RSS: ಬೆಂಕಿ ಉಗುಳುವವರ ಕಡೆಗಣಿಸಿ ದಲಿತರ ಮನೆ ʼದೀಪʼವಾದ ಆರ್‌.ಎಸ್‌.ಎಸ್!‌ ಸಮಾಜಕ್ಕೆ ಉತ್ತರವಾಯ್ತು ಸಹಭೋಜನ!! | RSS celebrated Deepavali with Dalit families | ದಕ್ಷಿಣ ಕನ್ನಡ

RSS: ಬೆಂಕಿ ಉಗುಳುವವರ ಕಡೆಗಣಿಸಿ ದಲಿತರ ಮನೆ ʼದೀಪʼವಾದ ಆರ್‌.ಎಸ್‌.ಎಸ್!‌ ಸಮಾಜಕ್ಕೆ ಉತ್ತರವಾಯ್ತು ಸಹಭೋಜನ!! | RSS celebrated Deepavali with Dalit families | ದಕ್ಷಿಣ ಕನ್ನಡ

Last Updated:

ಪುತ್ತೂರು ಮಣ್ಣಾಪು ಕೊರಗಜ್ಜ ಸನ್ನಿಧಿಯಲ್ಲಿ RSS ಆಯೋಜಿಸಿದ ತುಡಾರ್ ಪರ್ಬದ ದೀಪಾವಳಿ ಕಾರ್ಯಕ್ರಮದಲ್ಲಿ ದಲಿತ ಕುಟುಂಬಗಳು, ಮಹಾಲಿಂಗೇಶ್ವರ ದೇವಾಲಯ, ಡಾ. ರವೀಶ್ ಪಡುಮಲೆ ಭಾಗವಹಿಸಿದರು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ರಾಜ್ಯದಲ್ಲಿ (State) ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದೆ. ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸುವ ಪ್ರಯತ್ನಗಳೂ ನಡೆಯುತ್ತಿದೆ. ಎಲ್ಲಾ ವಿರೋಧಗಳ (Oppose) ನಡುವೆ ರಾಷ್ಟ್ರೀಯ ಸ್ವಯಂಸೇವಕ ಸಂಘ ದೀಪಾವಳಿಯ ಸಂಭ್ರಮದ ದಿನಗಳಲ್ಲಿ ತುಡಾರ್ (Tudar Parba) ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ.

ಕೊರಗಜ್ಜನ ಸನ್ನಿಧಿಯಲ್ಲಿ ಬೆಳಗಿದ ದಲಿತರ ಮನೆ ದೀಪಗಳು

ದೀಪಾವಳಿಯ ಅಂಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ದಲಿತ ಕುಟುಂಬಗಳನ್ನು ಸೇರಿಸಿಕೊಂಡು ಈ ತುಡಾರ್ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಬಾರಿಯ ಕಾರ್ಯಕ್ರಮವನ್ನು ಪುತ್ತೂರು ನಗರದ ಪ್ರಸಿದ್ಧ ಕ್ಷೇತ್ರ ಮಣ್ಣಾಪು ಕೊರಗಜ್ಜ ಸನ್ನಿಧಿಯಲ್ಲಿ ಆಯೋಜಿಸಲಾಗಿತ್ತು. ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಐದು ವಿವಿಧ ಭಾಗಗಳಿಂದ ಬಂದ ದಲಿತ ಬಂಧುಗಳು ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವಸ್ಥಾನದ ಅರ್ಚಕರು ದೀಪವನ್ನು ದಲಿತ ಬಂಧುಗಳಿಗೆ ಹಸ್ತಾಂತರಿಸಿದ್ದರು.

ದೈವ ನರ್ತಕರು ಹೇಳಿದ್ದೇನು?

ಮಣ್ಣಾಪು ಕ್ಷೇತ್ರದಲ್ಲಿ ಪೂಜೆಯ ಜೊತೆ ತುಳಸಿ ಹಬ್ಬವನ್ನು ತುಡಾರ್ ಕಾರ್ಯಕ್ರಮದ ಅಂಗವಾಗಿ ಆಚರಿಸಲಾಯಿತು. ತುಡಾರ್ ಕಾರ್ಯಕ್ರಮದಲ್ಲಿ ದೀಪಾವಳಿ ಆಚರಣೆಯ ಜೊತೆಗೆ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿಯ ಉಪನ್ಯಾಸಕರಾಗಿ ಖ್ಯಾತ ದೈವನರ್ತಕ ಡಾ. ರವೀಶ್ ಪಡುಮಲೆ ನೀಡಿದ್ದಾರೆ.

ಗಮನ ಸೆಳೆದ ಸಹಭೋಜನ ಕಾರ್ಯಕ್ರಮ

ಇದನ್ನೂ ಓದಿ: Badminton Tournament: ಮಂಗಳೂರಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ, ಸ್ಪರ್ಧೆಯಲ್ಲಿದ್ರು 12 ರಾಷ್ಟ್ರಗಳ ಆಟಗಾರರು!

ನಮ್ಮಲ್ಲಿರುವ ಮೇಲು ಕೀಳು ಭಾವನೆ ಮನಸ್ಸಿನಿಂದ ತೆಗೆದು ಹಾಕಬೇಕು. ಭಾರತಾಂಬೆಯ ಮಡಿಲಲ್ಲಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ಮಹಾಲಿಂಗೇಶ್ವರ ದೇವರ ನಡೆಯಿಂದ ತಂದಿರುವ ತುಡಾರ್ ನಮ್ಮ ಸಮಾಜದ ಎಲ್ಲರ ಮನೆಯಲ್ಲಿ ಬೆಳಗಬೇಕು. ನಾವೆಲ್ಲರೂ ಸಮಾನತೆಯಿಂದ ಸುಂದರ ಸಮಾಜ ನಿರ್ಮಿಸಿದಲ್ಲಿ, ಭಾರತವು ವಿಶ್ವ ಗುರುವಾಗುತ್ತದೆ ಎಂದು‌ ಅವರು ಉಪನ್ಯಾಸದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಮರಸ್ಯ ಪ್ರಾಂತ್ಯ ಸಂಯೋಜಕರಾಗಿರುವ ಶ್ರೀ ಲಕ್ಷ್ಮಿ ನಾರಾಯಣರವರು ದೀಪಾವಳಿ ಹಬ್ಬದ ವಿಶೇಷತೆಯನ್ನು ತಿಳಿಸಿದರು. ಕಾರ್ಯಕ್ರಮದ ಬಳಿಕ ಎಲ್ಲರೂ ಸಹಭೋಜನ ಮಾಡಿ ಸಮಾನತೆಯನ್ನು ಸಾರಿದರು.