Last Updated:
ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೀಪಾವಳಿಯ ಬಲಿಪಾಡ್ಯಮಿಯಂದು ಶ್ರೀ ಸುಬ್ರಹ್ಮಣ್ಯ ದೇವರ ಹೊರಾಂಗಣ ಉತ್ಸವಗಳು ಆರಂಭವಾಗಿ, ಸಾವಿರಾರು ಭಕ್ತರು ಪಾಲ್ಗೊಂಡು ಕೃತಾರ್ಥರಾದರು.
ದಕ್ಷಿಣ ಕನ್ನಡ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ (Kukke Subramanya) ದೀಪಾವಳಿಯ ಬಲಿಪಾಡ್ಯಮಿಯಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು ಹೊರಾಂಗಣ ಪ್ರವೇಶಿಸಿದರು. ಬಳಿಕ ದೀಪಾವಳಿ ಪ್ರಯುಕ್ತ ಶ್ರೀ ದೇವರ (Almighty) ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿತು. ಶ್ರೀ ದೇವಳದ ಅರ್ಚಕ ರಾಜೇಶ್ ನಡ್ಯಂತಿಲ್ಲಾಯ ಉತ್ಸವದ ವಿಧಿವಿಧಾನಗಳನ್ನು (Rituals) ನೆರವೇರಿಸಿದರು. ಈ ಮೂಲಕ ಶ್ರೀ ಕ್ಷೇತ್ರದಲ್ಲಿ ಶ್ರೀ ದೇವರ ಹೊರಾಂಗಣ ವರ್ಷಾವಧಿ ಉತ್ಸವಗಳು (Festival) ಆರಂಭವಾಯಿತು. ಈ ಮೊದಲು ದೇವಳದಲ್ಲಿ ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಲಕ್ಷ್ಮೀ ಪೂಜೆ ನೆರವೇರಿತು.
ದೀಪಾವಳಿಯ ಬಳಿಕ ಇನ್ನು ಶ್ರೀ ದೇವಳದಲ್ಲಿ ಶ್ರೀ ದೇವರ ಪಾಲಕಿ ಉತ್ಸವ, ಬಂಡಿ ಉತ್ಸವ ಹಾಗೂ ಮಂಟಪೋತ್ಸವ ಸೇವೆಗಳು ನಡೆಯುತ್ತದೆ. ಮುಂದೆ ಬರುವ ಲಕ್ಷ ದೀಪೋತ್ಸವ ನಂತರ ರಥಬೀದಿಯಲ್ಲಿ ರಥೋತ್ಸವಗಳು ನಡೆಯಲಿದೆ. ನಾಡಿನ ಉಳಿದ ದೇವಾಲಯಗಳಲ್ಲಿ ಪತ್ತನಾಜೆಯಂದು ಕೊನೆಯ ಉತ್ಸವವಾಗಿ ಉತ್ಸವಮೂರ್ತಿಯು ಗರ್ಭಗುಡಿಯನ್ನು ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗುತ್ತದೆ. ಆದರೆ ಕುಕ್ಕೆಯಲ್ಲಿ ಮಾತ್ರ ಜೇಷ್ಠ ಶುದ್ಧ ಷಷ್ಠಿಯಂದು ಕೊನೆಯ ಉತ್ಸವವು ನಡೆದು, ದೀಪಾವಳಿಯ ಬಲಿಪಾಡ್ಯಮಿಯಂದು ಉತ್ಸವ ಆರಂಭವಾಗುತ್ತದೆ.
ಬಲಿಪಾಡ್ಯಮಿಯ ಬುಧವಾರ ಶ್ರೀ ದೇವರ ಮಹಾಪೂಜೆಯ ಬಳಿಕ ಶ್ರೀ ದೇವರು ಹೊರಾಂಗಣ ಪ್ರವೇಶಿಸಿದರು. ನಂತರ ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಶ್ರೀ ದೇವರ ಉತ್ಸವಾಧಿಗಳು ನೆರವೇರಿತು. ಆರಂಭದಲ್ಲಿ ದೀಪಾರಾಧನೆಯುಕ್ತ ಶ್ರೀ ದೇವರ ಬಂಡಿ ರಥೋತ್ಸವ ನೆರವೇರಿತು. ನಂತರ ಭಜನೆ ಸುತ್ತು, ನಾಗಸ್ವರ, ಬ್ಯಾಂಡ್, ವಾದ್ಯಗಳನ್ನು ಒಳಗೊಂಡ ದೀಪಾರಾಧನೆಯುಕ್ತ ಪಾಲಕಿ ಉತ್ಸವ ಸಂಪನ್ನವಾಯಿತು.
ರಥೋತ್ಸವಕ್ಕೆ ಕ್ಷಣಗಣನೆ, ಕಾತರದಿಂದ ಕಾಯುತ್ತಿರುವ ಭಕ್ತರು
Dakshina Kannada,Karnataka
October 25, 2025 12:01 PM IST