Last Updated:
ಕಾಂತಾರ ಚಾಪ್ಟರ್ -1 ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಕುಟುಂಬ, ಹೊಂಬಾಳೆ ಫಿಲ್ಮ್ಸ್ ತಂಡ ಬಾರಬೈಲ್ ವಾರಾಹಿ ಪಂಜುರ್ಲಿ ಕ್ಷೇತ್ರದಲ್ಲಿ ಹರಕೆಯ ನೇಮೋತ್ಸವ ಸೇವೆ ಸಲ್ಲಿಸಿದರು.
ಮಂಗಳೂರು: ಕಾಂತಾರ ಚಾಪ್ಟರ್ -1 ರ ಅದ್ಭುತ ಯಶಸ್ಸಿನ (Success) ಬಳಿಕ ಹೊಂಬಾಳೆ ಚಿತ್ರತಂಡ ಮಂಗಳೂರಿನಲ್ಲಿ ಹರಕೆಯ ನೇಮೋತ್ಸವ ಒಪ್ಪಿಸಿದೆ. ಮಂಗಳೂರಿನ (Mangaluru) ಕಾರಣಿಕ ಪ್ರಸಿದ್ಧ ಬಾರಬೈಲ್ ನ ಜಾರಂದಾಯ ಮತ್ತು ವರಾಹ ಪಂಜುರ್ಲಿ ಕ್ಷೇತ್ರದಲ್ಲಿ (Holy Place) ವರಾಹಿ ಪಂಜುರ್ಲಿಗೆ ಹರಕೆಯ ಸೇವೆ (Service) ಒಪ್ಪಿಸಲಾಗಿದೆ.
ನಟ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಮತ್ತಿಬ್ಬರು ಮಕ್ಕಳ ಸಹಿತ ಕುಟುಂಬಿಕರು ಹರಕೆಯ ಕೋಲದಲ್ಲಿ ಪಾಲ್ಗೊಂಡಿದ್ದರು. ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಸೇರಿದಂತೆ ನಟರಾದ ಗೌತಮ್ ಶನಿಲ್ & ಸ್ವರಾಜ್ ಶೆಟ್ಟಿ, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಇನ್ನಿತರರು ನೇಮೋತ್ಸವದಲ್ಲಿ ಪಾಲ್ಗೊಂಡರು.
ಈ ಹಿಂದಿನ ಕಾಂತಾರಾ ಚಿತ್ರದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಪಚ್ಚನಾಡಿ ಸಮೀಪದ ಅಣ್ಣಪ್ಪ ಪಂಜುರ್ಲಿ ಕ್ಷೇತ್ರದಲ್ಲಿ ಹರಕೆ ಸೇವೆ ಒಪ್ಪಿಸಿದ್ದರು. ಕಳೆದ ಏಪ್ರಿಲ್‌ನಲ್ಲಿ ರಿಷಬ್ ಶೆಟ್ಟಿ ಬಾರೆಬೈಲ್‌ನಲ್ಲಿ ನಡೆದ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಮಗನ ಹುಟ್ಟುಹಬ್ಬದ ದಿನ ಬಾರೆಬೈಲು ನೇಮೋತ್ಸವಕ್ಕೆ ರಿಷಬ್ ಕುಟುಂಬ ಸಮೇತ ಭಾಗವಹಿಸಿದ್ದರು.
ಈಗ ಅದೇ ದೈವಸ್ಥಾನದಲ್ಲಿ ಹೊಂಬಾಳೆ ತಂಡ & ರಿಷಬ್ ಶೆಟ್ಟಿ ವಾರಾಹಿ ಪಂಜುರ್ಲಿಗೆ ಹರಕೆಯ ನೇಮೋತ್ಸವ ಒಪ್ಪಿಸಿದ್ದಾರೆ. ಕಾಂತಾರಾ ಚಾಪ್ಟರ್ ಒಂದರ ಅದ್ಭುತ ಯಶಸ್ಸಿನ ಬಳಿಕ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹರಕೆ ಸೇವೆ ಒಪ್ಪಿಸಿದ್ದಾರೆ. ನೇಮೋತ್ಸವದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಮಾಡಲಾಗಿದೆ.
ರಿಷಬ್ ಶೆಟ್ಟಿ ಅವರು ಕಳೆದ ಏಳು ತಿಂಗಳ ಹಿಂದೆ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ಉತ್ಸವದಲ್ಲಿ ಭಾಗಿ ಆಗಿದ್ದಾರೆ. ವಾರಾಹಿ ಪಂಜುರ್ಲಿ ದೈವದ ಬಳಿ ನಟ ಕಷ್ಟ ಹೇಳಿಕೊಂಡಿದ್ದರು. ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವದ ಅಭಯ ಕೊಟ್ಟಿತ್ತು. ‘ನಿನಗೆ ದುಶ್ಮನ್‌ಗಳಿದ್ದಾರೆ, ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ. ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನಂಬಿದ ದೈವ ಕೈಬಿಡಲ್ಲ. ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳಲ್ಲ, ನೋಡಿಕೊಳ್ತೇನೆ. ಹರಕೆ ಮಾಡಿಕೋ ಐದು ತಿಂಗಳ ಗಡುವಲ್ಲಿ ಒಳ್ಳೇದು ಮಾಡುತ್ತೇನೆ’ ಎಂದು ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವ ಅಭಯ ನೀಡಿತ್ತು, ಅಚ್ಚರಿಯಂತೆ ದೈವ ನುಡಿದಂತೆಯೇ ಆಯಿತು!
ವಾರಾಹಿ ಪಂಜುರ್ಲಿಯ ಆಶೀರ್ವಾದ
Dakshina Kannada,Karnataka
December 07, 2025 11:48 AM IST
Miracle: ಮಂಗಳೂರಲ್ಲಿ ನಡೆದಿದ್ದು ನಿಜಕ್ಕೂ ಅಚ್ಚರಿ, 7 ತಿಂಗಳ ಹಿಂದೆ ಅಭಯ ನೀಡಿದ್ದ ದೈವ! ರಿಷಬ್ ಒಪ್ಪಿಸಿದ ಹರಕೆಗಿತ್ತು ಭಾರೀ ಮಹತ್ವ!!