Last Updated:
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ವೇಳೆ ನವಂಬರ್ 14 ರಿಂದ ಡಿಸೆಂಬರ್ 2 ರ ತನಕ ಸರ್ಪಸಂಸ್ಕಾರ ಮತ್ತು ಆಶ್ಲೇಷ ಬಲಿ ಸೇವೆ ನಡೆಯುವುದಿಲ್ಲ.
ದಕ್ಷಿಣ ಕನ್ನಡ: ಕುಕ್ಕೆಯಲ್ಲಿ (Kukke) ಭಕ್ತ ಪ್ರವಾಹ ನಿರಂತರ ಇದ್ದದ್ದೇ. ಅದಕ್ಕೆ ಕಾಲದ ಪರಿಧಿಯಿಲ್ಲ. ಸುಬ್ರಾಯನ ಸೇವೆಗೆ ವಿಶ್ವಾದ್ಯಂತ ಜನ (People) ಬರುತ್ತಲೇ ಇರುತ್ತಾರೆ. ಹಾಗೆ ಬರುವವರು ಗಮನಿಸಲೇ ಬೇಕಾದ ಮಾಹಿತಿಯೊಂದನ್ನು (Information) ನಾವು ತಂದಿದ್ದೇವೆ. ಭಕ್ತರು (Devotees) ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಲೇಬೇಕು!
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನವಂಬರ್ 16 ರಿಂದ ಡಿಸೆಂಬರ್ 2 ರ ತನಕ ನೆರವೇರಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ನವಂಬರ್ 14 ರಿಂದ ಡಿಸೆಂಬರ್ 2 ರ ತನಕ ಶ್ರೀ ದೇವಳದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ಸೇವೆ ನೆರವೇರುವುದಿಲ್ಲ. ಭಕ್ತರು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.
ನವಂಬರ್ 14 ರಂದು ನವಂಬರ್ 13 ಕ್ಕೆ ಆರಂಭವಾದ ಸರ್ಪಸಂಸ್ಕಾರ ಸೇವೆ ಕೊನೆಗೊಳ್ಳುತ್ತದೆ. ಆದರೆ ನವಂಬರ್ 14ಕ್ಕೆ ಸರ್ಪಸಂಸ್ಕಾರ ಸೇವೆ ಆರಂಭವಾಗುವುದಿಲ್ಲ. ನವಂಬರ್ 15 ರಂದು ಶನಿವಾರ ಏಕಾದಶಿ ಹಾಗೂ ಮೂಲಮೃತ್ತಿಕಾ ಪ್ರಸಾದ ವಿತರಣೆ, ನವಂಬರ್ 16 ರಂದು ಕೊಪ್ಪರಿಗೆ ಏರಿ ಜಾತ್ರಾ ಮಹೋತ್ಸವ ಆರಂಭವಾಗುವುದರಿಂದ ನವಂಬರ್ 14 ರಿಂದಲೇ ಸರ್ಪಸಂಸ್ಕಾರ ಸೇವೆ ನಡೆಯುವುದಿಲ್ಲ. ಅಲ್ಲದೆ ಡಿಸೆಂಬರ್ 2 ರಂದು ಕೊಪ್ಪರಿಗೆ ಇಳಿಯುವವರೆಗೆ ಸರ್ಪಸಂಸ್ಕಾರ ಇರುವುದಿಲ್ಲ. ಡಿಸೆಂಬರ್ 3 ಬುಧವಾರದಿಂದ ಸರ್ಪಸಂಸ್ಕಾರ ಸೇವೆ ಎಂದಿನಂತೆ ಪುನರಾರಂಭಗೊಳ್ಳಲಿದೆ.
ನವಂಬರ್ 19 ಕ್ಕೆ ಲಕ್ಷದೀಪೋತ್ಸವ, ನವಂಬರ್ 24 ಕ್ಕೆ ಚೌತಿ, ನವಂಬರ್ 25 ಕ್ಕೆ ಪಂಚಮಿ ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ನವಂಬರ್ 26 ಚಂಪಾಷಷ್ಠಿ ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಅಲ್ಲದೆ ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ. ನವಂಬರ್ 19 ಲಕ್ಷದೀಪೋತ್ಸವ, ನವಂಬರ್ 24 ಚೌತಿ, ನವಂಬರ್ 25 ಪಂಚಮಿ, ನವಂಬರ್ 26 ಚಂಪಾಷಷ್ಠಿ ಮತ್ತು ಕೊಪ್ಪರಿಗೆ ಇಳಿಯುವ ಮಹಾಸಂಪ್ರೋಕ್ಷಣೆಯ ದಿನ ಅಂದರೆ ಡಿಸೆಂಬರ್ ರಂದು ಪಂಚಾಮೃತ ಮಹಾಭಿಷೇಕ ಸೇವೆ ನಡೆಯುವುದಿಲ್ಲ. ನವಂಬರ್ 16 ರಿಂದ ಡಿಸೆಂಬರ್ 2 ರ ತನಕ ಸಾಯಂಕಾಲದ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.
ಈ ದಿನದವರೆಗೆ ಇರೋದಿಲ್ಲ ಸರ್ಪಸಂಸ್ಕಾರ, ಆಶ್ಲೇಷ ಬಲಿ
ಚಂಪಾಷಷ್ಠಿ ಜಾತ್ರೋತ್ಸವವು ನವಂಬರ್ 16 ರಿಂದ ಡಿಸೆಂಬರ್ 2 ರ ತನಕ ನೆರವೇರಲಿದ್ದು ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶಗಳು ಇರುವುದಿಲ್ಲ. ಆದರೆ ಇತರ ದಿನಗಳಲ್ಲಿ ಆಶ್ಲೇಷಬಲಿ, ಪಂಚಾಮೃತ ಮಹಾಭಿಷೇಕ, ಶೇಷಸೇವೆ, ಕಾರ್ತಿಕಪೂಜೆ, ಮಹಾಪೂಜೆ, ತುಲಾಭಾರ, ನಾಗಪ್ರತಿಷ್ಠೆ, ಉತ್ಸವ, ರಥೋತ್ಸವ ಮೊದಲಾದ ಸೇವೆಗಳು ನೆರವೇರಲಿದೆ. ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿಸೆಂಬರ್ 2ರ ತನಕ ನೆರವೇರುವುದಿಲ್ಲ.
Dakshina Kannada,Karnataka
November 14, 2025 12:04 PM IST