Kambala: ಕಂಬುಲ ನನ ದುಂಬುಲ, ಕುದಿ ಕಂಬಳ ಅಂದ್ರೇನು ಗೊತ್ತಾ? ನಾಳೆಯಿಂದ ಶುರುವಾಗಲಿದೆ ಕೋಣಗಳ ಭರ್ಜರಿ ಓಟ! | Mangaluru 25 Kambala events start tomorrow unveiling Konnas speed | ದಕ್ಷಿಣ ಕನ್ನಡ

Kambala: ಕಂಬುಲ ನನ ದುಂಬುಲ, ಕುದಿ ಕಂಬಳ ಅಂದ್ರೇನು ಗೊತ್ತಾ? ನಾಳೆಯಿಂದ ಶುರುವಾಗಲಿದೆ ಕೋಣಗಳ ಭರ್ಜರಿ ಓಟ! | Mangaluru 25 Kambala events start tomorrow unveiling Konnas speed | ದಕ್ಷಿಣ ಕನ್ನಡ

Last Updated:

ಮಂಗಳೂರು: ತುಳುನಾಡಿನ ಕಂಬಳ 25 ಸ್ಥಳಗಳಲ್ಲಿ ನಾಳೆಯಿಂದ ಆರಂಭವಾಗಲಿದೆ. ಕೋಣಗಳ ಪೂರ್ವ ತಯಾರಿ, ಕುದಿ ಕಂಬಳ, ಮಾಲಕರು ಭಾಗವಹಿಸುವುದು, ಮಾರ್ಚ್ 28 ಉಪ್ಪಿನಂಗಡಿ ಸೇರಿದಂತೆ ಏಪ್ರಿಲ್ 25 ಬಡಗಬೆಟ್ಟು ವರೆಗೆ.

ಕಂಬಳ ವೇಳಾಪಟ್ಟಿ
ಕಂಬಳ ವೇಳಾಪಟ್ಟಿ

ಮಂಗಳೂರು: ತುಳುನಾಡಿನ ಜಾನಪದೀಯ ಕ್ರೀಡೆ (Folk Sport) ಕಂಬಳ ನಾಳೆಯಿಂದ ಆರಂಭವಾಗಲಿದೆ. ಬಾರಿ 25 ಕಂಬಳಗಳು ನಡೆಯಲಿದ್ದು, ಕಂಬಳಕ್ಕೆ (Kambala) ಕಂಬಳ ಸಮಿತಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಂಬಳ ಕೂಟದಲ್ಲಿ ಭಾಗವಹಿಸಲು (Participate) ಈಗಾಗಲೇ ಕೋಣಗಳನ್ನು ಅದರ ಮಾಲಕರು (Owner) ಹುರಿಗೊಳಿಸಿದ್ದಾರೆ.

ಪ್ರತೀ ವಾರಾಂತ್ಯದಲ್ಲಿ ನಡೆಯುತ್ತಿದೆ ಕುದಿ ಕಂಬಳ

ಕಂಬಳದ ಪೂರ್ವ ತಯಾರಿಯಾಗಿ ಈಗಾಗಲೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಪ್ರತೀ ವಾರಾಂತ್ಯದಲ್ಲಿ ಕುದಿ ಕಂಬಳಗಳು ನಡೆದಿವೆ. ಕೋಣಗಳ ವೇಗ, ಜೋಡಿಯ ಸಾಮರ್ಥ್ಯವನ್ನು ತಿಳಿಯಲು ಕುದಿ ಕಂಬಳವನ್ನು ಅಲ್ಲಲ್ಲಿ ನಡೆಸಲಾಗುತ್ತಿದೆ. ಮಳೆ ಸ್ವಲ್ಪ ವಿರಾಮ ನೀಡುತ್ತಿದ್ದಂತೆಯೇ ಕೋಣಗಳನ್ನು ಕಂಬಳದ ಗದ್ದೆಗೆ ಕರೆತಂದು ಸ್ಪರ್ಧೆಗೆ ಹುರಿಗೊಳಿಸಲಾಗುತ್ತಿದೆ.

ಕಂಬಳಕ್ಕೆ ಭರ್ಜರಿ ತಯಾರಿ, ತರಬೇತಿ

ಅತೀ ವೇಗವಾಗಿ ಓಡಬೇಕಾದರೆ ಓಟಗಾರನ ಜೊತೆಗೆ ಕೋಣಗಳಿಗೂ ಪೂರ್ವತಯಾರಿ, ಅಭ್ಯಾಸ ಬೇಕಾಗುತ್ತದೆ. ಹೀಗಾಗಿ ಪ್ರತೀ ದಿನ ಈಗ ಕಂಬಳ ಗದ್ದೆಗಳಲ್ಲಿ ಕುದಿ ಕಂಬಳಗಳು ನಡೆಯುತ್ತಿವೆ. ಈ ಕುದಿ ಕಂಬಳದಲ್ಲೇ ಮುಂದಿನ ಋತುವಿನಲ್ಲಿ ಕೋಣಗಳ ವೇಗವನ್ನು ಅರಿಯಬಹುದಾಗಿದೆ. ಅಲ್ಲದೇ ಜೋಡಿಗಳನ್ನು ಇದೇ ಕುದಿಯಲ್ಲಿ ನಿರ್ಧಾರ ಮಾಡಲಾಗುತ್ತದೆ. ಜೋಡಿ ಕೋಣಗಳನ್ನು ಒಟ್ಟಿಗೆ ಓಡಿಸಿ ಅವುಗಳ ಸಾಧಕ-ಬಾಧಕಗಳನ್ನು ಗುರುತಿಸಿ ಮತ್ತೆ ತರಬೇತಿ ನೀಡಲಾಗುತ್ತದೆ.

ನಾಳೆಯಿಂದ ಅಖಾಡಕ್ಕೆ ಕೋಣಗಳು

ಹೀಗೆ ಹತ್ತಾರು ಕುದಿಕಂಬಳದಲ್ಲಿ ಭಾಗವಹಿಸಿದ ಕಂಬಳ ಕೋಣಗಳು ನಾಳೆಯಿಂದ ತಮ್ಮ ಸಾಮರ್ಥ್ಯವನ್ನು ತೋರಿಸಲಿವೆ. ಪ್ರತಿಷ್ಠಿತ ಕ್ರೀಡೆಯಾಗಿ ಕಂಬಳ ಈಗ ಮಾರ್ಪಾಡಾಗಿದ್ದು, ಸಾಂಪ್ರದಾಯಿಕ ಕಂಬಳದ ಜೊತೆಗೆ ಆಧುನಿಕ ಕಂಬಳಗಳು ನಡೆಯಲಿವೆ.

ಕಂಬಳದ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: Koragajja: ಅಜ್ಜನಿಗೆ ಹರಕೆ ಕೋಲ ಕೊಟ್ಟ ಸ್ಯಾಂಡಲ್‌ ವುಡ್‌ ಹಿರಿಯರು; ತನಿಯ ಒಲಿಯುವನೇ ತನ್ನ ಚಿತ್ರಕ್ಕೆ?

ಈ ಬಾರಿಯ ಕಂಬಳ ಕೂಟದ ವೇಳಾಪಟ್ಟಿ ಈ ರೀತಿ ಇದೆ. ನವೆಂಬರ್ 15 ಪಣಪಿಲ, ನವೆಂಬರ್ 22 ಕೊಡಂಗೆ, ನವೆಂಬರ್ 29 ಕಕ್ಯಪದವು, ಡಿಸೆಂಬರ್ 6 ಹೊಕ್ಕಾಡಿಗೋಳಿ, ಡಿಸೆಂಬರ್ 7 ಬಳ್ಳಮಂಜ, ಡಿಸೆಂಬರ್ 13 ಬಾರಾಡಿ ಬೀಡು, ಡಿಸೆಂಬರ್ 21 ಮೂಲ್ಕಿ, ಡಿಸೆಂಬರ್ 27 ಮಂಗಳೂರು, ಜನವರಿ 3 ಮಿಯ್ಯಾರು, ಜನವರಿ 10 ನರಿಂಗಾಣ, ಜನವರಿ 17 ಅಡ್ವೆ, ಜನವರಿ 24 ಪುತ್ತೂರು, ಜನವರಿ 31 ಮೂಡಬಿದಿರೆ, ಫೆಬ್ರವರಿ 7 ಐಕಳ, ಫೆಬ್ರವರಿ 14 ಜಪ್ಪಿನಮೊಗರು, ಫೆಬ್ರವರಿ 21 ವಾಮಂಜೂರು, ಫೆಬ್ರವರಿ 28 ಎರ್ಮಾಳು, ಮಾರ್ಚ್ 7 ಬಂಟ್ವಾಳ, ಮಾರ್ಚ್ 15 ಬಂಗಾಡಿ, ಮಾರ್ಚ್ 21 ವೇಣೂರು, ಮಾರ್ಚ್ 28 ಉಪ್ಪಿನಂಗಡಿ, ಎಪ್ರಿಲ್ 4 ಗುರುಪುರ, ಎಪ್ರಿಲ್ 11 ಬಳ್ಕುಂಜೆ, ಎಪ್ರಿಲ್ 18 ಹರೇಕಳ, ಎಪ್ರಿಲ್ 25 ಬಡಗಬೆಟ್ಟು ಹೀಗೆ ನಾಳೆಯಿಂದ ಎಪ್ರಿಲ್ 25 ರವರೆಗೆ ಪ್ರತೀ ವಾರಾಂತ್ಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ನಡೆಯಲಿದೆ. ಕಂಬಳದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರತೀ ವಾರಾಂತ್ಯದಲ್ಲಿ ಅವಕಾಶವಿದೆ.