ನೀವು ಪ್ರತಿ ಬಾರಿ ಯಾವುದಾದರೂ ಅಪ್ಲಿಕೇಶನ್ ಬಳಸಿದಾಗ, ವೈ-ಫೈ ಕನೆಕ್ಟ್ ಮಾಡಿದಾಗ ನಿಮಗೆ ಬೇಕಾದ ವಸ್ತುಗಳನ್ನ ನೀವು ಖರೀದಿಸಲು ಇಂಟರ್ನೆಟ್ನಲ್ಲಿ ಸರ್ಚ್ ಮಾಡಿದಾಗ ಅಥವಾ ಇತರರ ಜೊತೆ ಸಂವಹನ ನಡೆಸಿದಾಗ ನಿಮಗೆ ಗೊತ್ತಿಲ್ಲದೇ ನಿಮ್ಮ ಡೇಟಾಗಳು ಸಂಗ್ರಹವಾಗುತ್ತದೆ. ಇದನ್ನ ಕೆಲ ಅಪ್ಲಿಕೇಶನ್ಗಳು ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ನೀವು ನಿಮಗೆ ಬೇಕಾದ ವಸ್ತುವನ್ನ ಖರೀದಿಸಲು ಸರ್ಚ್ ಮಾಡಿ ಸುಮ್ಮನಾಗುತ್ತೀರಿ, ಆದ್ರೆ ನೀವು ಸೋಶಿಯಲ್ ಮೀಡಿಯಾ ಬಳಸುವಾಗ ನೀವು ಏನನ್ನ ಹುಡುಕಿದ್ದಿರೋ ಅದರ ಜಾಹೀರಾತುಗಳು ಬರಲು ಪ್ರಾರಂಭಿಸುತ್ತದೆ. ಹಾಗಾಗೀ ಈ ಕೆಳಗಿನ ಐದು ಟ್ರಿಕ್ಸ್ಗಳನ್ನ ಫಾಲೋ ಮಾಡಿದ್ರೆ, ನಿಮ್ಮ ಡೇಟಾ ಸುರಕ್ಷಿತವಾಗಿಡಬಹುದಾಗಿದೆ.
ಜಿರೋ ಲಾಗ್ ವಿಪಿಎನ್ ಬಳಸುವುದರಿಂದ ಇದು ನಿಮ್ಮ ಮೊಬೈಲ್ನಲ್ಲಿರುವ ಐಪಿ ಅಡ್ರೆಸ್ ಮರೆಮಾಚುತ್ತದೆ ಮತ್ತು ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಎನ್‌ಕ್ರಿಪ್ಟ್ ಮಾಡುತ್ತದೆ, ಇದರಿಂದ ನೀವು ಆನ್‌ಲೈನ್‌ನಲ್ಲಿ ಏನು ಮಾಡುತ್ತಿದ್ದೀರಿ ಎಂದು ಯಾರೂ ನೋಡಲು ಸಾಧ್ಯವಿಲ್ಲ. ಇದು ವೆಬ್‌ಸೈಟ್, ಜಾಹೀರಾತುದಾರರು ಮತ್ತು ನೆಟ್‌ವರ್ಕ್ ಪೂರೈಕೆದಾರರು ನಿಮ್ಮ ಬ್ರೌಸಿಂಗ್ನ್ನು ಟ್ರ್ಯಾಕ್ ಮಾಡುವುದನ್ನು ತಡೆಯುತ್ತದೆ.
ಒಂದೇ ನೆಟ್‌ವರ್ಕ್ ಮಾರ್ಗವನ್ನು ಅವಲಂಬಿಸುವ ಬದಲು, ನೆಟ್‌ವರ್ಕ್‌ಗಳನ್ನು ಬದಲಾಯಿಸುವ ಮೂಲಕ ಲೇಯರ್ಡ್ ರೂಟಿಂಗ್ ಬಳಸಿ. ಒಂದೇ ವೈ ಫೈ ಅಥವಾ ಸಾಧನದಿಂದ ಎಲ್ಲಾ ಆನ್‌ಲೈನ್ ಚಟುವಟಿಕೆಗಳನ್ನು ಸಂಪರ್ಕಿಸುವದರಿಂದ ಒಂದು ಪ್ಯಾಟರ್ನ್ ಸೆಟ್ ಆಗಿರುತ್ತದೆ. ಇದರಲ್ಲಿ ನೀವು ಮೊಬೈಲ್‌ನಲ್ಲಿ ಸರ್ಚ್ ಮಾಡುವ ಪ್ರತಿಯೊಂದು ಕೂಡ ಸಂಗ್ರಹವಾಗಿರುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಮೊಬೈಲ್ ಹ್ಯಾಕ್ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ವಿಭಿನ್ನ ನೆಟ್‌ವರ್ಕ್‌ಗಳನ್ನು ಬಳಸುವದರ ಮೂಲಕ ನಿಮ್ಮ ನಿಜವಾದ ಗುರುತು ಮತ್ತು ನಿಮ್ಮ ಚಟುವಟಿಕೆಯ ನಡುವಿನ ನೇರ ಸಂಪರ್ಕ ಕಡಿತಗೊಳ್ಳುತ್ತದೆ.
ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳಲ್ಲಿನ ಕುಕೀಗಳ ಮೂಲಕ ಬೃಹತ್ ಪ್ರಮಾಣದ ಡೇಟಾ ಸಂಗ್ರಹವಾಗುತ್ತದೆ. ಹೀಗೆ ಕೆಲ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ಗಳು ನಿಮ್ಮ ಡೇಟಾ ಸಂಗ್ರಹವಾಗುವುದನ್ನ ತಡೆಯಲು, ಶಾಶ್ವತವಾಗಿ ಸೈನ್ ಇನ್ ಆಗುವ ಬದಲು ಬ್ರೌಸಿಂಗ್ ಮಾಡಿದ ನಂತರ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ಗಳಿಂದ ಲಾಗ್ ಔಟ್ ಆಗಿ. ಇದರ ಜೊತೆಗೆ ಎಲ್ಲದಕ್ಕೂ ಒಂದೇ ಇಮೇಲ್ ಮತ್ತು ಬಳಕೆದಾರರ ಹೆಸರನ್ನು ಬಳಸುವುದನ್ನು ತಪ್ಪಿಸಿ.
ಎನ್‌ಕ್ರಿಪ್ಶನ್ ನಿಮ್ಮ ಡೇಟಾವನ್ನು ಓದಲಾಗದ ಕೋಡ್ ಆಗಿ ಪರಿವರ್ತಿಸುತ್ತದೆ, ಅದನ್ನು ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗೆ ಮಾಡುವುದರಿಂದ ಹ್ಯಾಕರ್ಗಳು ನಿಮ್ಮ ಮೊಬೈಲ್ ಹ್ಯಾಕ್ ಮಾಡಿದರು ಸಹ ಅವರು ನಿಮ್ಮ ಮೆಸೇಜ್ಗಳನ್ನ ಓದಲು ಸಾಧ್ಯವಾಗುವುದಿಲ್ಲ, ಜೊತೆಗೆ ಖಾಸಗಿ ವಸ್ತುಗಳಿಗೆ ಸ್ವಯಂಚಾಲಿತ ಕ್ಲೌಡ್ ಸಿಂಕ್ ಮಾಡುವುದನ್ನ ನಿಷ್ಕ್ರಿಯಗೊಳಿಸಿ ಇದರಿಂದ ಎನ್‌ಕ್ರಿಪ್ಶನ್ ಡೇಟಾಗಳನ್ನ ಯಾರು ಕದಿಯಲು ಸಾಧ್ಯವಾಗುವುದಿಲ್ಲ.
ನಿಮ್ಮ ಸಿಕ್ರೇಟ್ಗಳನ್ನ ನಿಮ್ಮ ದಿನಚರಿಯ ಮೂಲಕ ನಿರ್ಮಿಸಲಾಗುತ್ತದೆ. ಒಮ್ಮೆ ಮೊಬೈಲ್ಗಳನ್ನ ಅಪ್ಲಿಕೇಶನ್ ಚೆಕ್ ಮಾಡಿ ರಿವೀವ್ ಮಾಡಿ ಇದರ ಜೊತೆಗೆ ನೀವು ಬಳಸದ ಅಪ್ಲಿಕೇಶನ್‌ಗಳನ್ನು ಅನ್ಇನ್ಸ್ಟಾಲ್ ಮಾಡಿ. ಪಾಸ್‌ವರ್ಡ್‌ಗಳನ್ನ ಬದಲಾಯಿಸುತ್ತಿರಿ. ಸೋಶಿಯಲ್ ಮೀಡಿಯಾಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನ ಹಂಚಿಕೊಳ್ಳುವುದನ್ನ ತಪ್ಪಿಸಿ, ಹೀಗೆ ಸ್ಥಿರವಾದ ಗೌಪ್ಯತೆಗಳನ್ನ ಕಾಪಾಡಿಕೊಳ್ಳುವುದರಿಂದ ನಿಮ್ಮ ಡೇಟಾಗಳು ಸುರಕ್ಷಿತವಾಗಿರುತ್ತದೆ.
ನ್ಯೂಸ್ 18 ಕನ್ನಡ ಟೆಕ್ನಾಲಜಿ ವಿಭಾಗದಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಹಿತಿ, ಮೊಬೈಲ್ ವಿಮರ್ಶೆಗಳು, ಗ್ಯಾಜೆಟ್ಗಳು, ತಂತ್ರಜ್ಞಾನ ಸಲಹೆಗಳು, ಇ-ಕಾಮರ್ಸ್ ಮಾರಾಟ, ಆನ್‌ಲೈನ್ ಶಾಪಿಂಗ್, ಅಪ್ಲಿಕೇಶನ್ಗಳು, ವಾಟ್ಸಾಪ್ ಅಪ್ಡೇಟ್ಸ್, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
December 02, 2025 7:20 PM IST