IND vs AUS: ಕಾಂಗರೂರ ಪಡೆಯ ಹೆಡೆಮುರಿ ಕಟ್ಟಲು ಟೀಮ್ ಇಂಡಿಯಾ ಸಜ್ಜು! ಸಂಭಾವ್ಯ ಭಾರತದ ಪ್ಲೇಯಿಂಗ್-11 ಹೀಗಿದೆ /Team India probable playing XI for the first ODI against Australia | ಕ್ರೀಡೆ

IND vs AUS: ಕಾಂಗರೂರ ಪಡೆಯ ಹೆಡೆಮುರಿ ಕಟ್ಟಲು ಟೀಮ್ ಇಂಡಿಯಾ ಸಜ್ಜು! ಸಂಭಾವ್ಯ ಭಾರತದ ಪ್ಲೇಯಿಂಗ್-11 ಹೀಗಿದೆ /Team India probable playing XI for the first ODI against Australia | ಕ್ರೀಡೆ

Last Updated:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಬೆಳಿಗ್ಗೆ 9:00 ಗಂಟೆಗೆ ಆರಂಭವಾಗಲಿದೆ. ಇದಕ್ಕೂ ಮುನ್ನ ಸಂಭಾವ್ಯ ಭಾರತದ ಪ್ಲೇಯಿಂಗ್-11 ರ ಬಗ್ಗೆ ಇಲ್ಲಿದೆ.

shubman gill and gautam gambhirshubman gill and gautam gambhir
shubman gill and gautam gambhir

ಆಸ್ಟ್ರೇಲಿಯಾ (Australia) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ (ODI series) ಭಾರತ ತಂಡ (Team India)ಕ್ಕೆ ವಿಶೇಷವಾಗಿದೆ. ಭಾರತ ತಂಡಕ್ಕೆ ಶುಭಮನ್ ಗಿಲ್ (Shubman Gill) ಅವರನ್ನು ಹೊಸ ಏಕದಿನ ನಾಯಕರನ್ನಾಗಿ ನೇಮಿಸಲಾಗಿದೆ. 2025 ರ ಚಾಂಪಿಯನ್ಸ್ ಟ್ರೋಫಿ (Champions Trophy) ಗೆಲುವಿನ ಬಳಿಕ ದಿಗ್ಗಜ ಬ್ಯಾಟರ್ಸ್ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರು ಟೀಮ್ ಇಂಡಿಯಾಕ್ಕೆ ಮರಳುತ್ತಿದ್ದಾರೆ. ಇದು ಅವರ ಕೊನೆಯ ಆಸ್ಟ್ರೇಲಿಯಾ ಪ್ರವಾಸವಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಏಕದಿನ ಸರಣಿ ವಶಪಡಿಸಿಕೊಳ್ಳಲು ಭಾರತ ಸಜ್ಜಾಗಿದೆ.

ಪರ್ತ್ ಸ್ಟೇಡಿಯಂನಲ್ಲಿ ಅಕ್ಟೋಬರ್ 19 ರಂದು ನಡೆಯಲಿರುವ ಏಕದಿನ ಸರಣಿಯ ಮೊದಲ ಪಂದ್ಯಕ್ಕಾಗಿ ನಾಯಕ ಶುಭಮನ್ ಗಿಲ್ ಮತ್ತು ಹೆಡ್​ಕೋಚ್ ಗೌತಮ್ ಗಂಭೀರ್ ಬಲಿಷ್ಠ ಭಾರತ ತಂಡದ ಆಡುವ ಹನ್ನೊಂದರ ಬಳಗವನ್ನು ಕಣಕ್ಕಿಳಿಸಲು ಎದುರು ನೋಡುತ್ತಿದ್ದಾರೆ. ಆದ್ದರಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್-11 ರ ಬಗ್ಗೆ ಇಲ್ಲಿದೆ ಮಾಹಿತಿ.

ರೋಹಿತ್-ಕೊಹ್ಲಿ ಸಜ್ಜು

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಪಂದ್ಯ ಮಾತ್ರವಲ್ಲದೆ ಸರಣಿಯ ಮೂರು ಪಂದ್ಯಗಳಲ್ಲೂ ಆಡಲಿದ್ದಾರೆ. ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರೆ, ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಅಗ್ರ ಮತ್ತು ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ.

ಮೂವರು ಆಲ್‌ರೌಂಡರ್‌ ಕಣಕ್ಕೆ

ಆಸ್ಟ್ರೇಲಿಯಾವನ್ನು ಮಣಿಸಲು ಟೀಮ್ ಇಂಡಿಯಾದ ಮೂವರು ಆಲ್​ರೌಂಡರ್ ಕಣಕ್ಕಿಳಿಸಬಹುದು. ಅಕ್ಸರ್ ಪಟೇಲ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಜೊತೆಗೆ ಸ್ಪಿನ್ ಬೌಲಿಂಗ್ ಮಾಡಬಹುದು. ಗಾಯಗೊಂಡ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡಕ್ಕೆ ಆಯ್ಕೆಯಾಗಿರುವ ನಿತೀಶ್ ಕುಮಾರ್ ರೆಡ್ಡಿ 7ನೇ ಕ್ರಮಾಂಕದಲ್ಲಿ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುತ್ತಾರೆ.

ವಾಷಿಂಗ್ಟನ್ ಸುಂದರ್ 8ನೇ ಕ್ರಮಾಂಕದಲ್ಲಿ ಎರಡನೇ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಗಿರುತ್ತಾರೆ. 2025 ರ ಏಷ್ಯಾ ಕಪ್‌ನ ಹೀರೋ ಕುಲ್‌ದೀಪ್ ಯಾದವ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆಯಿದೆ. ಅವರನ್ನು ಬೆಂಚ್‌ನಲ್ಲಿ ಇರಿಸಬಹುದು.

ಪರ್ತ್ ಪಿಚ್‌ನಲ್ಲಿ ಮೂವರು ವೇಗಿಗಳು

ಪರ್ತ್‌ ಪಿಚ್ ವೇಗದ ಬೌಲಿಂಗ್‌ಗೆ ಅನುಕೂಲಕರ ಪರಿಸ್ಥಿತಿ ಇರುವುದರಿಂದ ಭಾರತ ಮೂವರು ವೇಗಿಗಳನ್ನು ಕಣಕ್ಕಿಳಿಸಬಹುದು. ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಆದರೆ ಹರ್ಷಿತ್ ರಾಣಾ ಮೂರನೇ ವೇಗದ ಬೌಲರ್ ಆಗಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಅಕ್ಸರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಇಬ್ಬರು ಸ್ಪಿನ್ನರ್‌ಗಳಾಗಿರುವುದರಿಂದ, ಫಾರ್ಮ್‌ನಲ್ಲಿರುವ ಕುಲ್‌ದೀಪ್ ಯಾದವ್‌ಗೆ ಅವಕಾಶ ಸಿಗುವುದು ಕಡಿಮೆ.

ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್-11

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.