Narendra Modi: ರಾಜ್ಯಕ್ಕೆ ಆಗಮಿಸಲಿದ್ದಾರೆ ಜನ ಮೆಚ್ಚಿದ ನಾಯಕ, ಕೃಷ್ಣನೂರಲ್ಲಿ ಸಂಭ್ರಮ; ಕಡಲತಡಿಗೆ ಎಸ್‌ ಪಿ ಜಿ! | Lakshakantha Geeta Parayana in Udupi PMO confirms Modi visit | ಉಡುಪಿ

Narendra Modi: ರಾಜ್ಯಕ್ಕೆ ಆಗಮಿಸಲಿದ್ದಾರೆ ಜನ ಮೆಚ್ಚಿದ ನಾಯಕ, ಕೃಷ್ಣನೂರಲ್ಲಿ ಸಂಭ್ರಮ; ಕಡಲತಡಿಗೆ ಎಸ್‌ ಪಿ ಜಿ! | Lakshakantha Geeta Parayana in Udupi PMO confirms Modi visit | ಉಡುಪಿ

Last Updated:

ಶ್ರೀ ಕೃಷ್ಣ ಮಠದಲ್ಲಿ ನವೆಂಬರ್ 28ರಂದು ನಡೆಯುವ ಲಕ್ಷಕಂಠ ಗೀತಾ ಪಾರಾಯಣಕ್ಕೆ ನರೇಂದ್ರ ಮೋದಿ ಅಧಿಕೃತವಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ದೃಢಪಡಿಸಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಪರ್ಯಾಯ ಪುತ್ತಿಗೆ ಮಠ-ಶ್ರೀ ಕೃಷ್ಣ ಮಠದಲ್ಲಿ (Krishna Mutt) ನಡೆಯುತ್ತಿರುವ ಬೃಹತ್ ಗೀತೋತ್ಸವದ ನಿಮಿತ್ತ ನವೆಂಬರ್ 28 ರಂದು ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸೋದು ಈಗ ಅಧಿಕೃತವಾಗಿದೆ. ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯ ದೃಢಪಡಿಸಿದೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿ ಕಚೇರಿ (PM Office) ಸೂಚನೆ ನೀಡಿದೆ.

ಸೋಮವಾರ ಉಡುಪಿಗೆ ಎಸ್‌ಪಿಜಿ!

ಪ್ರಧಾನಮಂತ್ರಿ ಕಾರ್ಯಾಲಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, ಹೆಲಿಪ್ಯಾಡ್ ಸಹಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಭದ್ರತೆಗೆ ಸಂಬಂಧಿಸಿದಂತೆ ಎಸ್.ಪಿ.ಜಿ.ಯ ಜೊತೆ ಮಾತುಕತೆ ನಡೆಸುವಂತೆ ಸೂಚಿಸಿದೆ. ಸೋಮವಾರ ಎಸ್.ಪಿ.ಜಿ. ತಂಡ ಉಡುಪಿಗೆ ಬರುವ ಸಾಧ್ಯತೆಗಳಿವೆ.

ಇನ್ನು ಕೆಲವೇ ದಿನದಲ್ಲಿ ಉಡುಪಿಗೆ ನರೇಂದ್ರ!

ನವೆಂಬರ್ 28 ರಂದು ದೆಹಲಿಯಿಂದ ವಾಯುಪಡೆ ವಿಮಾನದಲ್ಲಿ ಹೊರಡುವ ಮೋದಿ ಬೆಳಗ್ಗೆ 11 ಗಂಟೆ ವೇಳೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ವಿಮಾನ ನಿಲ್ದಾಣದ ಹೆಲಿಕಾಪ್ಟರ್ ಮೂಲಕ ಆದಿ ಉಡುಪಿ ಹೆಲಿಪ್ಯಾಡ್‌ಗೆ ಬಂದಿಳಿಯುವ ಮೋದಿ 12 ಗಂಟೆ ವೇಳೆಗೆ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.

ಉಡುಪಿ ಟು ಗೋವಾ ಇದು ಪಿಎಂ ಕಾರ್ಯಕ್ರಮದ ಮಾಹಿತಿ