Xavier Bartlett: ಕೊಹ್ಲಿ-ಗಿಲ್​ಗೆ ಒಂದೇ ಓವರ್​ನಲ್ಲಿ ಪೆವಿಲಿಯನ್ ಹಾದಿ ತೋರಿಸಿದ ಆಸೀಸ್ ವೇಗಿ ಯಾರು? / Who is Australian bowler Xavier Bartlett who dismissed Virat Kohli and Shubman Gill in the same over | ಕ್ರೀಡೆ

Xavier Bartlett: ಕೊಹ್ಲಿ-ಗಿಲ್​ಗೆ ಒಂದೇ ಓವರ್​ನಲ್ಲಿ ಪೆವಿಲಿಯನ್ ಹಾದಿ ತೋರಿಸಿದ ಆಸೀಸ್ ವೇಗಿ ಯಾರು? / Who is Australian bowler Xavier Bartlett who dismissed Virat Kohli and Shubman Gill in the same over | ಕ್ರೀಡೆ

Last Updated:

ಒಂದೇ ಓವರ್​​ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಸ್ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಅವರನ್ನು ಔಟ್ ಮಾಡಿದ ಆಸ್ಟ್ರೇಲಿಯಾ ವೇಗದ ಬೌಲರ್ ಕ್ಸೇವಿಯರ್ ಬಾರ್ಟ್ಲೆಟ್ ಹಿನ್ನೆಲೆ ಏನು?

Xavier Bartlett
Xavier Bartlett

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಅಡಿಲೇಡ್ (Adelaide) ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ದೀರ್ಘ ಸಮಯದ ನಂತರ ತಂಡಕ್ಕೆ ಮರಳಿರುವ ಭಾರತದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ(Virat Kohli) ಎರಡನೇ ಪಂದ್ಯದಲ್ಲೂ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ನಾಯಕ ಶುಭಮನ್ ಗಿಲ್ (Shubman Gill) ಕೂಡ ಮತ್ತೊಮ್ಮೆ ನಿರಾಶೆ ಮೂಡಿಸಿದರು. ರೋಹಿತ್ ಶರ್ಮಾ (Rohit Sharma) 73 ರನ್ ಗಳಿಸುವ ಮೂಲಕ ತಮ್ಮ ಹಳೆಯ ಬ್ಯಾಟಿಂಗ್ ಖದರ್ ತೋರಿಸಿದರು. ಒಂದು ಹಂತದಲ್ಲಿ, ಅವರು ಶತಕ ಗಳಿಸುತ್ತಾರೆಂದು ಭಾವಿಸಲಾಗಿತ್ತು. ಆದರೆ ನಂತರ ಅವರು ಮಿಚೆಲ್ ಸ್ಟಾರ್ಕ್‌ಗೆ ತಮ್ಮ ವಿಕೆಟ್ ಒಪ್ಪಿಸಿದರು. ಆದರೆ ಈ ಎಲ್ಲಾ ಹೆಸರುಗಳನ್ನು ಮೀರಿ, ಇನ್ನೂ ಒಂದು ಚರ್ಚೆಯಾಗುತ್ತಿದೆ. ಆ ಹೆಸರು ಕ್ಸೇವಿಯರ್ ಬಾರ್ಟ್ಲೆಟ್ (Xavier Bartlett).

ಆಸ್ಟ್ರೇಲಿಯಾ ವೇಗದ ಬೌಲರ್ ಕ್ಸೇವಿಯರ್ ಬಾರ್ಟ್ಲೆಟ್ ತಮ್ಮ ವೃತ್ತಿಜೀವನದ ಐದನೇ ಪಂದ್ಯವನ್ನು ಆಡುತ್ತಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಬಾರ್ಟ್ಲೆಟ್ ಉರಿ ಬೌಲಿಂಗ್ ದಾಲಿ ನಡೆಸಿದರು. ಈ ಮೂಲಕ ಅವರು ಎಲ್ಲರ ಗಮನ ಸೆಳೆದರು. ಅಷ್ಟಕ್ಕೂ ಆಸ್ಟ್ರೇಲಿಯಾ ಪರ ಮಿಂಚಿದ ಬಾರ್ಟ್ಲೆಟ್ ಯಾರು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತ ತಂಡಕ್ಕೆ ಆರಂಭಿಕ ಹಿನ್ನಡೆ

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಏಳನೇ ಓವರ್‌ನಲ್ಲಿ ನಾಯಕ ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡಿತು. ತಮ್ಮ ವೃತ್ತಿಜೀವನದ ಐದನೇ ಏಕದಿನ ಪಂದ್ಯ ಆಡುತ್ತಿದ್ದ ಬಾರ್ಟ್ಲೆಟ್, ಗಿಲ್ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾಕ್ಕೆ ಮೊದಲ ಯಶಸ್ಸನ್ನು ತಂದುಕೊಟ್ಟರು. ನಂತರ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಏಳನೇ ಓವರ್‌ನ ಐದನೇ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಔಟದರು. ಬಾರ್ಟ್ಲೆಟ್ ಅವರು ಒಂದೇ ಓವರ್‌ನಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದು ಟೀಮ್ ಇಂಡಿಯಾವನ್ನು ಕಟ್ಟಿ ಹಾಕಿದರು.

ಬಾರ್ಟ್ಲೆಟ್ ಯಾರು?

ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಅವರಂತಹ ಸ್ಟಾರ್ ಬ್ಯಾಟರ್ಸ್ ಅನ್ನು ಔಟ್ ಮಾಡಿದ ಬಾರ್ಟ್ಲೆಟ್ ಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡಬಹುದು. ಭಾರತಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವ ಬಾರ್ಟ್ಲೆಟ್, ಫೆಬ್ರವರಿ 2, 2024 ರಂದು ಮೆಲ್ಬೋರ್ನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಕ್ಸೇವಿಯರ್ ಬಾರ್ಟ್ಲೆಟ್ ಆಸ್ಟ್ರೇಲಿಯಾ ಪರ ಐದು ಏಕದಿನ ಪಂದ್ಯಗಳಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ 4.15 ರ ಎಕಾನಮಿ ದರದಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಅವರು ಎರಡು ಬಾರಿ 4 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರಡೆ. ಬಾರ್ಟ್ಲೆಟ್ 11 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಚುಟುಕು ಕ್ರಿಕೆಟ್​ನಲ್ಲಿ 7.08 ರ ಎಕಾನಮಿ ದರದಲ್ಲಿ, 13/3 ರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರವೂ ಆಡಿದ್ದಾರೆ.

ಬಿಗ್ ಬ್ಯಾಷ್‌ನಲ್ಲಿ ಬಾರ್ಟ್ಲೆಟ್ ಪ್ರದರ್ಶನ

ವರದಿಗಳ ಪ್ರಕಾರ, ಕ್ಸೇವಿಯರ್ ಬಾರ್ಟ್ಲೆಟ್ ಬಿಗ್ ಬ್ಯಾಷ್‌ ಲೀಗ್​ನಲ್ಲಿ ಬ್ರಿಸ್ಬೇನ್ ಹೀಟ್ ಪರ ಆಡುತ್ತಾರೆ. 2023-24 ಆವೃತ್ತಿಯ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದರು. ಈ ಹಿಂದೆ ಅವರು ಅಂಡರ್ 19 ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದರು. ಅವರು ಕೇವಲ 18 ವರ್ಷ ವಯಸ್ಸಿನಲ್ಲಿ ಕ್ವೀನ್ಸ್‌ಲ್ಯಾಂಡ್ ತಂಡವನ್ನು ಸೇರಿದರು. ಪ್ರಸ್ತುತ, 26 ವರ್ಷದ ಆಟಗಾರ ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.