Pakistan Airstrikes Afghanistan: ಕ್ರಿಕೆಟಿಗರ ಮೇಲೆ ಬಾಂಬ್ ದಾಳಿ: ಕದನ ವಿರಾಮ ಉಲ್ಲಂಘಿಸಿ ಪಾಕ್‌ನಿಂದ ಮತ್ತೆ ವೈಮಾನಿಕ ದಾಳಿ, 8 ಅಫ್ಘಾನ್ ಆಟಗಾರರು ಬಲಿ, Pakistani airstrike in Paktika kills 8 Afghanistan cricketers | ದೇಶ-ವಿದೇಶ

Pakistan Airstrikes Afghanistan: ಕ್ರಿಕೆಟಿಗರ ಮೇಲೆ ಬಾಂಬ್ ದಾಳಿ: ಕದನ ವಿರಾಮ ಉಲ್ಲಂಘಿಸಿ ಪಾಕ್‌ನಿಂದ ಮತ್ತೆ ವೈಮಾನಿಕ ದಾಳಿ, 8 ಅಫ್ಘಾನ್ ಆಟಗಾರರು ಬಲಿ, Pakistani airstrike in Paktika kills 8 Afghanistan cricketers | ದೇಶ-ವಿದೇಶ

Last Updated:

ಪಾಕಿಸ್ತಾನ ಪಕ್ಟಿಕಾದ ಉರ್ಗುನ್ ಜಿಲ್ಲೆಯಲ್ಲಿ ವೈಮಾನಿಕ ದಾಳಿ ನಡೆಸಿ ಎಂಟು ಅಫ್ಘಾನ್ ಕ್ಲಬ್ ಕ್ರಿಕೆಟಿಗರನ್ನು ಕೊಂದಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಪಾಕಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಭಾಗವಹಿಸುವುದನ್ನು ನಿರಾಕರಿಸಿದೆ.

ಅಫ್ಘಾನ್ ಆಟಗಗಾರು ಬಲಿಅಫ್ಘಾನ್ ಆಟಗಗಾರು ಬಲಿ
ಅಫ್ಘಾನ್ ಆಟಗಗಾರು ಬಲಿ

ಕಬೂಲ್(ಅ.18): ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪಾಕಿಸ್ತಾನ ಮತ್ತೊಮ್ಮೆ ಅಫ್ಘಾನ್ ನೆಲದಲ್ಲಿ ವೈಮಾನಿಕ ದಾಳಿ ನಡೆಸಿದೆ. ಈ ಬಾರಿ ಪಾಕಿಸ್ತಾನ ನೆರೆ ರಾಷ್ಟ್ರದ ಕ್ರಿಕೆಟಿಗರನ್ನು ಗುರಿಯಾಗ ವೈಮಾನಿಕ ದಾಳಿ ನಡೆಸಿದೆ. ಈ ಬಾಂಬ್ ದಾಳಿಗೆ ಎಂಟು ಅಫ್ಘಾನ್ ಆಟಗಾರರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೇ ಪಾಕಿಸ್ತಾನಿ ದಾಳಿಯನ್ನು ದೃಢಪಡಿಸಿದೆ. ಪಂದ್ಯದ ನಂತರ ಆಟಗಾರರು ಮನೆಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾಗ ಪಾಕಿಸ್ತಾನ ತಮ್ಮ ಮೇಲೆ ಬಾಂಬ್ ದಾಳಿ ನಡೆಸಿತು ಎಂದಿದೆ.

ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಕ್ರಿಕೆಟಿಗರು ಕ್ಲಬ್ ಮಟ್ಟದ ಕ್ರಿಕೆಟಿಗರು ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಅಫ್ಘಾನಿಸ್ತಾನದ ಪಕ್ಟಿಕಾದಲ್ಲಿ ಪಾಕಿಸ್ತಾನಿ ವೈಮಾನಿಕ ದಾಳಿಯಲ್ಲಿ ಎಂಟು ಕ್ಲಬ್ ಮಟ್ಟದ ಕ್ರಿಕೆಟಿಗರು ಹುತಾತ್ಮರಾದರು ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮೂಲಗಳು ಟೋಲೋ ನ್ಯೂಸ್‌ಗೆ ತಿಳಿಸಿವೆ. ಆಟಗಾರರು ತಮ್ಮ ಪಂದ್ಯದ ನಂತರ ಪಕ್ಟಿಕಾದ ಕೇಂದ್ರವಾದ ಶರಾನಾದಿಂದ ಅರ್ಗುನ್ ಜಿಲ್ಲೆಗೆ ಹಿಂತಿರುಗುತ್ತಿದ್ದಾಗ ಅವರನ್ನು ಗುರಿಯಾಗಿಸಿಕೊಂಡರು.

ಬೋರ್ಡ್ ಹೇಳಿದ್ದೇನು?

ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಅಫ್ಘಾನ್ ಕ್ರಿಕೆಟಿಗರ ಸಾವಿನ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ದುಃಖ ವ್ಯಕ್ತಪಡಿಸಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಕ್ರಿಕೆಟಿಗರಿಗೆ ಗೌರವ ಸಲ್ಲಿಸಿದೆ, “ಇಂದು (ಶುಕ್ರವಾರ) ಸಂಜೆ ಪಾಕಿಸ್ತಾನ ಆಡಳಿತದ ಹೇಡಿತನದ ದಾಳಿಗೆ ಗುರಿಯಾಗಿದ್ದ ಪಕ್ತಿಕಾ ಪ್ರಾಂತ್ಯದ ಉರ್ಗುನ್ ಜಿಲ್ಲೆಯ ಧೈರ್ಯಶಾಲಿ ಕ್ರಿಕೆಟಿಗರ ದುರಂತ ಹುತಾತ್ಮತೆಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತನ್ನ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತದೆ” ಎಂದು ಬರೆದಿದೆ. ಆದಾಗ್ಯೂ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಕೇವಲ ಮೂವರು ಆಟಗಾರರ ಸಾವನ್ನು ದೃಢಪಡಿಸಿದೆ.

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಮುಖ ನಿರ್ಧಾರ

ಪಾಕಿಸ್ತಾನದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಅಫ್ಘಾನಿಸ್ತಾನ ಕೂಡ ಮಹತ್ವದ ಕ್ರಮ ಕೈಗೊಂಡಿದೆ. ಭಾರತದಂತೆಯೇ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಈ ದುರಂತ ಘಟನೆಯ ನಂತರ ಮತ್ತು ಸಂತ್ರಸ್ತರಿಗೆ ಗೌರವ ಸಲ್ಲಿಸುವ ಸಂಕೇತವಾಗಿ, ನವೆಂಬರ್ ಅಂತ್ಯದಲ್ಲಿ ನಡೆಯಲಿರುವ ಪಾಕಿಸ್ತಾನದೊಂದಿಗಿನ ಮುಂಬರುವ ತ್ರಿಕೋನ ಟಿ20 ಸರಣಿಯಲ್ಲಿ ಭಾಗವಹಿಸಲು ನಿರಾಕರಿಸಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.

ಕದನ ವಿರಾಮದ ಹೊರತಾಗಿಯೂ ವಾಯುದಾಳಿ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ 48 ಗಂಟೆಗಳ ಕದನ ವಿರಾಮದ ಸಮಯದಲ್ಲಿ ಈ ದಾಳಿ ಸಂಭವಿಸಿದೆ. ಅಫ್ಘಾನಿಸ್ತಾನದೊಂದಿಗೆ 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಪಾಕಿಸ್ತಾನ ಬುಧವಾರ ಘೋಷಿಸಿತು. ಎರಡೂ ದೇಶಗಳ ನಡುವಿನ ಗಡಿ ಘರ್ಷಣೆಗಳು, ಎರಡೂ ಕಡೆಗಳಲ್ಲಿ ಹಲವಾರು ಸಾವುನೋವುಗಳು ಸಂಭವಿಸಿರುವ ಮಧ್ಯೆ ಈ ಘೋಷಣೆ ಬಂದಿದೆ. ಪ್ರಸ್ತುತ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ.