Last Updated:
ಭಾರತದ ಮುಂದಿನ ಪಂದ್ಯ ನ್ಯೂಜಿಲೆಂಡ್ ವಿರುದ್ಧ, ಇದನ್ನು ವರ್ಚುವಲ್ ಕ್ವಾರ್ಟರ್ ಫೈನಲ್ ಆಗಿ ಆಡಲಾಗುತ್ತದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಈಗಾಗಲೇ 2025 ರ ಮಹಿಳಾ ವಿಶ್ವಕಪ್ ಸೆಮಿಫೈನಲ್ಗೆ ಅರ್ಹತೆ ಪಡೆದಿವೆ. ಈಗ, ಕೇವಲ ಒಂದು ಸ್ಥಾನ ಮಾತ್ರ ಉಳಿದಿದೆ, ಭಾರತ ಮತ್ತು ನ್ಯೂಜಿಲೆಂಡ್ ಎರಡು ಪ್ರಮುಖ ಸ್ಪರ್ಧಿಗಳಾಗಿವೆ.
ಭಾರತ ಮಹಿಳಾ ಕ್ರಿಕೆಟ್ ತಂಡವು ಅಕ್ಟೋಬರ್ 19 ರ ಭಾನುವಾರ ರಾತ್ರಿ ಇಂಗ್ಲೆಂಡ್ ವಿರುದ್ಧ 4 ರನ್ಗಳ ರೋಚಕ ಸೋಲನ್ನು ಅನುಭವಿಸಿತು. ಇದರೊಂದಿಗೆ, ಹರ್ಮನ್ಪ್ರೀತ್ ಕೌರ್ ನೇತೃತ್ವದ ತಂಡವು ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಸೋಲುಗಳನ್ನು ದಾಖಲಿಸಿದೆ. ಈ ಸೋಲು ಭಾರತವನ್ನು ಪಂದ್ಯಾವಳಿಯಿಂದ ಹೊರಹಾಕಿಲ್ಲವಾದರೂ, ಸೆಮಿಫೈನಲ್ಗೆ ಅವರ ಹಾದಿಯನ್ನ ಮತ್ತಷ್ಟು ಕಠಿಣಗೊಳಿಸಿದೆ. ಮಹಿಳಾ ವಿಶ್ವಕಪ್ನಲ್ಲಿ ಭಾರತಕ್ಕೆ ಇನ್ನೂ ಎರಡು ಪಂದ್ಯಗಳು ಉಳಿದಿವೆ. ಈಗ, ಟೀಮ್ ಇಂಡಿಯಾ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಬಯಸಿದರೆ, ಅವರು ಈ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಒಂದರಲ್ಲಿ ಸೋಲು ಕಂಡರೂ ಟೀಮ್ ಇಂಡಿಯಾ ಟೂರ್ನಿಯಿಂದ ಹೊರ ಬೀಳಲಿದೆ.
ಭಾರತದ ಮುಂದಿನ ಪಂದ್ಯ ನ್ಯೂಜಿಲೆಂಡ್ ವಿರುದ್ಧ, ಇದನ್ನು ವರ್ಚುವಲ್ ಕ್ವಾರ್ಟರ್ ಫೈನಲ್ ಆಗಿ ಆಡಲಾಗುತ್ತದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಈಗಾಗಲೇ 2025 ರ ಮಹಿಳಾ ವಿಶ್ವಕಪ್ ಸೆಮಿಫೈನಲ್ಗೆ ಅರ್ಹತೆ ಪಡೆದಿವೆ. ಈಗ, ಕೇವಲ ಒಂದು ಸ್ಥಾನ ಮಾತ್ರ ಉಳಿದಿದೆ, ಭಾರತ ಮತ್ತು ನ್ಯೂಜಿಲೆಂಡ್ ಎರಡು ಪ್ರಮುಖ ಸ್ಪರ್ಧಿಗಳಾಗಿವೆ. ಅಕ್ಟೋಬರ್ 23 ರಂದು ಭಾರತ ತಂಡ ಕಿವೀಶ್ ತಂಡವನ್ನ ಮಣಿಸಿದರೆ ಗೆಲ್ಲುವ ತಂಡವು ಸೆಮಿಫೈನಲ್ ತಲುಪುವ ಉತ್ತಮ ಅವಕಾಶವನ್ನು ಹೊಂದಿರುತ್ತದೆ.
ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ತಲಾ 8 ಅಂಕಗಳನ್ನು ತಲುಪುವ ಅವಕಾಶವನ್ನು ಹೊಂದಿವೆ, ಆದರೆ ಭಾರತದ ನೆಟ್ ರನ್ ರೇಟ್ ದರ ತಂಡಕ್ಕೆ ವರದಾನವಾಗಿದೆ. ಟೀಮ್ ಇಂಡಿಯಾದ ನೆಟ್ ರನ್ ದರ +0.526 ಆಗಿದ್ದರೆ, ನ್ಯೂಜಿಲೆಂಡ್ -0.245.
ಹರ್ಮನ್ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಮುಂಬರುವ ಎರಡು ಪಂದ್ಯಗಳನ್ನು ಹೊಂದಿದೆ. ಕಿವೀಸ್ನ ಮುಂದಿನ ಎರಡು ಪಂದ್ಯಗಳು ಸವಾಲಿನವು. ಭಾರತದ ವಿರುದ್ಧದ ನಂತರ, ಕೊನೆಯ ಲೀಗ್ ಪಂದ್ಯವನ್ನ ಇಂಗ್ಲೆಂಡ್ ವಿರುದ್ದ ಆಡಲಿದೆ, ಅತ್ತ ಇಂಗ್ಲೆಂಡ್ ಟೂರ್ನಮೆಂಟ್ನಲ್ಲಿ ಇನ್ನೂ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತವನ್ನು ಸೋಲಿಸಿದರೂ, ಸ್ಕೋರ್ ಅಂತಿಮವಾಗಿ ತಲಾ 6 ಅಂಕಗಳೊಂದಿಗೆ ಸಮನಾಗಿರಬಹುದು. ಈ ಪರಿಸ್ಥಿತಿಯಲ್ಲೂ, ಭಾರತದ ಪಾಸಿಟಿವ್ ರನ್ ರೇಟ್ ಸೆಮಿಫೈನಲ್ ಪ್ರವೇಶಿಸಲು ನೆರವಾಗಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ಹೀದರ್ ನೈಟ್ (109) ಅವರ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 288 ರನ್ ಗಳಿಸಿತು. ನೈಟ್ ಜೊತೆಗೆ, ಆ್ಯಮಿ ಜೋನ್ಸ್ (56) ಕೂಡ ಅದ್ಭುತ ಅರ್ಧಶತಕ ಗಳಿಸಿದರು. ಒಂದು ಹಂತದಲ್ಲಿ, ಇಂಗ್ಲೆಂಡ್ ಸುಲಭವಾಗಿ 300 ರನ್ಗಳ ಗಡಿ ದಾಟುತ್ತದೆ ಎಂದು ತೋರುತ್ತಿತ್ತು, ಆದರೆ ಭಾರತೀಯ ಬೌಲರ್ಗಳು ಅಂತಿಮವಾಗಿ ಚೇತರಿಸಿಕೊಂಡು ಇಂಗ್ಲಿಷ್ ತಂಡವನ್ನು 300ರ ಒಳಗೆ ಕಟ್ಟಿಹಾಕಿದರು. ಭಾರತದ ಪರ ದೀಪ್ತಿ ಶರ್ಮಾ4, ಶ್ರೀಚರಣಿ 2 ವಿಕೆಟ್ಗಳನ್ನು ಪಡೆದರು.
289 ರನ್ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಕಳಪೆ ಆರಂಭ ಪಡೆಯಿತು. ಮೊದಲ 10 ಓವರ್ಗಳಲ್ಲಿ ಪ್ರತೀಕಾ ರಾವಲ್ 6 ರನ್ ಮತ್ತು ಹರ್ಲೀನ್ ಡಿಯೋಲ್ 24 ರನ್ಗಳಿಗೆ ಔಟಾದರು. ಭಾರತ 42 ರನ್ಗಳಿಗೆ 2 ವಿಕೆಟ್ಗಳನ್ನು ಕಳೆದುಕೊಂಡಿತ್ತು. ನಂತರ ಬ್ಯಾಟಿಂಗ್ಗೆ ಇಳಿದ ನಾಯಕಿ ಹರ್ಮನ್ಪ್ರೀತ್ ಕೌರ್ (70) ಆರಂಭಿಕ ಬ್ಯಾಟ್ಸ್ಮನ್ ಸ್ಮೃತಿ ಮಂಧಾನ (88) ಅವರೊಂದಿಗೆ ಶತಕದ ಜೊತೆಯಾಟ ನಿರ್ಮಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಹರ್ಮನ್ ಔಟಾದ ಹೊರತಾಗಿಯೂ ಮಂಧಾನ ಒಂದು ತುದಿಯಲ್ಲಿ ಉತ್ತಮವಾಗಿ ಆಡುತ್ತಾ ತಂಡವನ್ನ ಗೆಲುವಿನ ಸನಿಹ ತಂದಿದ್ದರು. ಜೊತೆಗೆ ದೀಪ್ತಿ ಶರ್ಮಾ (50) ಕೂಡ ಅದ್ಭುತ ಅರ್ಧಶತಕ ಗಳಿಸಿದರು. ಆದರೆ ಮಂಧಾನ ಔಟಾದ ತಕ್ಷಣ, ಭಾರತೀಯ ಇನ್ನಿಂಗ್ಸ್ ಕುಸಿಯಿತು. ರಿಚಾ ಘೋಷ್ (8), ಅಮನ್ಜೋತ್ ಕೌರ್ 18, ಸ್ನೇಹ್ ರಾಣಾ 10 ರನ್ಗಳಿಸದರೂ ಕೂಡ ತಂಡವನ್ನ ಗೆಲುವಿನ ಗಡಿ ದಾಟಿಸಲು ವಿಫಲರಾದರು.
October 20, 2025 1:21 PM IST