Last Updated:
ಆಸ್ಟ್ರೇಲಿಯಾ ವಿರುದ್ಧ ಗಂಭೀರ್ ಅವರ ಮೂರ್ಖತನದ ನಿರ್ಧಾರಗಳಿಂದಾಗಿ ಟೀಮ್ ಇಂಡಿಯಾ ಸೋತಿದೆ ಎಂದು ಪರೋಕ್ಷವಾಗಿ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಸಮಧಾನ ವ್ಯಕ್ತಡಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸವನ್ನು (Australia Tour) ಟೀಮ್ ಇಂಡಿಯಾ ಸೋಲಿನೊಂದಿಗೆ ಆರಂಭಿಸಿದೆ. ಭಾನುವಾರ ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಡಕ್‌ವರ್ತ್ ಲೂಯಿಸ್ ವಿಧಾನದ ಮೂಲಕ ಟೀಮ್ ಇಂಡಿಯಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಮಳೆಯಿಂದಾಗಿ ಅಡಚಣೆ ಉಂಟಾದ ಪಂದ್ಯವನ್ನು 26 ಓವರ್‌ಗಳಿಗೆ ಇಳಿಸಲಾಯಿತು. ದೀರ್ಘ ವಿರಾಮದ ನಂತರ ಕಮ್ಬ್ಯಾಕ್ ಮಾಡಿದ ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ವಿಫಲರಾದರು. ನಾಯಕ ಶುಭ್ಮನ್ ಗಿಲ್ (shubman Gill) ಕೂಡ ನಿರಾಶೆ ಅನುಭವಿಸಿದರು. ಈ ಮೂವರ ವೈಫಲ್ಯದ ಜೊತೆಗೆ, ಮಳೆಯು ಟೀಮ್ ಇಂಡಿಯಾದ ಯಶಸ್ಸಿನ ಸಾಧ್ಯತೆಗಳನ್ನು ಸಹ ಹಾಳು ಮಾಡಿತು.
ಆದರೆ, ಗಂಭೀರ್ ಅವರ ಮೂರ್ಖತನದ ನಿರ್ಧಾರಗಳಿಂದಾಗಿ ಟೀಮ್ ಇಂಡಿಯಾ ಸೋತಿದೆ ಎಂದು ಪರೋಕ್ಷವಾಗಿ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಸಮಧಾನ ವ್ಯಕ್ತಡಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಮೈದಾನಕ್ಕೆ ಇಳಿದ ತಂಡದ ಸಂಯೋಜನೆಯನ್ನು ಅಶ್ವಿನ್ ಟೀಕಿಸಿದ್ದಾರೆ. ತಂಡದಲ್ಲಿ ಮೂವರು ಆಲ್‌ರೌಂಡರ್‌ಗಳು ಏಕೆ ಇದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲದೆ ಟೀಮ್ ಇಂಡಿಯಾ ಮೈದಾನ ಪ್ರವೇಶಿಸಿದ್ದು ದೊಡ್ಡ ತಪ್ಪು ಎಂದು ಅವರು ಗಂಭೀರ್ ನಿರ್ಧಾರವನ್ನ ಟೀಕಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, ಕುಲದೀಪ್ ಯಾದವ್ ಅವರನ್ನು ಅಂತಿಮ ತಂಡದಲ್ಲಿ ಇರಬೇಕೆಂದು ಸೂಚಿಸಿದರು. ‘ನಿತೀಶ್ ರೆಡ್ಡಿ ಜೊತೆಗೆ ಇಬ್ಬರು ಸ್ಪಿನ್ನರ್‌ಗಳನ್ನು ಏಕೆ ಆಡಲಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಸ್ಪಿನ್ ಆಲ್‌ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಅವರನ್ನು ಬ್ಯಾಟಿಂಗ್ ಡೆಪ್ತ್‌ಗಾಗಿ ತೆಗೆದುಕೊಳ್ಳಲಾಗಿದೆ. ಆದರೆ ಬೌಲಿಂಗ್‌ನತ್ತಲೂ ಸ್ವಲ್ಪ ಗಮನ ನೀಡಬೇಕು. ಕುಲದೀಪ್ ಯಾದವ್ ಈ ದೊಡ್ಡ ಮೈದಾನಗಳಲ್ಲಿ ಬೌಲಿಂಗ್ ಮಾಡಲು ಅವಕಾಶ ಸಿಗದಿದ್ದರೆ, ಅವರು ಬೇರೆಲ್ಲಿ ಮಾಡುತ್ತಾರೆ? ಆಸೀಸ್ ಓವರ್ ಸ್ಪಿನ್ ಹೊಂದಿದೆ, ಇದು ಬೌನ್ಸ್ ಪಡೆಯಲು ಸಹ ಸಹಾಯ ಮಾಡುತ್ತದೆ. ಕುಲದೀಪ್ ಯಾದವ್ ಅಂತಹ ಬೌಲರ್ಗಳಿಗೆ ಸೂಕ್ತವಾಗಿದೆ ಎಂದಿದ್ದಾರೆ.
ಅವರು ಬ್ಯಾಟಿಂಗ್ ಡೆಪ್ತ್‌ಗೆ ಆದ್ಯತೆ ನೀಡುತ್ತಿದ್ದರೆ, ಅದು ಬ್ಯಾಟರ್‌ಗಳಿಗೆ ಬ್ಯಾಕಪ್ ನೀಡಿದಂತಿದೆ. ಏಕೆಂದರೆ ರನ್ ಗಳಿಸುವ ಜವಾಬ್ದಾರಿ ಬ್ಯಾಟರ್‌ಗಳ ಮೇಲಿದೆ. ಆದರೆ ನೀವು ಹೆಚ್ಚುವರಿ ಬ್ಯಾಟರ್ ಅನ್ನು ಆಡಿಸುತ್ತಿದ್ದರೆ, ನಿಮಗೆ ಬ್ಯಾಟರ್‌ಗಳ ಮೇಲೆ ನಂಬಿಕೆ ಇಲ್ಲ ಎಂದರ್ಥ? ಗೆಲ್ಲಬೇಕೆಂದರೆ ಕೇವಲ ಬ್ಯಾಟರ್‌ಗಳ ಕಡೆ ಗಮನ ಮಾತ್ರವಲ್ಲ, ತಂಡದಲ್ಲಿ ಅತ್ಯುತ್ತಮ ಬೌಲರ್‌ಗಳನ್ನು ಆಡಿಸಿ. ಇದು ನನ್ನ ಸಲಹೆ. ಬ್ಯಾಟಿಂಗ್ ಡೆಪ್ತ್‌ಗೆ ಆದ್ಯತೆ ನೀಡುವ ಮೂಲಕ ತಂಡದ ಸಂಯೋಜನೆಯನ್ನು ನಿರ್ಧರಿಸಬೇಡಿ ಎಂದು ಸಲಹೆ ನೀಡಿದ್ದಾರೆ.
ತಂಡದಲ್ಲಿ ನಿಮಗೆ ಎಷ್ಟು ಆಲ್‌ರೌಂಡರ್‌ಗಳು ಇರಬೇಕು? ನಿಮ್ಮ ತಂಡದಲ್ಲಿ ಈಗಾಗಲೇ ಮೂವರು ಆಲ್‌ರೌಂಡರ್‌ಗಳಿದ್ದಾರೆ. ಒಂದು ಕಾಲದಲ್ಲಿ ತಂಡದಲ್ಲಿ ಆಲ್‌ರೌಂಡರ್ ಇರುತ್ತಿರಲೇ ಇಲ್ಲ. ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಮತ್ತು ನಿತೀಶ್ ಕುಮಾರ್ ರೂಪದಲ್ಲಿ ಮೂವರು ಆಲ್‌ರೌಂಡರ್‌ಗಳಿದ್ದಾರೆ. ಆದರೆ ಅತ್ಯುತ್ತಮ ಸ್ಪಿನ್ನರ್ ಅವಕಾಶ ಕೊಡದಿದ್ದರೆ ಎಷ್ಟು ಸರಿ? ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.
October 20, 2025 4:16 PM IST