Last Updated:
Wi-Fi: ನಿಮ್ಮ ಫೋನ್‌ನಲ್ಲಿ ವೈ-ಫೈ ಆನ್ ಇದ್ರೆ, ಅದು ಸುಮ್ನೆ ಕೂರಲ್ಲ. ಸುತ್ತಮುತ್ತ ಯಾವ್ದಾದ್ರೂ ನೆಟ್‌ವರ್ಕ್ ಸಿಗುತ್ತಾ ಅಂತ ಹುಡುಕ್ತಾ ಇರುತ್ತೆ. ಅಷ್ಟೇ ಅಲ್ಲ, ನೀವು ಈ ಹಿಂದೆ ಕನೆಕ್ಟ್ ಆಗಿದ್ದ ಹೆಸರುಗಳನ್ನ ಹೋಲುವ ನೆಟ್‌ವರ್ಕ್ ಸಿಕ್ಕರೆ ಆಟೋಮ್ಯಾಟಿಕ್ ಆಗಿ ಕನೆಕ್ಟ್ ಆಗಿಬಿಡುತ್ತೆ.
ನಾವೆಲ್ಲ ಮನೆಯಿಂದ ಹೊರಡುವಾಗ ಕೀ, ಪರ್ಸ್, ಬ್ಯಾಗ್, ಹೆಲ್ಮೆಟ್ ಎಲ್ಲಾ ಇದ್ಯಾ ಅಂತಾ ಒಂದ್ಸಲ ಚೆಕ್ ಮಾಡ್ತೀವಿ. ಆದ್ರೆ ಜೇಬಲ್ಲಿರೋ ಫೋನ್‌ನಲ್ಲಿರೋ ‘ವೈ-ಫೈ’ (Wi-Fi) ಆಫ್ ಮಾಡಿದ್ದೀವಾ ಅಂತ ನೋಡೋದು ಮರೆತೇ ಬಿಡ್ತೀವಿ. ಸುಮ್ನೆ ಆನ್ ಇದ್ರೆ ಏನಾಗುತ್ತೆ ಬಿಡಿ ಅಂತ ನೀವು ‘ನೆಗ್ಲೆಕ್ಟ್’ (Neglect) ಮಾಡಿದ್ರೆ, ಕಳ್ಳರಿಗೆ ಮಣೆ ಹಾಕಿದಂಗೆ. ಇವತ್ತಿನ ದಿನಗಳಲ್ಲಿ ‘ಸೈಬರ್ ಕ್ರೈಮ್’ (Cyber Crime) ಎಷ್ಟರ ಮಟ್ಟಿಗೆ ನಡೀತಿದೆ ಅಂದ್ರೆ, ನಿಮ್ಮ ಸಣ್ಣ ತಪ್ಪು ನಿಮ್ಮ ‘ಡೇಟಾ’ (Data) ಮತ್ತು ದುಡ್ಡಿಗೆ ಕನ್ನ ಹಾಕಬಹುದು. ಹಾಗಾದ್ರೆ ವೈ-ಫೈ ಆನ್ ಇಟ್ಟರೆ ಏನೆಲ್ಲಾ ಅಪಾಯ ಕಾದಿದೆ ಅಂತ ನೋಡೋಣ ಬನ್ನಿ.
ನಿಮ್ಮ ಫೋನ್‌ನಲ್ಲಿ ವೈ-ಫೈ ಆನ್ ಇದ್ರೆ, ಅದು ಸುಮ್ನೆ ಕೂರಲ್ಲ. ಸುತ್ತಮುತ್ತ ಯಾವ್ದಾದ್ರೂ ನೆಟ್‌ವರ್ಕ್ ಸಿಗುತ್ತಾ ಅಂತ ಹುಡುಕ್ತಾ ಇರುತ್ತೆ. ಅಷ್ಟೇ ಅಲ್ಲ, ನೀವು ಈ ಹಿಂದೆ ಕನೆಕ್ಟ್ ಆಗಿದ್ದ ಹೆಸರುಗಳನ್ನ ಹೋಲುವ ನೆಟ್‌ವರ್ಕ್ ಸಿಕ್ಕರೆ ಆಟೋಮ್ಯಾಟಿಕ್ ಆಗಿ ಕನೆಕ್ಟ್ ಆಗಿಬಿಡುತ್ತೆ. ಕೆಫೆ, ಬಸ್ ಸ್ಟ್ಯಾಂಡ್ ಅಥವಾ ರೈಲ್ವೆ ಸ್ಟೇಷನ್‌ಗಳಲ್ಲಿ ಸಿಗೋ ಓಪನ್ ವೈ-ಫೈಗಳು ಸೇಫ್ ಇರಲ್ಲ. ಇಲ್ಲಿ ಯಾವುದೇ ಪಾಸ್‌ವರ್ಡ್ ಇಲ್ಲದೆ ಕನೆಕ್ಟ್ ಆದ್ರೆ, ನಿಮ್ಮ ಫೋನ್‌ನ ಬಾಗಿಲು ಕಳ್ಳರಿಗೆ ತೆರೆದಿಟ್ಟಂತೆ!
ಖದೀಮರು ಈಗ ಎಷ್ಟು ಸ್ಮಾರ್ಟ್ ಆಗಿದ್ದಾರೆ ಅಂದ್ರೆ, ಜನನಿಬಿಡ ಪ್ರದೇಶಗಳಲ್ಲಿ ಅವರೇ ಒಂದು ನಕಲಿ ವೈ-ಫೈ ಸೃಷ್ಟಿ ಮಾಡ್ತಾರೆ. ಅದಕ್ಕೆ “ಫ್ರೀ ಏರ್‌ಪೋರ್ಟ್ ವೈ-ಫೈ” ಅಥವಾ “ಹೋಟೆಲ್ ಗೆಸ್ಟ್ ವೈ-ಫೈ” ಅಂತ ಹೆಸರಿಟ್ಟು ಬಲೆ ಬೀಸಿರ್ತಾರೆ. ಫ್ರೀ ಅಲ್ವಾ ಅಂತ ನೀವು ಕನೆಕ್ಟ್ ಆದ್ರೆ ಮುಗೀತು ಕಥೆ. ಇದನ್ನ ‘ರೋಗ್ ಆಕ್ಸೆಸ್ ಪಾಯಿಂಟ್’ ಅಂತಾರೆ. ಒಮ್ಮೆ ಕನೆಕ್ಟ್ ಆದ್ರೆ ಸಾಕು, ನಿಮ್ಮ ಮೊಬೈಲ್‌ನಲ್ಲಿರೋ ಪಾಸ್‌ವರ್ಡ್, ಮೆಸೇಜ್, ಫೋಟೋ ಮತ್ತು ಬ್ಯಾಂಕ್ ವಿವರಗಳನ್ನ ಸುಲಭವಾಗಿ ಕದಿಯುತ್ತಾರೆ.
ಬರೀ ಸೇಫ್ಟಿ ಮಾತ್ರ ಅಲ್ಲ, ನಿಮ್ಮ ಫೋನ್ ಬ್ಯಾಟರಿ ಲೈಫ್ ಉಳೀಬೇಕು ಅಂದ್ರೂ ವೈ-ಫೈ ಆಫ್ ಮಾಡ್ಬೇಕು. ಯಾಕಂದ್ರೆ ನೀವು ಟ್ರಾವೆಲ್ ಮಾಡುವಾಗ ನಿಮ್ಮ ಫೋನ್ ಸಿಗ್ನಲ್ ಹುಡುಕ್ತಾ ಹುಡುಕ್ತಾ ಚಾರ್ಜ್ ಹೀರ್ಕೊಳ್ಳುತ್ತೆ. ಫೋನ್ ಪರ್ಫಾರ್ಮೆನ್ಸ್ ಕೂಡ ಸ್ಲೋ ಆಗುತ್ತೆ. ಸುಮ್ನೆ ಯಾಕೆ ಬ್ಯಾಟರಿ ಹಾಳು ಮಾಡ್ಕೊತೀರಾ? ಬಳಸದೆ ಇರುವಾಗ ಆಫ್ ಮಾಡೋದೇ ಬುದ್ಧಿವಂತಿಕೆ.
ಸಿಂಪಲ್ ಗುರೂ, ಮನೆಯಿಂದ ಕಾಲು ಆಚೆ ಇಡ್ತಿದ್ದಂಗೆ ವೈ-ಫೈ ಆಫ್ ಮಾಡೋ ಅಭ್ಯಾಸ ಮಾಡ್ಕೊಳ್ಳಿ. ಪಬ್ಲಿಕ್ ಜಾಗದಲ್ಲಿ ಆದಷ್ಟು ನಿಮ್ಮ ಮೊಬೈಲ್ ಡೇಟಾ ಅಥವಾ ನಂಬಿಕಸ್ಥ ವಿಪಿಎನ್ ಬಳಸಿ.
ಹಳೆಯ ಅಥವಾ ಬಳಸದಿರುವ ವೈ-ಫೈ ನೆಟ್‌ವರ್ಕ್‌ಗಳನ್ನು ಫೋನ್ ಲಿಸ್ಟ್‌ನಿಂದ ತೆಗೆಯಿರಿ. ನೆನಪಿರಲಿ, ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಪಬ್ಲಿಕ್ ವೈ-ಫೈ ಬಳಸಬೇಡಿ. ಒಂದು ಸಣ್ಣ ಬಟನ್ ಆಫ್ ಮಾಡುವುದರಿಂದ ಎಷ್ಟೆಲ್ಲಾ ಸಮಸ್ಯೆಗಳನ್ನು ತಪ್ಪಿಸಬಹುದು ಅಲ್ವಾ? ಇಂದೇ ಈ ಅಭ್ಯಾಸ ಮಾಡಿ.
ನ್ಯೂಸ್ 18 ಕನ್ನಡ ಟೆಕ್ನಾಲಜಿ ವಿಭಾಗದಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಹಿತಿ, ಮೊಬೈಲ್ ವಿಮರ್ಶೆಗಳು, ಗ್ಯಾಜೆಟ್ಗಳು, ತಂತ್ರಜ್ಞಾನ ಸಲಹೆಗಳು, ಇ-ಕಾಮರ್ಸ್ ಮಾರಾಟ, ಆನ್ಲೈನ್ ಶಾಪಿಂಗ್, ಅಪ್ಲಿಕೇಶನ್ಗಳು, ವಾಟ್ಸಾಪ್ ಅಪ್ಡೇಟ್ಸ್, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
December 11, 2025 4:20 PM IST