Last Updated:
ಪಂಜಿಬೈಲು ಗ್ರಾಮದಲ್ಲಿ ಮನೆಗಳು ಕೇರಳದಲ್ಲಿ, ತೋಟಗಳು ಕರ್ನಾಟಕದಲ್ಲಿ; ಜನರು ಎರಡೂ ರಾಜ್ಯದ ಸವಲತ್ತುಗಳನ್ನು ಪಡೆಯುತ್ತಾರೆ, ಆದರೆ ಭಾಷೆ, ನೆಲ, ನೀರಿನ ವಿವಾದ ಇಲ್ಲ.
ದಕ್ಷಿಣ ಕನ್ನಡ: ಭಾಷಾವಾರು ಪ್ರಾಂತೀಯ ರಚನೆಯ ಬಳಿಕ ರಾಜ್ಯ ರಾಜ್ಯಗಳ ನಡುವೆ ಗಡಿ ವಿವಾದ, ಭಾಷೆ ವಿವಾದಗಳು (Dispute) ನಡೆಯೋದು ಸಾಮಾನ್ಯವಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಭಾಷೆ, ನೀರು, ಭೂಮಿ ವಿವಾದವಿದ್ದರೆ, ಗೋವಾ (Goa) ಜೊತೆಗೂ ನೀರಿನ (Water) ವಿವಾದವಿದೆ. ತಮಿಳುನಾಡಿನ ಜೊತೆಗೆ ನೀರಿನ ವಿವಾದವಿದೆ, ಕೇರಳದ ಜೊತೆಗೆ ಭಾಷೆ (Language) ಕುರಿತ ವಿರೋಧವಿದೆ.
ಈ ನಡುವೆ ಗಡಿಭಾಗದ ಜನರಲ್ಲಿ ನಿಜಕ್ಕೂ ಈ ರೀತಿಯ ವಿವಾದಗಳಿವೆಯೇ ಎಂದು ವಿಶ್ಲೇಷಿಸಿದಾಗ ಇಲ್ಲ ಎನ್ನುವ ಉತ್ತರವೇ ಸಾಮಾನ್ಯವಾಗಿ ಸಿಗುತ್ತದೆ. ಕೆಲವು ಗಡಿಗಳಲ್ಲಿ ಮನೆ ಒಂದು ರಾಜ್ಯದಲ್ಲಿದ್ದರೆ, ಮನೆಯ ಅಂಗಳ ಇನ್ನೊಂದು ರಾಜ್ಯದಲ್ಲಿದೆ. ಹೌದು ಇಂತಹದೊಂದು ಸ್ವಾರಸ್ಯಕರ ಸಂಗತಿಗಳು ಕರ್ನಾಟಕ-ಕೇರಳ ಗಡಿಭಾಗದಲ್ಲಿ ಬಹುತೇಕ ಕಡೆಗಳಲ್ಲಿ ಕಾಣಸಿಗುತ್ತೆ.
ಇಂತಹದೇ ಒಂದು ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಎನ್ನುವ ಗ್ರಾಮದ ಬಳಿ ಇದೆ. ಸುಳ್ಯದ ಜಾಲ್ಸೂರಿನಿಂದ ಕೇರಳದ ಕಾಸರಗೋಡು ಸಂಪರ್ಕಿಸುವ ರಾಜ್ಯ ಹೆದ್ದಾರಿ ಹಾದುಹೋಗುತ್ತದೆ. ಜಾಲ್ಸೂರಿನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಪಂಜಿಬೈಲು ಎನ್ನುವ ಗ್ರಾಮವಿದೆ.
ಈ ಗ್ರಾಮ ಕೇರಳ ರಾಜ್ಯದ ದೇಲಂಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತೆ. ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಗ್ರಾಮದ ಭೂಭಾಗ ಕರ್ನಾಟಕ ರಾಜ್ಯದ ಮಧ್ಯೆ ಬರುತ್ತೆ. ಪಂಜಿಬೈಲು, ಪರಪ್ಪೆ ಎನ್ನುವ ಊರು ಕಳೆದ ಬಳಿಕ ಮತ್ತೆ ಕರ್ನಾಟಕ ರಾಜ್ಯದ ಭೂಭಾಗ ಸಿಗುತ್ತೆ. ಆ ಬಳಿಕ ಮಂಡೆಕೋಲು ತನಕ ಕರ್ನಾಟಕ ರಾಜ್ಯದ ಭೂಭಾಗವೇ ಆಗಿದ್ದು, ಮಂಡೆಕೋಲು ಗ್ರಾಮ ದಾಟಿದ ಬಳಿಕ ಕೇರಳ ಗಡಿ ಆರಂಭವಾಗುತ್ತೆ.
ಪಂಜಿಬೈಲು ಗ್ರಾಮದ ವಿಶೇಷವೇನೆಂದರೆ ಈ ಗ್ರಾಮದ ಜನರ ಬಹುಪಾಲು ಮನೆಗಳು ಕೇರಳ ರಾಜ್ಯದಲ್ಲಿದ್ದರೆ, ಈ ಮನೆಗಳಿಗೆ ಸೇರಿದ ತೋಟಗಳು ಕರ್ನಾಟಕ ರಾಜ್ಯದಲ್ಲಿದೆ. ಈ ಗ್ರಾಮದ ಮಧ್ಯೆ ಹಾದುಹೋಗುವ ಸುಳ್ಯ-ಕಾಸರಗೋಡು ಹೆದ್ದಾರಿ ಈ ಗ್ರಾಮವನ್ನು ಕರ್ನಾಟಕ -ಕೇರಳ ಎಂದು ಇಬ್ಭಾಗ ಮಾಡಿದೆ. ಹೆದ್ದಾರಿಯ ಒಂದು ಬದಿ ಕರ್ನಾಟಕದಲ್ಲಿದ್ದರೆ, ಇನ್ನೊಂದು ಬದಿ ಕೇರಳದಲ್ಲಿದೆ.
ಎರಡೂ ರಾಜ್ಯದ ಲಾಭ ಪಡೆಯುತ್ತಿರುವ ಊರಿದು!
Dakshina Kannada,Karnataka
November 11, 2025 11:18 AM IST