Women’s World Cup: ಇಂಗ್ಲೆಂಡ್ ವಿರುದ್ಧ ಹೇಗಿದೆ ಭಾರತ ತಂಡದ ದಾಖಲೆ? ಸೆಮಿಫೈನಲ್ ಪ್ರವೇಶಿಸಲು ಇರುವ ಅವಕಾಶಗಳೇನು? | IND-W vs ENG-W: England Holds Slight Edge Over India in ODI Head-to-Head Record | ಕ್ರೀಡೆ

Women’s World Cup: ಇಂಗ್ಲೆಂಡ್ ವಿರುದ್ಧ ಹೇಗಿದೆ ಭಾರತ ತಂಡದ ದಾಖಲೆ? ಸೆಮಿಫೈನಲ್ ಪ್ರವೇಶಿಸಲು ಇರುವ ಅವಕಾಶಗಳೇನು? | IND-W vs ENG-W: England Holds Slight Edge Over India in ODI Head-to-Head Record | ಕ್ರೀಡೆ

Last Updated:

ಭಾರತ ತಂಡವು ಇಲ್ಲಿಯವರೆಗೆ ಟೂರ್ನಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದು ಎರಡರಲ್ಲಿ ಸೋತಿದೆ. ಇದರಿಂದಾಗಿ ಟೀಮ್ ಇಂಡಿಯಾ ಕೇವಲ ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಭಾರತ vs ಇಂಗ್ಲೆಂಡ್ ಭಾರತ vs ಇಂಗ್ಲೆಂಡ್
ಭಾರತ vs ಇಂಗ್ಲೆಂಡ್

2025ರ ಐಸಿಸಿ ಮಹಿಳಾ ವಿಶ್ವಕಪ್‌ನ (Women’s World Cup) 20 ನೇ ಪಂದ್ಯ ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ನಡೆಯಲಿದೆ. ಎರಡೂ ತಂಡಗಳು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur) ನೇತೃತ್ವದ ಟೀಮ್ ಇಂಡಿಯಾಗೆ ಈ ಪಂದ್ಯವು ಮಾಡು ಇಲ್ಲವೆ ಮಡಿ ಸ್ಪರ್ಧೆಯಾ ಮಾರ್ಪಟ್ಟಿದೆ, ಏಕೆಂದರೆ ಸೆಮಿಫೈನಲ್ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿ ಉಳಿಯಲು ಇಂಗ್ಲೆಂಡ್ ವಿರುದ್ಧ ಗೆಲ್ಲಲೇಬೇಕಿದೆ. ಇಂದು ಇಂಗ್ಲೆಂಡ್ ಗೆದ್ದರೆ 3ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಭಾರತ ಗೆದ್ದ ಯಾವುದೇ ತಂಡವನ್ನ ಅವಲಂಭಿಸದೇ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಸಿಗಲಿದೆ.

2 ಸ್ಥಾನಗಳಿಗೆ 3 ತಂಡಗಳ ಪೈಪೋಟಿ

ಭಾರತ ತಂಡವು ಇಲ್ಲಿಯವರೆಗೆ ಟೂರ್ನಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದು ಎರಡರಲ್ಲಿ ಸೋತಿದೆ. ಇದರಿಂದಾಗಿ ಟೀಮ್ ಇಂಡಿಯಾ ಕೇವಲ ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಏತನ್ಮಧ್ಯೆ, ನಾಲ್ಕು ಪಂದ್ಯಗಳಿಂದ ಏಳು ಅಂಕಗಳೊಂದಿಗೆ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಆದ್ದರಿಂದ, ಅಂತಿಮ ನಾಲ್ಕರಲ್ಲಿ ಕೇವಲ ಎರಡು ಸ್ಥಾನಗಳು ಉಳಿದಿವೆ. ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್​ಗೆ ಸೆಮಿಫೈನಲ್ ಹಾದಿ ಹೆಚ್ಚು ಅವಕಾಶವಿದೆ.

ಭಾರತ vs ಇಂಗ್ಲೆಂಡ್ ಏಕದಿನ ಪಂದ್ಯದ ದಾಖಲೆ

ವಿಶ್ವಕಪ್‌ಗೆ ಮುನ್ನ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಮಾಡಿತ್ತು. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಆದಾಗ್ಯೂ, ಒಟ್ಟಾರೆ ಎರಡು ತಂಡಗಳ ದಾಖಲೆ ನೋಡಿದರೆ ಇಂಗ್ಲೆಂಡ್ ಸ್ವಲ್ಪ ಮುಂದಿದೆ. ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳು ಇಲ್ಲಿಯವರೆಗೆ ಒಟ್ಟು 79 ಪಂದ್ಯಗಳನ್ನು ಆಡಿದ್ದು, ಟೀಮ್ ಇಂಡಿಯಾ 36 ಪಂದ್ಯಗಳನ್ನು ಗೆದ್ದರೆ, ಇಂಗ್ಲೆಂಡ್ 41 ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯವಾಗಿದೆ.

ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನ

2025ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಪ್ರದರ್ಶನವು ಸರಾಸರಿಯಾಗಿದೆ. ಮೊದಲ ಪಂದ್ಯದಲ್ಲಿಯೇ ಶ್ರೀಲಂಕಾವನ್ನು ಸೋಲಿಸುವ ಮೂಲಕ ಭಾರತ ತಂಡವು ಉತ್ತಮವಾಗಿ ಆರಂಭಿಸಿತ್ತು. ನಂತರ ಅವರು ಪಾಕಿಸ್ತಾನವನ್ನು ಸೋಲಿಸಿತ್ತು. ಆದರೆ ಮುಂದಿನ ಎರಡು ಪಂದ್ಯಗಳಲ್ಲಿ, ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ನಂತರ ಆಸ್ಟ್ರೇಲಿಯಾ ವಿರುದ್ಧ ಗೆಲ್ಲವಂತಹ ಪಂದ್ಯಗಳನ್ನ ಸೋತು ನಿರಾಶೆ ಅನುಭವಿಸಿತ್ತು.

ಸೆಮಿಫೈನಲ್ ಅವಕಾಶ ಹೇಗಿದೆ?

ಈ ಪಂದ್ಯವನ್ನ ಭಾರತ ಗೆದ್ದರೆ 5 ಪಂದ್ಯಗಳಲ್ಲಿ 6 ಅಂಕ ಪಡೆದು 4ನೇ ಸ್ಥಾನದಲ್ಲೆ ಉಳಿಯಲಿದೆ. ಆದರೆ ಇಂಗ್ಲೆಂಡ್ ಗೆದ್ದರೆ 5 ಪಂದ್ಯಗಳಲ್ಲಿ 4ನೇ ಗೆಲುವಿನೊಂದಿಗೆ 3ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಆಗ ಭಾರತ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯವನ್ನ ಶತಾಯ ಗತಾಯ ಗೆಲ್ಲಲೇಬೇಕಾಗುತ್ತದೆ. ಒಂದು ವೇಳೆ ಇಂದು ಭಾರತ ಗೆದ್ದರೆ ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶದ ವಿರುದ್ಧ ಒಂದನ್ನ ಗೆದ್ದರೆ ಸೆಮಿಫೈನಲ್ ಸ್ಥಾನ ಗಿಟ್ಟಿಸಿಕೊಳ್ಳಲಿದೆ.