Rohit-Kohli: ನಾಯಕನಾದ ನಂತರ ಮೊದಲ ಬಾರಿಗೆ ರೋಹಿತ್-ವಿರಾಟ್ ಭೇಟಿ ಮಾಡಿದ ಗಿಲ್! ಇಬ್ಬರ ರಿಯಾಕ್ಷನ್ ಹೇಗಿತ್ತು ನೋಡಿ | Shubman Gill Shares Heartfelt Moment with Virat Kohli and Rohit Sharma Ahead of Australia Tour | ಕ್ರೀಡೆ

Rohit-Kohli: ನಾಯಕನಾದ ನಂತರ ಮೊದಲ ಬಾರಿಗೆ ರೋಹಿತ್-ವಿರಾಟ್ ಭೇಟಿ ಮಾಡಿದ ಗಿಲ್! ಇಬ್ಬರ ರಿಯಾಕ್ಷನ್ ಹೇಗಿತ್ತು ನೋಡಿ | Shubman Gill Shares Heartfelt Moment with Virat Kohli and Rohit Sharma Ahead of Australia Tour | ಕ್ರೀಡೆ
ಆಸ್ಟ್ರೇಲಿಯಾಕ್ಕೆ ತೆರಳಿದ ಮೊದಲ ಬ್ಯಾಚ್

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಭಾರತೀಯ ತಂಡದ ಮೊದಲ ಬ್ಯಾಚ್ ಬುಧವಾರ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಅಲ್ಲಿ ಅವರು ಅಕ್ಟೋಬರ್ 19 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದಾರೆ. ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಭಾರತೀಯ ಆಟಗಾರರು ತಂಡದ ಬಸ್ ಹತ್ತುವುದನ್ನು ತೋರಿಸಲಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರು ಕೆಲವು ದಿನಗಳ ಹಿಂದೆ ದೆಹಲಿಗೆ ಆಗಮಿಸಿದರು. ಈ ಗುಂಪು ಬೆಳಿಗ್ಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು, ಅಲ್ಲಿ ಕೆಲವು ಅಭಿಮಾನಿಗಳು ಅವರನ್ನು ನೋಡಲು ಪ್ರವೇಶದ್ವಾರದ ಹೊರಗೆ ಸಾಲುಗಟ್ಟಿ ನಿಂತಿದ್ದರು.

ಪರ್ತ್​​ನಲ್ಲಿ ಮೊದಲ ಟಿ20

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ನಡೆಯಲಿದೆ. ಮುಂದಿನ ಎರಡು ಪಂದ್ಯಗಳು ಅಡಿಲೇಡ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ. ಇದರ ನಂತರ ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿ ನಡೆಯಲಿದೆ. ಟಿ20 ತಂಡ ಅಕ್ಟೋಬರ್ 22 ರಂದು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಿದೆ.

ರೋಹಿತ್- ಕೊಹ್ಲಿ ಮೇಲೆ ಎಲ್ಲರ ಕಣ್ಣು

ಟಿ20 ಸರಣಿ ಅಕ್ಟೋಬರ್ 29 ರಂದು ಆರಂಭವಾಗಲಿದೆ. ಏಕದಿನ ಸರಣಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಅವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣುಗಳಿವೆ. ಅವರ ಭವಿಷ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡುತ್ತಿವೆ. ಇಬ್ಬರೂ ಆಟಗಾರರು ಈಗಾಗಲೇ ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಅದೇ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಒಡಿಐ ಸರಣಿಯ ವಿವರಗಳು ಹೀಗಿವೆ

ಅಕ್ಟೋಬರ್ 19: ಭಾರತ vs ಆಸ್ಟ್ರೇಲಿಯಾ, 1ನೇ ಒಡಿಐ (ಪರ್ತ್)

ಅಕ್ಟೋಬರ್ 23: ಭಾರತ vs ಆಸ್ಟ್ರೇಲಿಯಾ, 2ನೇ ಒಡಿಐ (ಅಡಿಲೇಡ್)

ಅಕ್ಟೋಬರ್ 25: ಭಾರತ vs ಆಸ್ಟ್ರೇಲಿಯಾ, 3ನೇ ಒಡಿಐ (ಅಡಿಲೇಡ್)

ಈ ಸರಣಿಯ ನಂತರ ಭಾರತವು ಆಸ್ಟ್ರೇಲಿಯಾ ವಿರುದ್ಧ 5 ಟಿ20ಗಳ ಸರಣಿಯನ್ನು ಆಡಲಿದ್ದು, ಇದು ಅಕ್ಟೋಬರ್ 29ರಂದು ಕ್ಯಾನ್ಬರಾದಲ್ಲಿ ಆರಂಭವಾಗುತ್ತದೆ. ಈ ಟಿ20 ಸರಣಿಯು ಭಾರತದ ಯುವ ತಂಡಕ್ಕೆ ದೊಡ್ಡ ಅವಕಾಶ ನೀಡುತ್ತದೆ. ಈಗಾಗಲೇ ಏಷ್ಯಾಕಪ್ ಗೆದ್ದ ವಿಶ್ವಾಸದಲ್ಲಿರುವ ಭಾರತ ತಂಡ ಆಸ್ಟ್ರೇಲಿಯಾ ಮೇಲೆ ಒತ್ತಡ ಏರಿ ಮತ್ತೊಂದು ಟಿ20 ಸರಣಿ ಗೆಲುವಿನ ಆಶಯದಲ್ಲಿದೆ.

ಟಿ20 ಸರಣಿಯ ವಿವರಗಳು

ಅಕ್ಟೋಬರ್ 29: ಭಾರತ vs ಆಸ್ಟ್ರೇಲಿಯಾ, 1ನೇ ಟಿ20 (ಕ್ಯಾನ್ಬರಾ)

ಅಕ್ಟೋಬರ್ 31: ಭಾರತ vs ಆಸ್ಟ್ರೇಲಿಯಾ, 2ನೇ ಟಿ20 (ಮೆಲ್ಬರ್ನ್)

ನವೆಂಬರ್ 2: ಭಾರತ vs ಆಸ್ಟ್ರೇಲಿಯಾ, 3ನೇ ಟಿ20 (ಹೊಬಾರ್ಟ್)

ನವೆಂಬರ್ 6: ಭಾರತ vs ಆಸ್ಟ್ರೇಲಿಯಾ, 4ನೇ ಟಿ20 (ಗೋಲ್ಡ್ ಕೋಸ್ಟ್)

ನವೆಂಬರ್ 8: ಭಾರತ vs ಆಸ್ಟ್ರೇಲಿಯಾ, 5ನೇ ಟಿ20 (ಬ್ರಿಸ್ಬೇನ್