Last Updated:
ಪುತ್ತೂರು ನೆಲ್ಲಿಕಟ್ಟೆಯಲ್ಲಿ 80 ಮೀಟರ್ ಎತ್ತರದ ರಾಷ್ಟ್ರ ಧ್ವಜಸ್ತಂಭ ನಿರ್ಮಾಣವಾಗುತ್ತಿದೆ, 1 ಕೋಟಿ ಅನುದಾನದಲ್ಲಿ, ಗಣರಾಜ್ಯೋತ್ಸವಕ್ಕೆ ಪೂರ್ಣಗೊಳ್ಳಲಿದೆ, ನಿರ್ವಹಣೆ ಪುತ್ತೂರು ನಗರಸಭೆ.
ದಕ್ಷಿಣ ಕನ್ನಡ: ಕರ್ನಾಟಕದ ಮೂರನೇ ಅತೀ ಎತ್ತರದ (Hight) ರಾಷ್ಟ್ರ ಧ್ವಜಸ್ತಂಭವು ಪುತ್ತೂರು ನಗರದ ನೆಲ್ಲಿಕಟ್ಟೆಯಲ್ಲಿ ನಿರ್ಮಾಣಗೊಳ್ಳಲಿದ್ದು, ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು. ಶಾಸಕರ ಅನುದಾನ ರೂ.25 ಲಕ್ಷ, ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ 35 ಲಕ್ಷ ಹಾಗೂ ನಗರಸಭೆಯ ರೂ.40 ಲಕ್ಷ ಸೇರಿ ಒಟ್ಟು 1 ಕೋಟಿ (Crore) ಅನುದಾನದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯ ತುದಿಯಲ್ಲಿ ನೆಲ್ಲಿಕಟ್ಟೆಯ ಪಾರ್ಕ್ನಲ್ಲಿ (Park) ಈ ರಾಷ್ಟ್ರ ಧ್ವಜ ನಿರ್ಮಾಣವಾಗಲಿದೆ.
ತಾಲೂಕು ಕೇಂದ್ರವೊಂದರಲ್ಲಿ ನಿರ್ಮಾಣಗೊಳ್ಳಲಿರುವ ಈ ಧ್ವಜಸ್ತಂಭ ಪುತ್ತೂರಿನ ಇತಿಹಾಸದ ಪುಟದಲ್ಲಿ ಬರೆದಿಡುವಂತಹುದಾಗಿದೆ ಅನ್ನೋದು ಧ್ವಜಸ್ತಂಭದ ನಿರ್ಮಾಣದ ರೂವಾರಿ ಶಾಸಕ ಅಶೋಕ್ ಕುಮಾರ್ ರೈ ಮಾತಾಗಿದೆ. ರಾಷ್ಟ್ರ ಧ್ವಜಸ್ತಂಭ ನಿರ್ಮಿಸಿ ರಾಷ್ಟ್ರಧ್ವಜ ನಿರ್ಮಾಣ ಮಾಡಬೇಕೆಂಬ ಕನಸು ನನಸಾಗುತ್ತಿದೆ. ಇದು ಬೆಂಚ್ ಮಾರ್ಕ್ ಕೆಲಸವಾಗಿ ಪರಿಗಣಿಸಲಿದೆ.
ತಾಲೂಕು ಮಟ್ಟದಲ್ಲಿ ಇಷ್ಟು ದೊಡ್ಡ ಧ್ವಜಸ್ತಂಭ ನಿರ್ಮಾಣವಾಗುತ್ತಿರುವುದು ಪುತ್ತೂರಿನಲ್ಲೇ ಪ್ರಥಮ. ಇದನ್ನು ನೋಡಿದಾಗ ಪ್ರತಿಯೊಬ್ಬರಲ್ಲೂ ರೋಮಾಂಚನ, ದೇಶಭಕ್ತಿ ಉಕ್ಕುವಂತೆ ಆಗಲಿದೆ ಎಂದರು. ಈ ಗಾತ್ರದ ಒಂದು ಧ್ವಜಕ್ಕೆ ರೂ. 40 ಸಾವಿರವಿದೆ. ವರ್ಷದಲ್ಲಿ 3 ಬಾರಿ ಬದಲಾವಣೆ ಮಾಡಬೇಕಾಗುತ್ತದೆ. ನಗರಸಭೆ ಮುಂದೆ ನಿರ್ವಹಣೆ ಮಾಡಲಿದೆ. ಗಣರಾಜ್ಯೋತ್ಸವಕ್ಕೆ ಮೊದಲು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯದ ಅತೀ ಎತ್ತರದ ಧ್ವಜಸ್ತಂಭವಿದ್ದರೆ, ಎರಡನೇ ಸ್ಥಾನದಲ್ಲಿ ಹಂಪಿ ವಿಜಯನಗರದಲ್ಲಿರುವ ಧ್ವಜಸ್ತಂಭವಾಗಿದೆ. ಮೂರನೇಯ ಅತೀ ದೊಡ್ಡ ಧ್ವಜಸ್ತಂಭ ಪುತ್ತೂರಿನಲ್ಲಿ ನಿರ್ಮಾಣವಾಗಲಿದ್ದು ನಾಲ್ಕನೇ ಸ್ಥಾನದಲ್ಲಿ ಮಂಗಳೂರಿನಲ್ಲಿರುವ ಧ್ವಜಸ್ತಂಭ ಈ ಸಾಲಿಗೆ ಸೇರಿದೆ.
ಇದೇ ಜನವರಿಗೆ ಉದ್ಘಾಟನೆ
80 ಮೀಟರ್ ಎತ್ತರದಲ್ಲಿ ಧ್ವಜಸ್ತಂಭ ನಿರ್ಮಾಣಗೊಳ್ಳಲಿದ್ದು, 60*40 ಅಡಿ ಸುತ್ತಳತೆಯ ರಾಷ್ಟ್ರಧ್ವಜ ಇದರಲ್ಲಿ ಅಳವಡಿಕೆಯಾಗಲಿದೆ. 1270 ಎಂ.ಎಂ. ತಳಪಾಯ ವಿದ್ಯುತ್ ಚಾಲಿತ ಮೋಟಾರ್ ವ್ಯವಸ್ಥೆ ಸಿಗ್ನಲ್ ಲೈಟ್, ಫೋಕಸ್ ಲೈಟ್ ಅಳವಡಿಕೆಯೂ ಆಗಲಿದೆ. 99 ವರ್ಷಗಳ ಕಾಲ ಈ ಧ್ವಜಸ್ತಂಭ ಬಾಳಿಕೆ ಬರಲಿದ್ದು, ವರ್ಷಕ್ಕೆ ಮೂರು ಬಾರಿ ಇದರ ಧ್ವಜವನ್ನು ಬದಲಾಯಿಸಲಾಗುತ್ತದೆ. ಈ ಧ್ವಜಸ್ತಂಭದ ನಿರ್ವಹಣೆಯನ್ನು ಪುತ್ತೂರು ನಗರಸಭೆ ವಹಿಸಲಿದ್ದು, ಜನವರಿ 26 ಗಣರಾಜ್ಯೋತ್ಸವದಂದು ಈ ಧ್ವಜಸ್ತಂಭ ಎದ್ದು ನಿಲ್ಲುವ ನಿರೀಕ್ಷೆಯಿದೆ.
Dakshina Kannada,Karnataka
December 08, 2025 5:23 PM IST