Inspirational Story: ಟ್ರೋಲ್‌ ಮಾಡೋರು ಈಗೇನಂತಾರೆ? ಗಂಡಸರಿಗೇ ಕಷ್ಟ ಆಗೋ ಕೆಲಸವನ್ನು ತರಬೇತಿ ಪಡೆಯದೇ ಮಾಡ್ತಿರೋ ಗಟ್ಟಿಗಿತ್ತಿಇವರು! | Shankravva Lambani from Dakshina Kannada excels in road roller driving | ದಕ್ಷಿಣ ಕನ್ನಡ

Inspirational Story: ಟ್ರೋಲ್‌ ಮಾಡೋರು ಈಗೇನಂತಾರೆ? ಗಂಡಸರಿಗೇ ಕಷ್ಟ ಆಗೋ ಕೆಲಸವನ್ನು ತರಬೇತಿ ಪಡೆಯದೇ ಮಾಡ್ತಿರೋ ಗಟ್ಟಿಗಿತ್ತಿಇವರು! | Shankravva Lambani from Dakshina Kannada excels in road roller driving | ದಕ್ಷಿಣ ಕನ್ನಡ

Last Updated:

ಶಂಕ್ರವ್ವ ಲಂಬಾಣಿ ಹಾವೇರಿಯಿಂದ ದಕ್ಷಿಣ ಕನ್ನಡಕ್ಕೆ ಬಂದು ರೋಡ್ ರೋಲರ್ ಚಾಲಕಿಯಾಗಿ ಸಾಧನೆ ಮಾಡಿದ್ದಾರೆ. ರಾಧಾಕೃಷ್ಣ ನಾಯಕ್ ಅವರ ಕಂಪನಿಯಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಹೆಣ್ಣು ಒಂದು ಅಬಲೆಯಲ್ಲ, ಸಬಲೆ ಅನ್ನೋದನ್ನ ಸಾಬೀತುಪಡಿಸುವ ಸಾಕಷ್ಟು ಉದಾಹರಣೆಗಳು (Example) ನಮ್ಮ ನಿಮ್ಮ ಮುಂದಿದೆ. ಬೈಕ್, ಕಾರಿನಿಂದ‌ ಹಿಡಿದು ಯುದ್ಧ ವಿಮಾನಗಳನ್ನು ಓಡಿಸುವಷ್ಟು ಸಾಮರ್ಥ್ಯದ (Ability)  ಮೂಲಕ ಯಶಸ್ಸನ್ನೂ ಗಳಿಸಿಕೊಂಡಿದ್ದಾಳೆ.

ರೋಡ್‌ ರೋಲರ್‌ ವೃತ್ತಿ ಮಾಡುತ್ತಿರುವ ಜವಾರಿ ನೆಲದ ಮಹಿಳೆ

ಅಂತಹುದೇ ಓರ್ವ ಗಟ್ಟಿಗಿತ್ತಿ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆ. ಹೌದು ಇವರು ಹೆಸರಿಗೋ, ಹವ್ಯಾಸಕ್ಕೋ ಇವರು ಈ ವೃತ್ತಿಯಲ್ಲಿ ತೊಡಗಿಕೊಂಡವರಲ್ಲ. ಹಸಿವು ಈಕೆಯನ್ನು ಈ‌ ವೃತ್ತಿಯ ಕಡೆಗೆ ಕೊಂಡೊಯ್ದಿದೆ. ಮೂಲತಃ ಹಾವೇರಿ ಜಿಲ್ಲೆಯ ನಿವಾಸಿಯಾಗಿರುವ ಶಂಕ್ರವ್ವ ಲಂಬಾಣಿ ಈ ಕಥೆಯ ನಾಯಕಿ. ಜೀವನ ನಿರ್ವಹಣೆಗಾಗಿ ಈಕೆ ಆಯ್ದುಕೊಂಡಿರೋದು ರಸ್ತೆ ಡಾಂಬರೀಕರಣ ಮಾಡಲು ಬಳಸುವ ರೋಡ್ ರೋಲರ್ ಚಾಲನಾ ವೃತ್ತಿಯನ್ನು.

40 ವರ್ಷದ ಶಂಕ್ರವ್ವ ಅಲ್ವೇ ನಿಜವಾದ ʼಹೆಣ್ಮಗುʼ

40 ವರ್ಷ ಪ್ರಾಯದ ಶಂಕ್ರವ್ವ ಸುಮಾರು 20 ವರ್ಷಗಳ ಹಿಂದೆ ಹಾವೇರಿಯಿಂದ ಕೆಲಸ ಹುಡುಕಿಕೊಂಡು ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದರು. ಲೋಕೋಪಯೋಗಿ ಇಲಾಖೆಯ A 1 ಗುತ್ತಿಗೆದಾರರಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಾಧಾಕೃಷ್ಣ ನಾಯಕ್ ಅವರಿಗೆ ತಮ್ಮ ಕಂಪನಿಯಲ್ಲಿ ಕೂಲಿ‌ ಕೆಲಸ ಮಾಡಲು ಅವಕಾಶವನ್ನು ಅಂದು ನೀಡಿದ್ದರು. ಆ ಬಳಿಕ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತನ್ನನ್ನು ತೊಡಗಿಸಿಕೊಂಡ ಶಂಕ್ರವ್ವ ಕೆಲಸದಲ್ಲಿ ಪಡೆದ ಅನುಭವದ ಮೇಲೆ ಇಂದು ಮೇಸ್ತ್ರಿಯಾಗಿ ಬಡ್ತಿ ಹೊಂದಿದ್ದಾರೆ.

ಯಾವುದೇ ಟ್ರೈನಿಂಗ್‌ ತಗೊಂಡಿಲ್ಲ!

ಮೇಸ್ತ್ರಿಯಾಗಿ ದುಡಿಯುತ್ತಿದ್ದ ಸಂದರ್ಭದಲ್ಲಿ ಶಂಕ್ರವ್ವ ತಮ್ಮ ಕಂಪನಿ ಮಾಲಕರಾದ ರಾಧಾಕೃಷ್ಣ ನಾಯಕ್ ರಲ್ಲಿ ಪ್ರತಿದಿನವೂ ಒಂದು ಬೇಡಿಕೆಯನ್ನು ಇಡುತ್ತಿದ್ದರಂತೆ. ತಮಗೆ ಒಂದು ಬಾರಿ ರೋಡ್ ರೋಲರ್ ಚಲಾಯಿಸಲು ಅವಕಾಶ ನೀಡಬೇಕೆಂದು. ಇದಕ್ಕಾಗಿ ಅವರು ಕೆಲಸ ಮಾಡುವ ಸಂದರ್ಭದಲ್ಲೆಲ್ಲಾ ರೋಡ್ ರೋಲರ್ ಓಡಿಸುವ ವಿಧಾನವನ್ನು ನೋಡಿಕೊಂಡೇ ಕಲಿತಿದ್ದರು.

ಚಾರ್ಮಾಡಿಯಲ್ಲಿ ಚಾಲನೆ ಮಾಡಿದ ಗಟ್ಟಿಗಿತ್ತಿ

ಒಂದು ಬಾರಿ ಕೈಗೆ ಸಿಕ್ಕಿದ್ದಲ್ಲಿ ಓಡಿಸಬಲ್ಲೆ ಎನ್ನುವ ಛಲ ಆಕೆಯಲ್ಲಿದ್ದ ಕಾರಣವೇ ಆಕೆ‌ ನಿರಂತರವಾಗಿ ಮಾಲಕರ ಬಳಿ ಅವಕಾಶ ನೀಡುವಂತೆ ಒತ್ತಾಯಿಸಿದ್ದರು. 2021 ರಲ್ಲಿ ಚಾರ್ಮಾಡಿ ರಾಜ್ಯ ಹೆದ್ದಾರಿಯ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಮಾಲಕ ರಾಧಾಕೃಷ್ಣ ನಾಯಕ್ ಶಂಕ್ರವ್ವ ರಿಗೆ ರೋಡ್ ರೋಲರ್ ಚಲಾಯಿಸಲು ಮೊದಲ ಬಾರಿಗೆ ಅವಕಾಶ ನೀಡಿದ್ದರು. ಆ ಬಳಿಕದಿಂದ ಶಂಕ್ರವ್ವ ರೋಡ್ ರೋಲರ್ ಚಾಲಕಿಯಾಗಿ ಸೈ ಎನಿಸಿಕೊಂಡಿದ್ದರು.

ಇಡೀ ಮನುಕುಲಕ್ಕೆ ಉದಾಹರಣೆ ಈ ಮಹಿಳೆ