Last Updated:
ಉಪ್ಪಿನಂಗಡಿ ಫಾತಿಮತ್ ಅಬೀರ 2 ವರ್ಷ 7 ತಿಂಗಳಲ್ಲಿ 610 ಪುಟಗಳ ಕುರಾನ್ ನ್ನು ಕೈ ಬರಹದಲ್ಲಿ ಬರೆದು ಸಾಧನೆ ಮಾಡಿದ್ದಾರೆ. ಈ ಪವಿತ್ರ ಗ್ರಂಥ 2 ಕೆಜಿ ತೂಕ, 13×9 ಇಂಚು ಗಾತ್ರದಲ್ಲಿದೆ.
ದಕ್ಷಿಣ ಕನ್ನಡ: ಕುರ್-ಆನ್ (Quran) ಮಹಮ್ಮದೀಯರ ಪವಿತ್ರ ಗ್ರಂಥ, ದೇವವಾಣಿ ಎಂಬ ಗೌರವ ಪಡೆದಿರುವ ಪೈಗಂಬರ್ ಇಂದ ಬರೆಯಲ್ಪಟ್ಟಿರುವ ಈ ಪುಸ್ತಕವನ್ನು (Book) ಮುಸ್ಲಿಮರು ಅತ್ಯಂತ ಪವಿತ್ರ ಎಂದು ಭಾವಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಮುಸ್ಲಿಂ ಯುವತಿಯೋರ್ವಳು ಕುರಾನ್ ನ್ನು ಕೈ ಬರಹದಲ್ಲಿ ಬರೆದು ಸಾಧಿಸಿದ್ದಾಳೆ.ಉಪ್ಪಿನಂಗಡಿಯ ಕೆಮ್ಮಾರ್ ಶಕ್ತಿ ನಗರದ ಸಂಶುಲ್ ಉಲಮಾ ಶರೀಅತ್ ಕಾಲೇಜಿನ ವಿದ್ಯಾರ್ಥಿನಿ,ಉಪ್ಪಿನಂಗಡಿ ಹಳೇಗೇಟು ನಿವಾಸಿ ಫಾತಿಮತ್ ಅಬೀರ ಕುರಾನ್ ಧರ್ಮಗ್ರಂಥವನ್ನು ಕೈ ಬರಹದಲ್ಲಿ ಬರೆದಾಕೆ.
610 ಪುಟಗಳ ಕುರಾನ್ 2 ಕಾಲು ಕೆಜಿ ತೂಕ,13 ಇಂಚು ಉದ್ದ ಹಾಗೂ 9 ಇಂಚು ಅಗಲವನ್ನು ಹೊಂದಿದೆ.ಮುದ್ದಾದ ಅಕ್ಷರದೊಂದಿಗೆ ಪೋಣಿಸಿದ ಈ ಪುಸ್ತಕದಲ್ಲಿ ಕುರಾನ್ ಸಾಲುಗಳನ್ನು ಕಪ್ಪುಬಣ್ಣದ ಇಂಕ್ ಹಾಗೂ ಪಿಂಕ್ ಕಲರ್ ಪೆನ್ ಬಳಸಲಾಗಿದೆ.ಮುದ್ರಿತ ಪುಸ್ತಕದಂತೆಯೇ ಕಾಣುವ ಕೈ ಬರಹದ ಅಂದ ಚಂದವಾಗಿ ಮೂಡಿ ಬಂದಿದೆ.ಪುಸ್ತಕದ ಮಖಪುಟವೂ ಸುಂದರವಾಗಿದೆ.
ಈ ಪುಸ್ತಕ ರಚನೆಗೆ ಫಾತಿಮಾ ಅವರು ಎರಡು ವರ್ಷ ಏಳು ತಿಂಗಳು ಶ್ರಮವನ್ನು ಹಾಕಿದ್ದಾರೆ.ಕ್ಯಾಲಿ ಗ್ರಾಫ್ ನಿಂದ ಪ್ರೇರಿತರಾಗಿ ಫಾತಿಮಾ ಬರೆಯಲು ಆರಂಭಿಸಿದ್ದಾರೆ.ಫಾತಿಮಾ ಕುಟುಂಬದ ವಾಟ್ಸಪ್ ಗ್ರೂಪ್ ನಲ್ಲಿ ಕ್ಯಾಲಿಗ್ರಾಫ್ ಸ್ಪರ್ಧೆ ನಡೆದಿತ್ತು..ಅಲ್ಲಿ ಫಾತಿಮಾ ರ ಕೈ ಬರಹ ನೋಡಿ ಕುಟುಂಬ ಸದಸ್ಯ ರು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ನೋಡಿ ಪ್ರೇರಣೆಗೊಂಡು ಫಾತಿಮಾ ಕುರಾನ್ ಬರೆಯಲು ಆರಂಭಿಸಿದ್ದಾರೆ.
ಬಿಕಾಂ ಓದುತ್ತಿರುವ ಹುಡುಗಿಯ ಹಸ್ತಕಲೆಯ ಸಾಧನೆ
Dakshina Kannada,Karnataka
November 27, 2025 11:20 AM IST