Gandhari Vidya: ಗಾಂಧಾರಿ ವಿದ್ಯೆ ಕಲಿತು ದಾಖಲೆ ಬರೆದ ಪುತ್ತೂರಿನ ಬಾಲಕಿ, ಅದ್ವಿತೀಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆ! | Asia Golden Book of Records | ದಕ್ಷಿಣ ಕನ್ನಡ

Gandhari Vidya: ಗಾಂಧಾರಿ ವಿದ್ಯೆ ಕಲಿತು ದಾಖಲೆ ಬರೆದ ಪುತ್ತೂರಿನ ಬಾಲಕಿ, ಅದ್ವಿತೀಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆ! | Asia Golden Book of Records | ದಕ್ಷಿಣ ಕನ್ನಡ

Last Updated:

ಉಪ್ಪಿನಂಗಡಿ ಹಿರೆಬಂಡಾಡಿ ಗ್ರಾಮದ ಶಮಿಕಾ 24 ಗಂಟೆಗಳಲ್ಲಿ 350 ಮರಳುಚಿತ್ರ ಬಿಡಿಸಿಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿದ್ದಾಳೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಕಲೆ ಎಲ್ಲರಿಗೂ ಸಾಮಾನ್ಯವಾಗಿ ಒಲಿಯಲ್ಲ. ಅದರಲ್ಲೂ ಕಣ್ಣು ತೆರೆದು ಚಿತ್ರಗಳನ್ನು ಬಿಡಿಸುವುದು ಕಷ್ಟ. ಆದ್ರೆ ಕಳೆದ 4 ವರ್ಷಗಳಿಂದ ಗಾಂಧಾರಿ ವಿದ್ಯೆಯನ್ನು (Gandhari Vidya) ಅಭ್ಯಸಿಸುತ್ತಿದ್ದ ಉಪ್ಪಿನಂಗಡಿ (Uppinangadi) ಬಳಿಯ ಹಿರೆಬಂಡಾಡಿ ಗ್ರಾಮದ 14 ರ ಹರೆಯದ ಬಾಲಕಿ ಇದೀಗ ತನ್ನ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ನಿರಂತರವಾಗಿ 24 ಗಂಟೆಗಳ ಕಾಲ 350 ಮರಳುಚಿತ್ರ ( ಸ್ಯಾಂಡ್ ಆರ್ಟ್) ಬಿಡಿಸಿದ್ದಾರೆ. ಈ ಮೂಲಕ ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ (Asia Golden Book of Records) ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಳ್ಳುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ.

ಶಮಿಕಾಳ `ಗೋಲ್ಡನ್’ ಹೆಜ್ಜೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹಿರೆಬಂಡಾಡಿ ಗ್ರಾಮದ ಕೇಶವ ಪಿ.ಎಂ ಮತ್ತು ಗೀತಾಮಣಿ ದಂಪತಿಯ ಪುತ್ರಿ ಶಮಿಕಾ ಭಾನುವಾರ ತನ್ನ ವಿಶಿಷ್ಟ ಸಾಧನೆ ಮಾಡುವ ಮೂಲಕ ತನ್ನ ಬದುಕಿನ ಗೋಲ್ಡನ್ ಗುರಿಯನ್ನು ಮುಟ್ಟಿದ್ದಾಳೆ. ಕೊರೊನಾ ಸಮಯದಲ್ಲಿ ಆನ್‍ಲೈನ್ ಮೂಲಕ ಈ ಗಾಂಧಾರಿ ವಿದ್ಯೆಯನ್ನು ಕಲಿತ ಈ ಬಾಲಕಿ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಓದುವ ಬರೆಯುವ ಹಾಗೂ ಚಿತ್ರಗಳನ್ನು ಗುರುತಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಳು. ಇದೇ ವಿದ್ಯೆಯಲ್ಲಿ ಸಾಧನೆ ಮಾಡಬೇಕು ಎಂಬ ಹಿನ್ನಲೆಯಲ್ಲಿ ಪುತ್ತೂರಿನ ವರ್ಣ ಕುಟೀರ ಚಿತ್ರಕಲಾ ಶಾಲೆ ಸೇರಿದ ಶಮಿಕಾ ಮರಳುಚಿತ್ರ ಕಲೆಯನ್ನು ಅಭ್ಯಾಸ ಮಾಡಿದ್ದಾಳೆ.

ದಾಖಲೆ ಬರೆದ ಸಾಧಕಿ

ಇದೀಗ ವರ್ಣಕುಟೀರ ಚಿತ್ರಕಲಾ ಶಾಲೆಯಲ್ಲಿಯೇ ಇದೇ ಡಿಸೆಂಬರ್ ಶನಿವಾರ ಬೆಳಗ್ಗೆ 10 ಗಂಟೆಯಿಂದ ಭಾನುವಾರ ಬೆಳಿಗ್ಗೆ 10 ಗಂಟೆಯ ತನಕ ನಿರಂತರವಾಗಿ ಮರಳುಚಿತ್ರ ಬಿಡಿಸುವ ಮೂಲಕ ಕಲಾ ಪ್ರಪಂಚದಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ಪ್ರತಿ ಮೂರು ಗಂಟೆಗೊಮ್ಮೆ 15 ನಿಮಿಷ ವಿಶ್ರಾಂತಿ ಪಡೆದುಕೊಂಡು 24 ಗಂಟೆಯಲ್ಲಿ 300 ಚಿತ್ರಗಳನ್ನು ಬಿಡಿಸುವ ಗುರಿ ಹೊಂದಿದ್ದ ಈಕೆ 350 ಚಿತ್ರಗಳನ್ನು ಬಿಡಿಸುವ ಕಲಾ ಚಾತುರ್ಯ ಅಭಿವ್ಯಕ್ತಪಡಿಸಿದ್ದಾಳೆ.

ಒಂದೆಡೆ ಗಾಯಕರು ಹಾಡುಗಳನ್ನು ಹಾಡುತ್ತಿದ್ದರೆ, ಇನ್ನೊಂದೆಡೆ ಅದೇ ಹಾಡಿನ ಭಾವವನ್ನು ಮರಳುಚಿತ್ರದಲ್ಲಿ ಪಡಿಮೂಡಿಸುವ ಪರಿ ನೋಡುಗರನ್ನೂ ಅಚ್ಚರಿಗೊಳಿಸಿತು.

ಇದನ್ನೂ ಓದಿ: Quran: ಇಸ್ಲಾಂ ಮತಕ್ಕೆ ಅಪೂರ್ವ ಕೊಡುಗೆ ನೀಡಿದ ಯುವತಿ! ಸತತ 5 ವರ್ಷದ ಶ್ರಮದಿಂದ ಅರಳಿತು ಕುರ್-ಆನ್‌ ಹಸ್ತಪ್ರತಿ

ಶಂಖನಾದದೊಂದಿಗೆ ಆರಂಭಗೊಂಡ ಈ ಕಲಾಚಿತ್ರದ ಸಾಹಸದಲ್ಲಿ ಗಾಯಕರು 300 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. ಕೊನೆಗೆ ಮಹಾಲಿಂಗೇಶ್ವರ ದೇವರ ಹಾಡಿನೊಂದಿಗೆ ಶಮಿಕಾ ಸಾಧನೆ ಪೂರ್ಣಗೊಂಡಿತು.ಸಾಧಕಿ ಶಮಿಕಾ ಪ್ರಸ್ತುತ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಕೆಯ ವಿಶಿಷ್ಟ ಸಾಧನೆಗಾಗಿ ಏಷ್ಯನ್ ಗೋಲ್ಡನ್ ಬುಕ್ ಆಫ್ ರೆಕಾಡ್ರ್ಸ್ ಪ್ರಶಸ್ತಿ ಪತ್ರವನ್ನು ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಸಂಸ್ಥೆಯ ಸ್ಟೇಟ್ ಕೋ-ಆರ್ಡಿನೇಟರ್ ಭರತ್ ಕಾಮತ್ ಹಸ್ತಾಂತರಿಸಿದ್ದಾರೆ.