Last Updated:
ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ಮೂರನೇ ಶ್ರೀನಿವಾಸ ಕಲ್ಯಾಣಕ್ಕೆ ಭರದ ಸಿದ್ಧತೆ ನಡೆದಿದೆ.
ದಕ್ಷಿಣ ಕನ್ನಡ: ಪುತ್ತೂರಿನಲ್ಲಿ (Putturu) ಪುತ್ತಿಲ ಪರಿವಾರದ ಮೂರನೇ ಶ್ರೀನಿವಾಸ ಕಲ್ಯಾಣಕ್ಕೆ (Srinivasa Kalyana) ಭರದ ಸಿದ್ಧತೆ (Preparation) ನಡೆದಿದೆ. ಕಳೆದ ಎರಡು ವರ್ಷಗಳಿಂದ ಭಕ್ತಿ ಮತ್ತು ಶ್ರದ್ಧೆಯಿಂದ ಹಿಂದೂ (Hindu) ಬಂಧುಗಳ ಸಹಕಾರದಿಂದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಇದೀಗ 3ನೇ ಬಾರಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಮಾಡುವ ಯೋಗಭಾಗ್ಯ ಬಂದಿದೆ. ಈ ಬಾರಿ ಶ್ರೀನಿವಾಸ ಕಲ್ಯಾಣೋತ್ಸವದ ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮಶತಾಬ್ಬಿಯನ್ನು ಶಾಶ್ವತವಾಗಿ ಉಳಿಯಬೇಕೆಂಬ ಮತ್ತು ಹಿಂದು ಸಮಾಜ ಸಾಮೂಹಿಕ ವಿವಾಹಕ್ಕೆ ಮುಂದಿನ ದಿನ ಒತ್ತು ಕೊಡಬೇಕೆಂಬ ನಿಟ್ಟಿನಲ್ಲಿ ಹಿಂದವಿ ಸಾಮ್ರಾಜ್ಯೋತ್ಸವ ಮತ್ತು ಸಾಮೂಹಿಕ ವಿವಾಹವನ್ನು ಜೋಡಿಸಿದ್ದೇವೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ತಿಳಿಸಿದ್ದಾರೆ.
ಹಿಂದೂ ಸಮಾಜಕ್ಕೆ ಶಕ್ತಿ ಕೊಡಬೇಕು ಮತ್ತು ಸನಾತನ ಹಿಂದೂ ಧರ್ಮ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಿಂದೂ ಸಮಾಜದ ಮುಂದಿರುವ ನೂರಾರು ಸವಾಲುಗಳಿಗೆ ಒಂದಾಗಿ ಒಟ್ಟಾಗಿ ಸಂದೇಶ ಕೊಡುವ ಕಾರ್ಯಕ್ರಮ ಇದಾಗಬೇಕು. ಹಿಂದವಿ ಸಾಮಾಜ್ಯೋತ್ಸವದ ಮೂಲಕ ಹಿಂದು ಧರ್ಮದ ಮುಂದೆ, ಕಾರ್ಯಕರ್ತರ, ಸಂಘಟನೆ ಮುಂದೆ ಯಾವ ಸವಾಲು ಇದ್ದರೂ ಅದಕ್ಕೆ ಉತ್ತರ ಕೊಡುವ ಶಕ್ತಿ ಸಿಗಲಿದೆ ಎಂದರು.
ಸಾಮೂಹಿಕ ವಿವಾಹದ ಕುರಿತು ಘೋಷಣೆ ಮಾಡಿದ ಆರಂಭದಲ್ಲಿ 243 ಜೋಡಿಗಳು ನೋಂದಾಯಿಸಿಕೊಂಡಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಅವರು ಮುಂದೆ ಬರಲಿಲ್ಲ. ಜೊತೆಗೆ ನಾವು ಕೂಡಾ ಪೂರ್ಣಪ್ರಮಾಣದ ಜೋಡಿಗಳಿಗೆ ಮಾತ್ರ ವಿವಾಹಕ್ಕೆ ಅವಕಾಶ ನೀಡಿದ್ದೇವೆ. ಸುಮಾರು 75 ಸಾವಿರ ರೂಪಾಯಿಯಷ್ಟು ಒಂದು ಜೋಡಿಯ ಸಾಹಿತ್ಯಕ್ಕೆ ಖರ್ಚು ತಗಲುತ್ತದೆ. ಸುಮಾರು ರೂ. 50ಸಾವಿರ ಚಿನ್ನದ ತಾಳಿ, ಕರಿಮಣಿಗೆ ವ್ಯಹಿಸಲಾಗುವುದು. ಉಳಿದಂತೆ ಬಟ್ಟೆಗಳಿಗೆ ಸಹಿತ ಖರ್ಚು ಇದೆ. ಪ್ರಧಾನ ವೈದಿಕರ ಮಾರ್ಗದರ್ಶನದಂತೆ ಆಯಾಯ ವೈದಿಕರು ವಿವಾಹ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಇನ್ನು ನವಂಬರ್.28 ಕ್ಕೆ ಹೊರೆಕಾಣಿಕೆ ಮೆರವಣಿಗೆ ದರ್ಬೆಯಿಂದ ಸಂಜೆ ಗಂಟೆ 4 ಕ್ಕೆ ಹೊರಡಲಿದೆ. ಪ್ರತಿ ಗ್ರಾಮದಿಂದಲೂ ಬಂದ ಹಸಿರುಹೊರೆಕಾಣಿಕೆ ದರ್ಬೆಯಿಂದ ಮೆರವಣಿಗೆ ಮೂಲಕ ದೇವಸ್ಥಾನ ಸಭಾಭವನದಲ್ಲಿರುವ ಉಗ್ರಾಣದಲ್ಲಿ ಜೋಡಿಸಲಾಗುವುದು. ನ.29ಕ್ಕೆ ಬೆಳಿಗ್ಗೆ ಗಣಪತಿ ಹೋಮದಿಂದ ಆರಂಭಗೊಂಡು ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 4 ರಿಂದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ವೈಭವದ ಶೋಭಯಾತ್ರೆ ಬೊಳುವಾರಿನಿಂದ ಆರಂಭಗೊಳ್ಳಲಿದೆ. ಸಂಜೆ ಗಂಟೆ 7.30ರಿಂದ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಹಿಂದವಿ ಸಾಮಾಜ್ಯೋತ್ಸವ ನಡೆಯಲಿದೆ.
Dakshina Kannada,Karnataka
November 26, 2025 3:45 PM IST