Team India: ಭಾರತದ ಸತತ ಗೆಲುವಿನ ಓಟಕ್ಕೆ ಕಾಂಗರೂ ಪಡೆ ಫುಲ್​ ಸ್ಟಾಪ್! ಟೀಮ್ ಇಂಡಿಯಾಗೆ ಮತ್ತೊಮ್ಮೆ ದುರದೃಷ್ಟಕರವಾಯ್ತು ಅಕ್ಟೋಬರ್ |India Suffers First ODI Loss in 2025, 3rd Time Winning Streak Ended in October | ಕ್ರೀಡೆ

Team India: ಭಾರತದ ಸತತ ಗೆಲುವಿನ ಓಟಕ್ಕೆ ಕಾಂಗರೂ ಪಡೆ ಫುಲ್​ ಸ್ಟಾಪ್! ಟೀಮ್ ಇಂಡಿಯಾಗೆ ಮತ್ತೊಮ್ಮೆ ದುರದೃಷ್ಟಕರವಾಯ್ತು ಅಕ್ಟೋಬರ್ |India Suffers First ODI Loss in 2025, 3rd Time Winning Streak Ended in October | ಕ್ರೀಡೆ

Last Updated:


2025 ರಲ್ಲಿ, ಭಾರತ ತಂಡವು ಸತತ ಎಂಟು ODI ಪಂದ್ಯಗಳನ್ನು ಗೆದ್ದಿತು, ಆದರೆ ಅವರ ಗೆಲುವಿನ ಸರಣಿಯು ಒಂಬತ್ತನೇ ಪಂದ್ಯದಲ್ಲಿ ಕೊನೆಗೊಂಡಿತು. ಅಕ್ಟೋಬರ್‌ನಲ್ಲಿ ಭಾರತ ತಂಡದ ಏಕದಿನ ಸರಣಿಯ ಗೆಲುವಿನ ಸರಣಿ ಕೊನೆಗೊಂಡಿದ್ದು ಇದು ಮೂರನೇ ಬಾರಿ.

ಭಾರತ ತಂಡಕ್ಕೆ ಸೋಲುಭಾರತ ತಂಡಕ್ಕೆ ಸೋಲು
ಭಾರತ ತಂಡಕ್ಕೆ ಸೋಲು

ಆಸ್ಟ್ರೇಲಿಯಾ (India vs Australia) ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. ಅಕ್ಟೋಬರ್‌ನಲ್ಲಿ ಟೀಮ್ ಇಂಡಿಯಾದ ಸತತ ಗೆಲುವಿನ ಓಟ ಅಂತ್ಯವಾಗುವ ಸಂಪ್ರದಾಯ ಈ ವರ್ಷವೂ ಮುಂದುವರಿದಿದೆ. ಭಾರತ ವರ್ಷದಲ್ಲಿ ಸೋಲೇ ಕಾಣದೆ ಮುನ್ನುಗ್ಗುತ್ತಿದ್ದಾಗ ಅಕ್ಟೋಬರ್​ನಲ್ಲಿ ಮೊದಲ ಸೋಲು ಕಾಣುತ್ತಿರುವುದು ಇದು 3ನೇ ಬಾರಿ, ಒಮ್ಮೆ ಮಾತ್ರ ಒಮ್ಮೆ ಮಾತ್ರ ಡಿಸೆಂಬರ್‌ನಲ್ಲಿ ಆ ವರ್ಷ ಭಾರತ ತನ್ನ ಮೊದಲ ODI ಪಂದ್ಯವನ್ನು ಸೋತಿತ್ತು. ಇದೀಗ ಭಾರತ 2025ರಲ್ಲೂ ಭಾರತ ತನ್ನ ಮೊದಲ ಸೋಲನ್ನು ಅಕ್ಟೋಬರ್​ನಲ್ಲೇ ​ ಅನುಭವಿಸಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ODI ಪಂದ್ಯವನ್ನು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ಆಡಲಾಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಪಡೆದುಕೊಂಡಿತು. ಇದು 2025ರಲ್ಲಿ ಭಾರತದ ಸತತ 8 ODI ಪಂದ್ಯಗಳ ಗೆಲುವಿನ ಓಟ ಕೊನೆಗೊಂಡಿತು. ಇದಲ್ಲದೆ, ಅಕ್ಟೋಬರ್‌ನಲ್ಲಿ ಭಾರತೀಯ ತಂಡದ ಗೆಲುವಿನ ಸರಣಿಯನ್ನು ಈಗಾಗಲೇ ಎರಡು ಬಾರಿ ಇದೇ ರೀತಿ ಅಂತ್ಯವಾಗಿತ್ತು.

3ನೇ ಬಾರಿ ಭಾರತದ ಅಜೇಯ ಓಟ ಆಕ್ಟೋಬರ್​ನಲ್ಲಿ ಅಂತ್ಯ

2025 ರಲ್ಲಿ, ಭಾರತ ತಂಡವು ಸತತ ಎಂಟು ODI ಪಂದ್ಯಗಳನ್ನು ಗೆದ್ದಿತು, ಆದರೆ ಅವರ ಗೆಲುವಿನ ಸರಣಿಯು ಒಂಬತ್ತನೇ ಪಂದ್ಯದಲ್ಲಿ ಕೊನೆಗೊಂಡಿತು. ಅಕ್ಟೋಬರ್‌ನಲ್ಲಿ ಭಾರತ ತಂಡದ ಏಕದಿನ ಸರಣಿಯ ಗೆಲುವಿನ ಸರಣಿ ಕೊನೆಗೊಂಡಿದ್ದು ಇದು ಮೂರನೇ ಬಾರಿ. 1978ರ ಅಕ್ಟೋಬರ್ 13 ರಂದು ಮತ್ತು 1991 ರ ಅಕ್ಟೋಬರ್ 23 ರಂದು ಭಾರತ ತನ್ನ ವರ್ಷದ ಮೊದಲ ಏಕದಿನ ಪಂದ್ಯವನ್ನು ಸೋತಿತ್ತು. ಹೀಗಾಗಿ, ಅಕ್ಟೋಬರ್ ತಿಂಗಳು ಭಾರತೀಯ ತಂಡಕ್ಕೆ ಸ್ವಲ್ಪ ದುರದೃಷ್ಟಕರ ವೆಂದು ಸಾಬೀಗುತ್ತಿದೆ ಎಂದು ಹೇಳಬಹುದು. ಡಿಸೆಂಬರ್‌ನಲ್ಲಿ, 1990 ರಲ್ಲಿ ಭಾರತವು ತನ್ನ ಮೊದಲ ಏಕದಿನ ಸೋಲನ್ನು ಅನುಭವಿಸಿತು.

2025ರಲ್ಲಿ ಮೊದಲ ಸೋಲು

2025 ರ ವರ್ಷವು ಭಾರತಕ್ಕೆ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಸಾಗುತ್ತಿದೆ. ಏಕೆಂದರೆ ಭಾರತ ಈ ವರ್ಷ ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್ ಸೇರಿದಂತೆ ಎಂಟು ಏಕದಿನ ಪಂದ್ಯಗಳನ್ನ ಆಡಿ ಎಲ್ಲಾ 8 ಪಂದ್ಯಗಳನ್ನ ಗೆದ್ದಿತ್ತು. ಎಲ್ಲಾ ಪಂದ್ಯಗಳಲ್ಲೂ ರೋಹಿತ್ ಶರ್ಮಾ ನಾಯಕರಾಗಿದ್ದರು. ಮೊದಲಯ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ, ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ 5 ಪಂದ್ಯಗಳನ್ನ ಗೆದ್ದು ದಾಖಲೆ ಬರೆದಿತ್ತು. ಆದರೆ ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಭಾರತ ಮೊದಲ ಪಂದ್ಯವನ್ನು ಸೋತಿದೆ. ಈ ಸರಣಿಯಲ್ಲಿ ಎರಡು ಪಂದ್ಯಗಳು ಉಳಿದಿವೆ ಮತ್ತು ಭಾರತವು ತವರಿನಲ್ಲಿ ಮೂರು ಪಂದ್ಯಗಳ ಸರಣಿಯನ್ನು ಆಡಬೇಕಾಗಿದೆ. ಆ ಪಂದ್ಯಗಳ ಫಲಿತಾಂಶ ಏನಾಗುತ್ತದೆ ಎಂಬುದನ್ನು ಈಗ ಕಾದು ನೋಡಬೇಕಾಗಿದೆ.

ಪಂದ್ಯದ ಹೈಲೈಟ್ಸ್

ಪಂದ್ಯಕ್ಕೆ ಸಂಬಂಧಿಸಿದಂತೆ, ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭಾರತ ತಂಡವು ಉತ್ತಮ ಆರಂಭವನ್ನು ಪಡೆಯಲಿಲ್ಲ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಬೇಗನೆ ಕಳೆದುಕೊಂಡಿತು. ನಾಯಕ ಶುಭ್​ಮನ್ ಗಿಲ್ ಕೂಡ ಹೆಚ್ಚು ಹೊತ್ತು ನಿಲ್ಲಲು ವಿಫಲರಾದರು. ಮಳೆಯಿಂದಾಗಿ ಪಂದ್ಯವನ್ನು ತಲಾ 26 ಓವರ್‌ಗಳಿಗೆ ಇಳಿಸಲಾಯಿತು. ಭಾರತ 136 ರನ್ ಗಳಿಸಿತು, ಆದರೆ ಡಿಎಲ್ಎಸ್​ ನಿಯಮ ಪ್ರಕಾರ ಆಸ್ಟ್ರೇಲಿಯಾಕ್ಕೆ 131 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು, ಆಸ್ಟ್ರೇಲಿಯಾ 21.1 ಓವರ್​ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿ ಗೆಲುವು ಸಾಧಿಸಿತು. ಮಿಚೆಲ್ ಮಾರ್ಷ್ ಅಜೇಯ 46 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.