Last Updated:
ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮಾದಕ ವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ (Dakshina Kannada) ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ (Govt Hospital) ಮಾದಕ ವ್ಯಸನಿಗಳ (Drug Addicts) ಕಾಟ ಅಧಿಕವಾಗಿದ್ದು, ಕೇವಲ ಏಳೇ ತಿಂಗಳಲ್ಲಿ 2ಲಕ್ಷ ದಂಡ (Fine) ವಸೂಲಿಯಾಗಿದೆ. ವೆನ್ಲಾಕ್ ಆಸ್ಪತ್ರೆ ಒಳಗೆ ಮದ್ಯದ ಪ್ಯಾಕೆಟ್, ಬಾಟಲಿ, ಸಿಗರೇಟ್, ಗುಟ್ಕಾ ತೆಗೆದುಕೊಂಡು ಹೋದವರಿಗೆ ದಂಡ ಹಾಕಲಾಗುತ್ತಿದೆ. ಈ ಮೂಲಕ ನೂತನ ವೆನ್ಲಾಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಾದಕ ದ್ರವ್ಯ ಸಂಪೂರ್ಣ ನಿಷೇಧ ಮಾಡಲಾಗಿದ್ದು, ಧೂಮಪಾನ, ಮದ್ಯಪಾನ, ಪಾನ್ ಗುಟ್ಕಾದ ವಿರುದ್ಧ ಸಮರ ಸಾರಲಾಗುತ್ತಿದೆ.
ಆಸ್ಪತ್ರೆಗೆ ಬರುವ ಪ್ರತಿ ರೋಗಿಗಳು ಹಾಗೂ ರೋಗಿಗಳ ಜೊತೆಗಿರುವವರನ್ನು ಮುಖ್ಯದ್ವಾರದಲ್ಲಿಯೇ ಆಸ್ಪತ್ರೆಯ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದೆ. ಚೆಕ್ ಅಪ್ ವೇಳೆ ವಿಸ್ಕಿ ಪ್ಯಾಕೆಟ್, ತಂಬಾಕು, ಸಿಗರೇಟ್ ಸಿಕ್ಕರೆ ಅಲ್ಲೇ ಸೀಜ್ ಮಾಡಲಾಗುತ್ತಿದೆ. ಜೊತೆಗೆ ಸುಮಾರು ಐನೂರು ರೂಪಾಯಿವರೆಗೆ ದಂಡ ಹಾಕಲಾಗುತ್ತದೆ.
2025ರಲ್ಲಿ ಮಾರ್ಚ್‍ನಿಂದ ದಿನದ 24ಗಂಟೆಗಳೂ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಾರ್ಚ್‍ನಿಂದ ನವೆಂಬರ್‍ವರೆಗೆ 2.12ಲಕ್ಷ ದಂಡ ಸಂಗ್ರಹವಾಗಿದೆ. ಜಿಲ್ಲಾ ಟೊಬ್ಯಾಕೋ ಕಂಟ್ರೋಲಿಗ್ ಸೆಲ್‍ನಿಂದ ಕಾರ್ಯಾಚರಣೆ ನಡೆಸುತ್ತಿದೆ.
Dakshina Kannada,Karnataka
December 03, 2025 1:02 PM IST