IND vs AUS: 3ನೇ ಪಂದ್ಯಕ್ಕೆ ಅರ್ಷದೀಪ್ ಕಮ್​ಬ್ಯಾಕ್ ಪಕ್ಕಾ! ಆ ಇಬ್ಬರಿಗೆ ಗೇಟ್​ಪಾಸ್ ಸಾಧ್ಯತೆ; ಹೀಗಿರಲಿದೆ ಭಾರತದ ಪ್ಲೇಯಿಂಗ್ XI| Arshdeep Singh Replaces Harshit Rana, Sanju Samson OUT: India’s Aggressive XI for 3rd T20I Against Australia | ಕ್ರೀಡೆ

IND vs AUS: 3ನೇ ಪಂದ್ಯಕ್ಕೆ ಅರ್ಷದೀಪ್ ಕಮ್​ಬ್ಯಾಕ್ ಪಕ್ಕಾ! ಆ ಇಬ್ಬರಿಗೆ ಗೇಟ್​ಪಾಸ್ ಸಾಧ್ಯತೆ; ಹೀಗಿರಲಿದೆ ಭಾರತದ ಪ್ಲೇಯಿಂಗ್ XI| Arshdeep Singh Replaces Harshit Rana, Sanju Samson OUT: India’s Aggressive XI for 3rd T20I Against Australia | ಕ್ರೀಡೆ

Last Updated:

ಎಂಸಿಜಿಯಲ್ಲಿ ಭಾರತದ ಬ್ಯಾಟಿಂಗ್ ಬಳಕ ಹೀನಾಯವಾಗಿ ವಿಫಲವಾಯಿತು ಮತ್ತು ಇಡೀ ತಂಡವು ಕೇವಲ 125 ರನ್ ಗಳಿಗೆ ಆಲೌಟ್ ಆಯಿತು. ಇದರಿಂದ ತಂಡವು ನಾಲ್ಕು ವಿಕೆಟ್ ಗಳಿಂದ ಸೋಲನ್ನು ಎದುರಿಸಬೇಕಾಯಿತು. ಸರಣಿ ಗೆಲ್ಲಬೇಕೆಂದರೆ ನಾಳೆ ನಡೆಯುವ ಪಂದ್ಯವನ್ನ ಗೆಲ್ಲಲೇಬೇಕಾಗಿದೆ.

ಭಾರತ ತಂಡ
ಭಾರತ ತಂಡ

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ (MCG) ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ (India vs Australia) ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತು. ಈ ಸೋಲಿನಿಂದಾಗಿ ಭಾರತಕ್ಕೆ ಸರಣಿ ಗೆಲ್ಲಲು ಕೊನೆಯ ಅವಕಾಶವಿದೆ. ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯದಲ್ಲಿ ಆತಿಥೇಯ ತಂಡ ಗೆದ್ದರೆ ಏಕದಿನ ಸರಣಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತ ಕಳೆದುಕೊಳ್ಳಲಿದೆ. ಮಳೆಯಿಂದಾಗಿ ಮೊದಲ ಪಂದ್ಯವನ್ನು ರದ್ದುಗೊಳಿಸಲಾಗಿದ್ದು, ಸರಣಿ ಗೆಲ್ಲಲು ಭಾರತ ಉಳಿದ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿದೆ.

ಭಾರತದ ಕಳಪೆ ಬ್ಯಾಟಿಂಗ್

ಎಂಸಿಜಿಯಲ್ಲಿ ಭಾರತದ ಬ್ಯಾಟಿಂಗ್ ಬಳಕ ಹೀನಾಯವಾಗಿ ವಿಫಲವಾಯಿತು ಮತ್ತು ಇಡೀ ತಂಡವು ಕೇವಲ 125 ರನ್ ಗಳಿಗೆ ಆಲೌಟ್ ಆಯಿತು. ಇದರಿಂದ ತಂಡವು ನಾಲ್ಕು ವಿಕೆಟ್ ಗಳಿಂದ ಸೋಲನ್ನು ಎದುರಿಸಬೇಕಾಯಿತು. ಅಭಿಷೇಕ್ ಶರ್ಮಾ 68 ರನ್ ಗಳ ಇನ್ನಿಂಗ್ಸ್ ಆಡದಿದ್ದರೆ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು. ಮೂರನೇ ಟಿ 20 ಪಂದ್ಯದಲ್ಲಿ ಭಾರತ ಕೆಲವು ಬದಲಾವಣೆಗಳನ್ನು ಮಾಡಬಹುದು. ಹರ್ಷಿತ್ ರಾಣಾ ಬ್ಯಾಟ್ ನಿಂದ ಉತ್ತಮ ಪ್ರದರ್ಶನ ನೀಡಿದರು ಮತ್ತು 35 ರನ್ ಗಳಿಸಿ, ಅವರು ಬೌಲಿಂಗ್ ನಲ್ಲಿ ದುಬಾರಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದರು. ಅವರು ಎರಡು ಓವರ್ ಗಳಲ್ಲಿ 27 ರನ್ ನೀಡಿದರು. ಅವರ ಬದಲಿಗೆ ವಾಷಿಂಗ್ಟನ್ ಸುಂದರ್​ ಅಥವಾ ಅರ್ಷದೀಪ್​ ಸಿಂಗ್​ಗೆ ಅವಕಾಶ ನೀಡಬಹುದು.

ಸಂಜು-ರಾಣಾ ಡೌಟ್

ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದಿದ್ದರು. ಆದರೆ ಅವರು ಅವಕಾಶವನ್ನು ಕಳೆದುಕೊಂಡರು. ಏಷ್ಯಾಕಪ್ ನಲ್ಲಿ ಅವರ ಕಳಪೆ ಪ್ರದರ್ಶನದಿಂದ ಅವರ ಸ್ಥಾನವು ಅಪಾಯದಲ್ಲಿದೆ. ಮೂರನೇ ಟಿ 20 ಪಂದ್ಯದಲ್ಲಿ ಜಿತೇಶ್ ಶರ್ಮಾಗೆ ಅವಕಾಶ ನೀಡಿದರೆ ಅಚ್ಚರಿ ಇಲ್ಲ. ಸರಣಿಯನ್ನು ಉಳಿಸಲು ಕೋಚ್ ಗೌತಮ್ ಗಂಭೀರ್ ಮತ್ತು ಸೂರ್ಯಕುಮಾರ್ ಯಾದವ್ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮೂರನೇ ಪಂದ್ಯವನ್ನು ಗೆಲ್ಲುವುದು ಭಾರತಕ್ಕೆ ಬಹಳ ಮುಖ್ಯವಾಗಿದೆ.

ಆಸ್ಟ್ರೇಲಿಯಾಗಿರಲ್ಲ ಹೇಜಲ್​ವುಡ್ ಸೇವೆ

ಅತ್ತ ಆಸ್ಟ್ರೇಲಿಯಾ ತಂಡ ಕೂಡ ತಂಡದ ಟಾಪ್ ಬೌಲರ್​ ಜೋಶ್ ಹೇಜಲ್​ವುಡ್​ ಸೇವೆ ಕಳೆದುಕೊಳ್ಳಲಿದೆ. ಕೊನೆಯ ಮೂರು ಪಮದ್ಯಗಳಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದೇ ತಿಂಗಳ ಕೊನೆಯಿಂದ ಆ್ಯಷಸ್ ಟೆಸ್ಟ್ ಸರಣಿ ಇರುವುದರಿಂದ ಹೇಜಲ್​ವಡ್​ ತಂಡದಿಂದ ಹೊರಗುಳಿಯಲಿದ್ದಾರೆ. ಅವರ ಬದಲಿಗೆ 3ನೇ ಪಂದ್ಯದಲ್ಲಿ ಸೀನ್ ಅಬಾಟ್ ಅಥವಾ ಮಹಿಲ್ ಬಿಯರ್ಡ್​ಮನ್ ಆಡುವ ಸಾಧ್ಯತೆ ಇದೆ.

ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI

ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ಜಿತೇಶ್ ಶರ್ಮಾ/ಸಂಜು ಸ್ಯಾಮ್ಸನ್), ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್/ ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷ್ದೀಪ್ ಸಿಂಗ್/ ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ.