Dakshina Kananda: ಮಂಗಳೂರು ಸ್ಮಾರ್ಟ್​​ ಸಿಟಿ ಹೆಸರಲ್ಲಿ ಸುಲಿಗೆ; ಪಾರ್ಕಿಂಗ್​ಗೆ ಶುಲ್ಕ, ಜನರಿಂದ ಲೂಟಿ! | Mangaluru Kadri Park road FASTag toll loot exposed Dakshina Kannada | ದಕ್ಷಿಣ ಕನ್ನಡ

Dakshina Kananda: ಮಂಗಳೂರು ಸ್ಮಾರ್ಟ್​​ ಸಿಟಿ ಹೆಸರಲ್ಲಿ ಸುಲಿಗೆ; ಪಾರ್ಕಿಂಗ್​ಗೆ ಶುಲ್ಕ, ಜನರಿಂದ ಲೂಟಿ! | Mangaluru Kadri Park road FASTag toll loot exposed Dakshina Kannada | ದಕ್ಷಿಣ ಕನ್ನಡ

Last Updated:

ಕದ್ರಿ ಪಾರ್ಕ್‌ಗೆ ಎಂಟ್ರಿಯಾಗುವ ಎರಡೂ ಕಡೆಗಳಲ್ಲಿ ಅತ್ಯಾಧುನಿಕ ಆಟೋಮೆಟಿಕ್‌ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾ ಅಳವಡಿಸಿದ್ದಾರೆ. ಈ ರಸ್ತೆಯಲ್ಲಿ 5 ನಿಮಿಷದೊಳಗೆ ಪಾಸ್‌ ಆಗದೇ ಇದ್ದಲ್ಲಿ ಫಾಸ್ಟ್‌ ಟ್ಯಾಗ್‌ ಮೂಲಕ ಹಣ ಕಟ್‌ ಮಾಡಲಿದ್ದಾರೆ.

ಕದ್ರಿ ಪಾರ್ಕ್​ ರಸ್ತೆಯಲ್ಲಿ ಟೋಲ್​ಗೆ ಚಿಂತನೆ
ಕದ್ರಿ ಪಾರ್ಕ್​ ರಸ್ತೆಯಲ್ಲಿ ಟೋಲ್​ಗೆ ಚಿಂತನೆ

ಮಂಗಳೂರು: ಮಂಗಳೂರು ನಗರದಲ್ಲಿ (Mangaluru) ಸ್ಮಾರ್ಟ್ ಸಿಟಿ ಹೆಸರಲ್ಲಿ (Smart City) ಸುಲಿಗೆ ಮುಂದುವರಿದಿದೆ. ಸ್ಮಾರ್ಟ್ ಸಿಟಿ ಹೆಸರಲ್ಲಿ ಹೆದ್ದಾರಿ ಬಳಿಕ ಈಗ ನಗರದ ರಸ್ತೆಗೂ ಟೋಲ್ (Toll) ಅಳವಡಿಕೆಗೆ ಮುಂದಾಗಿದ್ದಾರೆ. ಕದ್ರಿ ಪಾರ್ಕ್‌ನ (Kadri Park) ಒಂದು ಕೀಲೋ ಮೀಟರ್ ರಸ್ತೆಯಲ್ಲಿ ಹತ್ತು ನಿಮಿಷ ನಿಂತರೆ ಸಾಕು ಫಾಸ್ಟ್ ಟ್ಯಾಗ್ (FASTag) ನಿಂದ 50 ರೂಪಾಯಿ ದರ ಕಡಿತವಾಗಲಿದೆ.

ಹೆದ್ದಾರಿಯಲ್ಲಿ ಅಲ್ಲ, ಸಿಟಿ ಒಳಗೂ ಬೀಳುತ್ತೆ ಟೋಲ್!

ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡೋದು ಅಂದ್ರೆ ಇದೇ ನೋಡಿ. ಅಭಿವೃದ್ಧಿ ಅಂದ್ರೆ ನಾಲ್ಕು ಜನರಿಗೆ ಅನುಕೂಲವಾ ಆಗುವಂತಿರ್ಬೇಕು. ಆದ್ರೆ, ಮಂಗಳೂರಲ್ಲಿ ಅಭಿವೃದ್ಧಿ ಹೆಸರಲ್ಲಿ ಭರ್ಜರಿ ಲೂಟಿಗೆಳೆದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಹಾಕೋದನ್ನ ನೋಡಿದ್ದೇವೆ. ಆದ್ರೆ, ಮಂಗಳೂರಿನ ಸಿಟಿಯೊಳಗೆ ಟೋಲ್‌ ಬರೆ ಹಾಕ್ತಿದ್ದಾರೆ. ಐದೇ ಐದು ನಿಮಿಷದೊಳಗೆ ರಸ್ತೆ ಪಾಸ್‌ ಆಗದಿದ್ರೆ 50 ರೂಪಾಯಿ ದಂಡ ಹಾಕಲಿದ್ದಾರೆ.

ಪಾರ್ಕಿಂಗ್‌ಗೆ ಶುಲ್ಕ, ಸ್ಮಾರ್ಟ್ ಸಿಟಿ ಹೆಸರಲ್ಲಿ ಲೂಟಿ!

ಮಂಗಳೂರಿನ ಕದ್ರಿ ಪಾರ್ಕ್ ರಸ್ತೆಯಲ್ಲಿ ಟೋಲ್ ಶುಲ್ಕಕ್ಕೆ ಚಿಂತನೆ ನಡೆಸಿದ್ದಾರೆ. ಯಾಕಂದ್ರೆ, ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ 12 ಕೋಟಿ ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿ ಮಾಡ್ತಿದ್ದಾರೆ. ಈ ರಸ್ತೆಯಲ್ಲಿ ಬರೋ ಅಂಗಡಿಗಳನ್ನ ನಿರ್ವಹಿಸಲು ಟೆಂಡರ್‌ ಕರೆಯಲಾಗಿದ್ದು, ಅಮರ್‌ ಇನ್‌ಫ್ರಾ ಕಂಪನಿ ರಸ್ತೆ ಮತ್ತು ಪಾರ್ಕ್‌ನ್ನ ಅಭಿವೃದ್ಧಿ ಮಾಡ್ತಿದೆ. ಈ ರಸ್ತೆಯಲ್ಲಿ 5 ನಿಮಿಷಕ್ಕಿಂತ ಹೆಚ್ಚು ಕಾಲ ಇದ್ರೆ 50 ಕಟ್ ಆಗುತ್ತೆ. ಕದ್ರಿ ಪಾರ್ಕ್‌ಗೆ ಎಂಟ್ರಿಯಾಗುವ ಎರಡೂ ಕಡೆಗಳಲ್ಲಿ ಅತ್ಯಾಧುನಿಕ ಆಟೋಮೆಟಿಕ್‌ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾ ಅಳವಡಿಸಿದ್ದಾರೆ. ಈ ರಸ್ತೆಯಲ್ಲಿ 5 ನಿಮಿಷದೊಳಗೆ ಪಾಸ್‌ ಆಗದೇ ಇದ್ದಲ್ಲಿ ಫಾಸ್ಟ್‌ ಟ್ಯಾಗ್‌ ಮೂಲಕ ಹಣ ಕಟ್‌ ಮಾಡಲಿದ್ದಾರೆ.

ಈ ಬಗ್ಗೆ ನ್ಯೂಸ್18 ನೊಂದಿಗೆ ಮಾತನಾಡಿರುವ ಮಂಗಳೂರು ಸ್ಮಾಟ್ ಸಿಟಿ ಎಂ.ಡಿ ಅರುಣ್ ಪ್ರಭ, ಇದು ಟೋಲ್ ವಿಚಾರ ಅಲ್ಲ. ಎಲ್ಲಾ ಮಾಹಿತಿ ಕಲೆ ಹಾಕಲು ಎಎಂಪಿಆರ್ ಕ್ಯಾಮೆರಾ ಬಳಕೆ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.

ಜನರ ಹಣದ ಸುಲಿಗೆಗೆ ಇಳಿದಿರೋ ಅಧಿಕಾರಿಗಳ ವಿರುದ್ಧ ಜನ ಕಿಡಿಕಾರ್ತಿದ್ದಾರೆ. ಕದ್ರಿ ಪಾರ್ಕ್‌ ಹೆಸ್ರಲ್ಲಿ ಜನರ ಹಣವನ್ನ ಕೊಳ್ಳೆ ಹೊಡೀತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಅಚ್ಚರಿಯ ವಿಷ್ಯ ಅಂದ್ರೆ ಈ ಪಾರ್ಕ್‌ನಲ್ಲಿ ಫೋಟೋಗೆ ₹500 ರೂಪಾಯಿ ಫಿಕ್ಸ್‌ ಮಾಡಿದ್ರೆ ವಿಡಿಯೋ ಚಿತ್ರೀಕರಣಕ್ಕೆ 5000 ನಿಗದಿ ಮಾಡಲಾಗಿದೆ.

ಈ ಬಗ್ಗೆ ನ್ಯೂಸ್18 ನೊಂದಿಗೆ ಮಾತನಾಡಿರುವ ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್, ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪಾವತಿ ಮಾಡುತ್ತಿದ್ದೇವೆ. ಆದರೆ ಈಗ ನಗರದ ಒಳಗೂ ಪಾರ್ಕೆ ರಸ್ತೆಯಲ್ಲಿ ಟೋಲ್ ನೀಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.