CWC25: ಭಾರತ vs ಆಸ್ಟ್ರೇಲಿಯಾ ನಡುವೆ ಮತ್ತೊಂದು ಮಹಾಕದನ; ಹೀಗಿದೆ ಸೆಮಿಫೈನಲ್ ವೇಳಾಪಟ್ಟಿ / ICC Women’s World Cup 2025 semi-final match schedule released | ಕ್ರೀಡೆ

CWC25: ಭಾರತ vs ಆಸ್ಟ್ರೇಲಿಯಾ ನಡುವೆ ಮತ್ತೊಂದು ಮಹಾಕದನ; ಹೀಗಿದೆ ಸೆಮಿಫೈನಲ್ ವೇಳಾಪಟ್ಟಿ / ICC Women’s World Cup 2025 semi-final match schedule released | ಕ್ರೀಡೆ

Last Updated:

ಐಸಿಸಿ ಮಹಿಳಾ ವಿಶ್ವಕಪ್ 2025 ಸೆಮಿಫೈನಲ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

India vs Australia womens
India vs Australia womens

ಐಸಿಸಿ (ICC) ಮಹಿಳಾ ಕ್ರಿಕೆಟ್ (Cricket) ವಿಶ್ವಕಪ್ (World Cup) 2025 ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ (Australia) ಅಗ್ರ ಸ್ಥಾನವನ್ನು ಖಚಿತಪಡಿಸಿಕೊಂಡಿದೆ . ಈ ಪಂದ್ಯದ ನಂತರ ಮಹಿಳಾ ವಿಶ್ವಕಪ್ 2025 ರ ಸೆಮಿಫೈನಲ್ (Semi-final) ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ (England), ಮತ್ತು ದಕ್ಷಿಣ ಆಫ್ರಿಕಾ ವನಿತೆಯರ ತಂಡಗಳು ಐಸಿಸಿ ಮಹಿಳಾ ವಿಶ್ವಕಪ್ 2025 ರ ಸೆಮಿಫೈನಲ್‌ಗೆ ತಲುಪಿವೆ.

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2025 ರ 26ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಆಸ್ಟ್ರೇಲಿಯಾ 7 ವಿಕೆಟ್‌ಗಳ ಜಯ ಸಾಧಿಸಿತು. ದಕ್ಷಿಣ ಆಫ್ರಿಕಾ 24 ಓವರ್‌ಗಳಲ್ಲಿ 97 ರನ್‌ಗಳಿಗೆ ಆಲೌಟಾಯಿತು. ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 16.5 ಓವರ್‌ಗಳಲ್ಲಿ ತಲುಪಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 7 ಪಂದ್ಯಗಳಲ್ಲಿ 13 ಅಂಕಗಳೊಂದಿಗೆ ಲೀಗ್ ಹಂತದಲ್ಲಿ ಅಜೇಯರಾಗಿ ನಂ.1 ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ ವನಿತೆಯರ ತಂಡವು 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಮತ್ತು ಭಾರತ ತಂಡಗಳು ತಲಾ ಒಂದು ಪಂದ್ಯ ಬಾಕಿ ಇರುವಂತೆ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಸೆಮಿಸ್ ಪಂದ್ಯಗಳು

ಅಕ್ಟೋಬರ್ 30 ರಂದು ನವಿ ಮುಂಬೈನ ಡಾ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ 2025 ರ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹರ್ಮನ್​ಪ್ರೀತ್ ಕೌರ್ ಮುನ್ನಡೆಸುತ್ತಿರುವ ಭಾರತ ಟೀಮ್ ಇಂಡಿಯಾ ಎದುರಿಸಲಿದೆ. ಇದಕ್ಕೂ ಮುನ್ನ ಅಕ್ಟೋಬರ್ 29 ರಂದು ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಎರಡೂ ಸೆಮಿಫೈನಲ್‌ಗಳಲ್ಲಿ ಗೆದ್ದ ತಂಡಗಳು ನವೆಂಬರ್ 2 ರಂದು ನಡೆಯಲಿರುವ ವಿಶ್ವಕಪ್ ಫೈನಲ್​ನಲ್ಲಿ ಆಡಲಿದ್ದಾರೆ.

ಟ್ರೋಫಿ ಮೇಲೆ ಕಣ್ಣು

ತವರಿನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ನಲ್ಲಿ ಫೈನಲ್ ತಲುಪುವ ಪ್ರಯತ್ನದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆಯಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಗೆಲ್ಲುವ ಪಂದ್ಯವನ್ನು ಭಾರತ ಸೋತಿದೆ. ಈ ಸೋಲಿನ ಸೇಡಿಗಾಗಿ ಭಾರತ ಸಜ್ಜಾಗುತ್ತಿದೆ. ವಿಶ್ವಕಪ್ 2017 ರ ನಂತರ ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು.

ಐಸಿಸಿ ಮಹಿಳಾ ವಿಶ್ವಕಪ್ 2025 ಸೆಮಿಫೈನಲ್ ವೇಳಾಪಟ್ಟಿ

ಮೊದಲ ಸೆಮಿಫೈನಲ್ – 29 ಅಕ್ಟೋಬರ್ 2025: ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಗುವಾಹಟಿ

ಎರಡನೇ ಸೆಮಿಫೈನಲ್ – 30 ಅಕ್ಟೋಬರ್ 2025: ಆಸ್ಟ್ರೇಲಿಯಾ vs ಭಾರತ, ನವಿ ಮುಂಬೈ

ಫೈನಲ್- 2 ನವೆಂಬರ್ 2025: ಎರಡು ಸೆಮಿಫೈನಲ್‌ಗಳಲ್ಲಿ ಗೆದ್ದ ತಂಡಗಳು