Shreyas Iyer: ಈಗ ಹೇಗಿದ್ದಾರೆ ಶ್ರೇಯರ್ ಅಯ್ಯರ್? ಸಿಡ್ನಿಯಿಂದ ಬಂತು ಬಿಗ್ ಅಪ್‌ಡೇಟ್ಸ್ / Big updates on Team India star batter Shreyas Iyers health from Sydney | ಕ್ರೀಡೆ

Shreyas Iyer: ಈಗ ಹೇಗಿದ್ದಾರೆ ಶ್ರೇಯರ್ ಅಯ್ಯರ್? ಸಿಡ್ನಿಯಿಂದ ಬಂತು ಬಿಗ್ ಅಪ್‌ಡೇಟ್ಸ್ / Big updates on Team India star batter Shreyas Iyers health from Sydney | ಕ್ರೀಡೆ

Last Updated:

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಂಭೀರವಾಗಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಸಿಡ್ನಿಯಿಂದ ಶ್ರೇಯಸ್ ಅವರ ಗಾಯದ ಬಗ್ಗೆ ಬಿಗ್ ಅಪ್‌ಡೇಟ್ಸ್ ಬಂದಿದೆ.

Shreyas Iyers
Shreyas Iyers

ಟೀಮ್ ಇಂಡಿಯಾ(Team India)ದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್(Shreyas Iyers) ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ(India vs Australia)ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಅಯ್ಯರ್ ಗಂಭೀರ ಗಾಯಗೊಂಡಿದ್ದರು. ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಕ್ಯಾಚ್ ಹಿಡಿಯುವಾಗ ಘಟನೆ ನಡೆದಿತ್ತು. ಪ್ರಸ್ತುತ ಐಸಿಯು(ICU)ನಲ್ಲಿರುವ ಶ್ರೇಯಸ್ ಅಯ್ಯರ್ ಚೇತರಿಕೆಗಾಗಿ ಟೀಮ್ ಇಂಡಿಯಾ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇದರ ನಡುವೆ ಆಸ್ಟ್ರೇಲಿಯಾದ ಸಿಡ್ನಿ(Sydney)ಯಿಂದ ಶ್ರೇಯಸ್ ಅಯ್ಯರ್ ಅವರ ಆರೋಗ್ಯದ ಬಗ್ಗೆ ಬಿಗ್ ಅಪ್​ಡೇಟ್ಸ್ ಹೊರಬಿದ್ದಿದೆ.

ವರದಿಗಳ ಪ್ರಕಾರ, ಶ್ರೇಯಸ್ ಅಯ್ಯರ್ ಅವರ ಸ್ಥಿತಿ ಗಂಭೀರವಾಗಿದೆ. ಆದರೆ ಅವರ ಆರೋಗ್ಯ ಸುಧಾರಿಸಿದೆ. ಈಗಾಗಲೇ ಅಯ್ಯರ್ ಅವರನ್ನು ಐಸಿಯುನಿಂದ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಸಿಡ್ನಿಯಲ್ಲಿಯೇ ಬಿಸಿಸಿಐ ವೈದ್ಯಕೀಯ ತಂಡವಿದ್ದು, ಶ್ರೇಯಸ್ ಅವರ ಗಾಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಶ್ರೇಯಸ್​ ಅಯ್ಯರ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಸಿಡ್ನಿಯಲ್ಲಿಯೇ ಇರಲಿದ್ದು, ಇನ್ನೂ ಕೆಲವು ದಿನಗಳವರೆಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ವರದಿಗಳಾಗಿವೆ. ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಕ್ಯಾಚ್ ಹಿಡಿಯುವಾಗ ಗಂಭೀರವಾಗಿ ಗಾಯಗೊಂಡಿದ್ದರು. ಪರಿಣಾಮ ಪಂದ್ಯದ ಅರ್ಧದಲ್ಲೇ ಮೈದಾನ ತೊರೆದಿದ್ದರು.

ಸಿಡ್ನಿಗೆ ಅಯ್ಯರ್ ಪೋಷಕರ ಪ್ರಯಾಣ

ಶ್ರೇಯಸ್ ಅಯ್ಯರ್ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗಾಗಿ ಅಯ್ಯರ್ ಪೋಷಕರು ಆತಂಕಗೊಂಡಿದ್ದರು. ಹೀಗಾಗಿ ಕುಟುಂಬಸ್ಥರು ಸಿಡ್ನಿಗೆ ಹೋಗಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೀಸಾ ಔಪಚಾರಿಕತೆಗಳನ್ನು ನೋಡಿಕೊಂಡಿತ್ತು. ಸಂತೋಷ್ ಅಯ್ಯರ್ ಮತ್ತು ರೋಹಿಣಿ ಅಯ್ಯರ್ ಮುಂಬೈನಿಂದ ಸಿಡ್ನಿಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.