ಭಾರತ ಕೊನೆಯ ಬಾರಿ ಮೊದಲ 3 ವಿಕೆಟ್ಗಳಲ್ಲಿ ಅಲ್ಪಮೊತ್ತಕ್ಕೆ ಕಳೆದುಕೊಂಡಿದ್ದು 6 ವರ್ಷಗಳ ಹಿಂದೆ. 2019ರಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ 2019 ರ ಸೆಮಿಫೈನಲ್ ಪಂದ್ಯದಲ್ಲಿ ಇದೇ ರೀತಿಯ ಕಳಪೆ ಆರಂಭ ಪಡೆದಿತ್ತು. ಆ ಪಂದ್ಯವು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು.
ಆ ಪಂದ್ಯದಲ್ಲಿ ಭಾರತ ಕೇವಲ ಐದು ರನ್ಗಳಿಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಲಾ 1 ರನ್ಗೆ ಔಟಾಗಿದ್ದರು. ಇದೀಗ 6 ವರ್ಷಗಳ ಬಳಿಕ ಟೀಮ್ ಇಂಡಿಯಾದ ಆರಂಭಿಕ ಮೂವರು 18 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಇಂದು ರೋಹಿತ್ ಶರ್ಮಾ 8 ವಿರಾಟ್ ಕೊಹ್ಲಿ ಖಾತೆ ತೆರೆಯಲು ವಿಫಲರಾದತೆ, ಶುಭ್ಮನ್ ಗಿಲ್ ಕೇವಲ 10 ರನ್ಗಳನ್ನು ಗಳಿಸಿದರು. 2019 ರಿಂದ, ಭಾರತದ ಆರಂಭಿಕ ಮೂವರು ಬ್ಯಾಟ್ಸ್ಮನ್ಗಳು ಏಕದಿನ ಪಂದ್ಯಗಳಲ್ಲಿ ಇಷ್ಟು ಕಳಪೆ ಪ್ರದರ್ಶನ ನೀಡಿಲ್ಲ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಳು ತಿಂಗಳ ನಂತರ ಇಂದು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿದರು. ಇಬ್ಬರೂ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ವಿಮರ್ಶಕರ ಬಾಯಿ ಮುಚ್ಚಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಬ್ಬರೂ ಅಲ್ಪ ಮೊತ್ತಕ್ಕೆ ಔಟಾದರು. ಏಕದಿನ ನಾಯಕತ್ವದಿಂದ ಹೊರಬಿದ್ದ ನಂತರ ರೋಹಿತ್ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ನಾಯಕನಾಗಿ ಅವರ ಕೊನೆಯ ಏಕದಿನ ಪಂದ್ಯದಲ್ಲಿ, ಅವರು ಭಾರತವನ್ನು ಚಾಂಪಿಯನ್ಸ್ ಟ್ರೋಫಿ ಗೆಲುವಿನತ್ತ ಮುನ್ನಡೆಸಿದ್ದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಏಕದಿನ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ, ಈಗಾಗಲೇ ಟಿ20ಐ ಮತ್ತು ಟೆಸ್ಟ್ಗಳಿಂದ ನಿವೃತ್ತರಾಗಿದ್ದಾರೆ. ಈ ಸರಣಿಯಲ್ಲಿ ವಿಫಲರಾದರೆ 2027ರ ವಿಶ್ವಕಪ್ ಆಡುವ ಇಬ್ಬರು ಆಸೆ ಕ್ಷೀಣಿಸಲಿದೆ.
ಇಂದು, ಭಾರತ ಪವರ್ಪ್ಲೇನ 10 ಓವರ್ಗಳಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ 27 ರನ್ ಗಳಿಸಿದೆ. ಇದು 2023 ರ ನಂತರ ಭಾರತದ ಜಂಟಿ ಎರಡನೇ ಕೆಟ್ಟ ಪವರ್ಪ್ಲೇ ಸ್ಕೋರ್ ಆಗಿದೆ. ಇದಕ್ಕೂ ಮೊದಲು, 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೆನ್ನೈ ಏಕದಿನ ಪಂದ್ಯದಲ್ಲಿ, ಭಾರತ ಪವರ್ಪ್ಲೇನಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ 27 ರನ್ಗಳನ್ನು ಮಾತ್ರ ಗಳಿಸಿತ್ತು.
ಪ್ರಸ್ತುತ ಪಂದ್ಯ ಮಳೆಯಿಂದ ಸ್ಥಗಿತಗೊಂಡಿದೆ. 11.5 ಓವರ್ಗಳಲ್ಲಿ3 ವಿಕೆಟ್ ಕಳೆದುಕೊಂಡು 37 ರನ್ಗಳಿಸಿದೆ. ಶ್ರೇಯಸ್ ಅಯ್ಯರ್ 6, ಅಕ್ಷರ್ ಪಟೇಲ್ 7 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ರೋಹಿತ್ ಶರ್ಮಾ, ಶುಭ್ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಫಿಲಿಪ್ (ವಿಕೆಟ್ ಕೀಪರ್), ಮ್ಯಾಟ್ ರೆನ್ಶಾ, ಕೂಪರ್ ಕಾನೊಲಿ, ಮಿಚೆಲ್ ಓವನ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹೇಜಲ್ವುಡ್.
October 19, 2025 11:39 AM IST