ರೀತ್ ಬುಮ್ರಾ (40 ಪಂದ್ಯಗಳಲ್ಲಿ 177 ವಿಕೆಟ್ಗಳು) ಮತ್ತು ಆಸ್ಟ್ರೇಲಿಯಾದ ನಾಥನ್ ಲಿಯನ್ (53 ಪಂದ್ಯಗಳಲ್ಲಿ 219 ವಿಕೆಟ್ಗಳು) ತಲಾ 4 ಬಾರಿ 6 ವಿಕೆಟ್ ಸಾಧನೆ ಮಾಡಿದ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
2021ರ ಜನವರಿ 26ರಂದು ಕರಾಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತಮ್ಮ 35ನೇ ವಯಸ್ಸಿನಲ್ಲಿ ಅಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು . ಲಾಹೋರ್ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ನಾಯಕ ಏಡನ್ ಮಾರ್ಕ್ರಮ್, ವಿಯಾನ್ ಮುಲ್ಡರ್, ಟ್ರಿಸ್ಟನ್ ಸ್ಟಬ್ಸ್ , ಕೈಲ್ ವೆರ್ರೆಯ್ನ್ , ಟೋನಿ ಡಿ ಝೋರ್ಜಿ ಹಾಗೂ ಪ್ರೆನೆಲನ್ ಸುಬ್ರಯೇನ್ ವಿಕೆಟ್ ಪಡೆಯುವ ಮೂಲಕ ನೋಮನ್ ತಮ್ಮ 6-ವಿಕೆಟ್ ಸಾಧನೆಯನ್ನು ಪೂರ್ಣಗೊಳಿಸಿದ್ದಾರೆ. ಈ ಪ್ರದರ್ಶನವು ಪಾಕಿಸ್ಥಾನದ ಬೌಲಿಂಗ್ ಆಕ್ರಮಣವನ್ನು ಬಲಪಡಿಸಿದ್ದು, ದಕ್ಷಿಣ ಆಫ್ರಿಕಾವನ್ನು ಒತ್ತಡಕ್ಕೆ ಒಳಮಾಡಿದೆ.
ಇಂಗ್ಲೆಂಡ್ ವಿರುದ್ಧ: 16.3 ಓವರ್ಗಳಲ್ಲಿ 46 ರನ್ಗಳಿಗೆ 8 ವಿಕೆಟ್ಗಳು (ಮುಲ್ತಾನ್, 2024)
ಶ್ರೀಲಂಕಾ ವಿರುದ್ಧ: 23 ಓವರ್ಗಳಲ್ಲಿ 70 ರನ್ಗಳಿಗೆ 7 ವಿಕೆಟ್ಗಳು (ಕೊಲಂಬೊ SSC, 2023)
ವೆಸ್ಟ್ ಇಂಡೀಸ್ ವಿರುದ್ಧ: 15.1 ಓವರ್ಗಳಲ್ಲಿ 41 ರನ್ಗಳಿಗೆ 6 ವಿಕೆಟ್ಗಳು (ಮುಲ್ತಾನ್, 2025)
ಇಂಗ್ಲೆಂಡ್ ವಿರುದ್ಧ: 18.2 ಓವರ್ಗಳಲ್ಲಿ 42 ರನ್ಗಳಿಗೆ 6 ವಿಕೆಟ್ಗಳು (ರಾವಲ್ಪಿಂಡಿ, 2024)
ಆಸ್ಟ್ರೇಲಿಯಾ ವಿರುದ್ಧ: 38.1 ಓವರ್ಗಳಲ್ಲಿ 107 ರನ್ಗಳಿಗೆ 6 ವಿಕೆಟ್ಗಳು (ರಾವಲ್ಪಿಂಡಿ, 2022)
ದಕ್ಷಿಣ ಆಫ್ರಿಕಾ ವಿರುದ್ಧ: 35 ಓವರ್ಗಳಲ್ಲಿ 112 ರನ್ಗಳಿಗೆ 6 ವಿಕೆಟ್ಗಳು (ಲಾಹೋರ್, 2025)
ಪಾಕಿಸ್ಥಾನದ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು 6-ವಿಕೆಟ್ ಸಾಧನೆಗಳ ದಾಖಲೆಯು ಇಮ್ರಾನ್ ಖಾನ್ ಅವರ ಹೆಸರಿನಲ್ಲಿದೆ, ಅವರು 13 ಬಾರಿ ಈ ಸಾಧನೆ ಮಾಡಿದ್ದಾರೆ. ನೋಮನ್ ಅಲಿ ಅವರ ಈ ಸಾಧನೆಯು ಅವರನ್ನು ಪಾಕಿಸ್ಥಾನದ ಸ್ಪಿನ್ ಬೌಲಿಂಗ್ನ ಸ್ಟಾರ್ ಆಗಿಸಿದೆ. WTC ಸೈಕಲ್ನಲ್ಲಿ ಪಾಕಿಸ್ಥಾನದ ಯಶಸ್ಸಿಗೆ ಅವರ ಕೊಡುಗೆ ಮಹತ್ವದ್ದಾಗಿದೆ.
October 14, 2025 6:45 PM IST
Noman Ali: ಅಶ್ವಿನ್, ಲಿಯಾನ್ ಸೇರಿ ದಿಗ್ಗಜ ಬೌಲರ್ಗಳನ್ನೇ ಹಿಂದಿಕ್ಕಿದ 39 ವರ್ಷದ ಬೌಲರ್! ಪಾಕ್ ಸ್ಪಿನ್ನರ್ನಿಂದ ದಾಖಲಾಯ್ತು ವಿಶ್ವದಾಖಲೆ