Dakshina Kannada: ಸ್ವಂತ ಬೇಕರಿ ಪ್ರಾರಂಭಿಸಿ ₹2 ಕೋಟಿ ವ್ಯವಹಾರ; 10ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ, ಪುತ್ತೂರಿನ ಪವಿತ್ರಾ ಸಾಧನೆ | Pavithra of Puttur employs 10 women achieves success in bakery business dakshina kannada | ದಕ್ಷಿಣ ಕನ್ನಡ

Dakshina Kannada: ಸ್ವಂತ ಬೇಕರಿ ಪ್ರಾರಂಭಿಸಿ ₹2 ಕೋಟಿ ವ್ಯವಹಾರ; 10ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ, ಪುತ್ತೂರಿನ ಪವಿತ್ರಾ ಸಾಧನೆ | Pavithra of Puttur employs 10 women achieves success in bakery business dakshina kannada | ದಕ್ಷಿಣ ಕನ್ನಡ

Last Updated:

ಪುತ್ತೂರಿನ ರೈಲ್ವೇ ನಿಲ್ದಾಣದ ಬಳಿ ಬೇಕರಿ ತಿಂಡಿಗಳನ್ನು ತಯಾರಿಸುವ ಘಟಕದ ಜೊತೆಗೆ ಬೇಕರಿಯನ್ನೂ ಪ್ರಾರಂಭಿಸಿರುವ ಪವಿತ್ರಾ, ಸುಳ್ಯ, ಕಡಬ, ಬೆಳ್ತಂಗಡಿ ಭಾಗಕ್ಕೆ ಪ್ರತಿದಿನ ಬೇಕರಿ ತಿನಿಸುಗಳನ್ನು ಮಾರಾಟ ಮಾಡ್ತಾರೆ.

ಸ್ವಂತ ಬೇಕರಿ ಪ್ರಾರಂಭಿಸಿ ಪವಿತ್ರಾ ಸಾಧನೆ
ಸ್ವಂತ ಬೇಕರಿ ಪ್ರಾರಂಭಿಸಿ ಪವಿತ್ರಾ ಸಾಧನೆ

ಪುತ್ತೂರು: ಪುರುಷರಿಗಿಂತಾ ಮಹಿಳೆ (Women) ಯಾವ ಕ್ಷೇತ್ರದಲ್ಲೂ ಹಿಂದೆ ಉಳಿಯಬಾರದು. ಮಹಿಳೆ ಸ್ವ ಉದ್ಯೋಗದಲ್ಲಿ (Self Employed) ತೊಡಗಿಕೊಳ್ಳುವ ಮೂಲಕ ಸ್ವಾವಲಂಭಿಯಾಗಿ ಬದುಕಬೇಕು. ಈ ಉದ್ಧೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಯೋಜನೆಗಳನ್ನು (Government Schemes) ಜಾರಿಗೆ ತಂದಿದೆ. ಯೋಜನೆಯ ಲಾಭ ಪಡೆದ ಮಹಿಳೆಯೊಬ್ಬರು 10ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿ ಸಕ್ಸಸ್​ ಫುಲ್​ ಉದ್ಯಮಿ (Businesswoman) ಆಗಿದ್ದಾರೆ.

ಸಂಜೀವಿಸಿ ಒಕ್ಕೂಟದಿಂದ ಸಾಲ ಪಡೆದು ಸಾಧನೆ

ದಕ್ಷಿಣಕನ್ನಡ ಜಿಲ್ಲೆ ಪುತ್ತೂರಿನ ಕೋಡಿಂಬಾಡಿ ನಿವಾಸಿ ಪವಿತ್ರಾ ಕಳೆದ 9 ವರ್ಷದ ಹಿಂದೆ ಕೋಡಿಂಬಾಡಿಯ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟವನ್ನು ಸೇರಿದ್ದರು. ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕು ಎಂದು ಸಂಜೀವಿನಿ ಒಕ್ಕೂಟದಿಂದ ಮೊದಲ ಬಾರಿಗೆ 75 ಸಾವಿರ ರೂಪಾಯಿ ಸಾಲ ಪಡೆದು ಬೇಕರಿ ತಿಂಡಿಗಳ ಸಣ್ಣ ಘಟಕ ಆರಂಭಿಸಿದ್ದರು. ಆ ಬಳಿಕ PMFM ಮೂಲಕ 40 ಸಾವಿರ ಸಾಲ ಪಡೆದು ಪರಿಕರ ಖರೀದಿಸಿದ್ರು.

ಆ ಬಳಿಕ ಉದ್ಯಮವನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಪಿಎಮ್ಎಫ್ಎಮ್ ಮೂಲಕ ಹೆಚ್ಚಿನ ಸಾಲ ಪಡೆದು ಯಶಸ್ವಿಯಾಗಿ ಉದ್ಯಮ ಕಟ್ಟಿಕೊಂಡು ಹತ್ತು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಸಂಜೀವಿನಿ ಒಕ್ಕೂಟದ ಮಹಿಳೆಯರನ್ನೇ ಸೇರಿಸಿಕೊಂಡು ಬೇಕರಿ ಉದ್ಯಮ ನಡೆಸುತ್ತಿರುವ ಪವಿತ್ರ, ವರ್ಷಕ್ಕೆ 2 ಕೋಟಿಗೂ ಹೆಚ್ಚಿನ ವ್ಯವಹಾರ ಮಾಡುವ ಮೂಲಕ ಕರೋಡ್ ಪತಿಯಾಗಿ ಹೊರಹೊಮ್ಮಿದ್ದಾರೆ.

ಈ ಬಗ್ಗೆ ನ್ಯೂಸ್18 ನೊಂದಿಗೆ ಮಾತನಾಡಿದ ಮಹಿಳಾ ಉದ್ಯಮಿ ಪವಿತ್ರಾ, ಸ್ತ್ರೀಶಕ್ತಿ ಸಂಘಕ್ಕೆ ಸೇರಿ 9 ವರ್ಷ ಆಯ್ತು, ಮೊದಲಿಗೆ 75 ಸಾವಿರ ಸಾಲ ತೆಗೆದುಕೊಂಡು ಉದ್ಯಮ ಆರಂಭ ಮಾಡಿದೆ. ಆ ಬಳಿಕ ಪ್ರಧಾನಮಂತ್ರಿಗಳ ಯೋಜನೆಯ ಅಡಿ ದೊಡ್ಡ ಸಲ ಪಡೆದುಕೊಂಡಿದ್ದೇವೆ. ಈಗ ಬೇಕರಿಗೆ ಅಗತ್ಯವಿರುವ ಎಲ್ಲಾ ಮಿಷನರಿಗಳನ್ನು ಖರೀದಿ ಮಾಡಿದ್ದೇವೆ. ಯಶಸ್ವಿಯಾಗಿ ಈಗ ಉದ್ಯಮ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪುತ್ತೂರಿನ ಕೋಡಿಂಬಾಡಿ ನಿವಾಸಿ ಪವಿತ್ರಾ, ಯಶಸ್ವಿ ಉದ್ಯಮಿ
5 ಔಟ್​ಲೆಟ್​.. ನಿತ್ಯ 3 ಕ್ವಿಂಟಾಲ್​ ತಿನಿಸು ಸೇಲ್​

ಫ್ರೆಂಡ್ಸ್ ಎನ್ನುವ ಬೇಕರಿ ಉತ್ಪನ್ನಗಳ ತಯಾರಿಸುತ್ತಿರುವ ಪವಿತ್ರ ಅವರಿಗೆ ಅವರ ಪತಿ ಶೇಖರ್ ಕೂಡಾ ಸಾಥ್ ನೀಡಿದ್ದಾರೆ. ದಂಪತಿ ಸೇರಿ ಬೇಕರಿ ಉದ್ಯಮವನ್ನು ಯಶಸ್ವಿ ಹಂತಕ್ಕೆ ತಲುಪಿಸಿದ್ದು, 50 ಕ್ಕೂ ಹೆಚ್ಚು ವಿವಿಧ ಬೇಕರಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಪುತ್ತೂರಿನ ರೈಲ್ವೇ ನಿಲ್ದಾಣದ ಬಳಿ ಬೇಕರಿ ತಿಂಡಿಗಳನ್ನು ತಯಾರಿಸುವ ಘಟಕದ ಜೊತೆಗೆ ಬೇಕರಿಯನ್ನೂ ಪ್ರಾರಂಭಿಸಿರುವ ಪವಿತ್ರಾ, ಸುಳ್ಯ, ಕಡಬ, ಬೆಳ್ತಂಗಡಿ ಭಾಗಕ್ಕೆ ಪ್ರತಿದಿನ ಬೇಕರಿ ತಿನಿಸುಗಳನ್ನು ಮಾರಾಟ ಮಾಡ್ತಾರೆ. ಐದು ಔಟ್ ಲೆಟ್​ ತೆರೆದಿದ್ದು, ಪ್ರತಿದಿನಕ್ಕೆ ಸುಮಾರು 3 ಕ್ವಿಂಟಾಲ್ ಬೇಕರಿ ತಿನಿಸುಗಳು ಮಾರಾಟ ಮಾಡಲಾಗ್ತಿದೆ.

ದೀನ್ ದಯಾಳ್ ಅಂತ್ಯೋದಯ ಯೋಜನೆ ವ್ಯವಸ್ಥಾಪಕರಾದ ಜಗತ್ ಮಾತನಾಡಿ, ಸಂಘದ ಮೂಲಕ ಸಹಾಯ ಪಡೆದು, ನಂತರ ಬ್ಯಾಂಕ್ ಮೂಲಕ ಸಾಲ ಪಡೆದಕೊಂಡು ಉದ್ಯಮ ನಡೆಸುತ್ತಿದ್ದಾರೆ. ಹಲವರಿಗೆ ಉದ್ಯೋಗ ಕೊಟ್ಟಿದ್ದಾರೆ. ಆ ಮೂಲಕ ಪ್ರಶಂಸೆಗೆ ಕಾರಣವಾಗಿದ್ದು, ಕುಟುಂಬ ಸಮಾಜದಲ್ಲಿ ಗೌರವ ಪಡೆದುಕೊಳ್ಳಲು ಮಹಿಳೆಯರು ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.