Last Updated:
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ವಿಶ್ವಪ್ರಸಿದ್ಧ, ಯಕ್ಷಗಾನ ಸೇವೆಗೆ ಐದಾರು ವರ್ಷ ಕಾಯಬೇಕಾದ ಅನಿವಾರ್ಯತೆ, ಈ ವರ್ಷ ಏಳನೇ ಮೇಳ ನವೆಂಬರ್ 16 ರಂದು ಆರಂಭವಾಗಲಿದೆ.
ದಕ್ಷಿಣ ಕನ್ನಡ: ರಾಜ್ಯದ ಹೆಸರಾಂತ ಶಕ್ತಿಕೇಂದ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ (Temple) ತನ್ನ ಪ್ರಭಾವದಿಂದಾಗಿ ವಿಶ್ವದೆಲ್ಲೆಡೆ (World Wide) ಪ್ರಸಿದ್ಧಿಯಾಗಿದೆ. ದೇಶ-ವಿದೇಶದ ಗಣ್ಯಮಾನ್ಯರು ಈ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀದೇವಿಯ ಕೃಪೆಗಾಗಿ ತಲೆಬಾಗಿದ್ದಾರೆ. ಶ್ರೀಮಂತನಿಂದ (Rich) ಜನಸಾಮಾನ್ಯದವರೆಗೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಕಟೀಲು ದುರ್ಗಾಪರಮೇಶ್ವರಿ ದೇವಿ ಇದೇ ಕಾರಣಕ್ಕಾಗಿಯೇ (Reason) ಎಲ್ಲರಿಗೂ ಒಪ್ಪುವಂತವಳಾಗಿ ಗುರುತಿಸಿಕೊಂಡಿದ್ದಾಳೆ.
ಶ್ರೀದೇವಿಗೆ ಭಕ್ತರು ಹಲವು ರೀತಿಯ ಸೇವೆಗಳನ್ನು ಸಲ್ಲಿಸಲು ಅವಕಾಶವಿದ್ದು, ಈ ಸೇವೆಗಳಲ್ಲಿ ಯಕ್ಷಗಾನ ಸೇವೆಯೂ ಒಂದು. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಮೂಲಕ ಈ ಸೇವೆಯನ್ನು ನೀಡಲು ಭಕ್ತರಿಗೆ ಅವಕಾಶವನ್ನೂ ಕಲ್ಪಿಸಲಾಗಿದೆ. ಈ ದೇವಿ ಮಹಾತ್ಮೆ ಯಕ್ಷಗಾನ ಸೇವೆಯನ್ನು ನೊಂದಾಯಿಸಿದ ಬಳಿಕ ಸೇವೆಯ ಭಾಗ್ಯ ದೊರೆಯಲು ಐದಾರು ವರ್ಷ ಕಾಯಬೇಕಾದ ಅನಿವಾರ್ಯತೆಯೂ ಇದೆ.
ಈಗಾಗಲೇ ಆರು ಮೇಳಗಳ ಮೂಲಕ ಯಕ್ಷಗಾನ ಸೇವೆ ನೀಡುತ್ತಿರುವ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ದಿನಕ್ಕೆ ಆರು ಕಡೆಗಳಲ್ಲಿ ಯಕ್ಷಗಾನ ಮಾಡಿದರೂ, ಸೇವಾಕರ್ತರು ನೊಂದಣಿ ಮಾಡಿಸಿಕೊಂಡು ಐದಾರು ವರ್ಷಗಳು ಕಾಯಬೇಕೆಂದರೆ ಈ ಸೇವೆಗಿರುವ ಮಹತ್ವವೇನು ಅನ್ನೋದು ತಿಳಿದುಬರುತ್ತದೆ.
ಈ ಬಾರಿ ಏಳನೇ ಮೇಳವನ್ನು ಆರಂಭಿಸಲು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ನಿರ್ಧರಿಸಿದ್ದು, ನವೆಂಬರ್ 16 ರಂದು ಈ ಮೇಳ ತನ್ನ ಚೊಚ್ಚಲ ಪಾದಾರ್ಪಣೆ ಮಾಡಲಿದೆ. ಈ ಸಂಬಂಧ ಎಲ್ಲಾ ವ್ಯವಸ್ಥೆಗಳನ್ನೂ ಕ್ಷೇತ್ರದ ವತಿಯಿಂದ ಮಾಡಲಾಗಿದೆ. ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಆರಂಭವಾದ ಕಾಲಮಾನ ಬಗ್ಗೆ ಖಚಿತ ದಾಖಲೆ ಇಲ್ಲ. ಮಂಡಳಿಯ 2 ನೇ ಮೇಳ 1975 ರಲ್ಲಿ ಆರಂಭವಾದರೆ 3 ನೇ ಮೇಳ 1982, 4 ನೇ ಮೇಳ 1993 ರಲ್ಲಿ 5 ನೇ ಮೇಳ 2010 ರಲ್ಲಿ 6 ನೇ ಮೇಳ 2013 ರಲ್ಲಿ ಆರಂಭವಾಗಿತ್ತು. ಈ ವರ್ಷ ಅಂದರೆ 2025-26 ರಲ್ಲಿ ಏಳನೇ ಮೇಳ ಆರಂಭವಾಗಲಿದೆ.
16 ರಂದು ಪರಿಕರಗಳ ಮೆರವಣಿಗೆಯ ವೈಭೋಗ
Dakshina Kannada,Karnataka
November 14, 2025 11:45 AM IST