ಸದ್ಯಕ್ಕೆ ನಮ್ಮ ವಾಟ್ಸ್ಯಾಪ್‌ನಲ್ಲಿ ಚಾಟ್ ಕ್ಲಿಯರ್ ಮಾಡ್ಬೇಕು ಅಂದ್ರೆ ಒಂದು ದೊಡ್ಡ ಸಮಸ್ಯೆ ಇದೆ. ‘ಕ್ಲಿಯರ್ ಚಾಟ್’ ಕೊಟ್ರೆ ಫೋಟೋ, ವಿಡಿಯೋ, ಮೆಸೇಜ್ ಎಲ್ಲವೂ ಒಟ್ಟಿಗೆ ಡಿಲೀಟ್ ಆಗಿಬಿಡುತ್ತೆ. ಇಲ್ಲಾಂದ್ರೆ ಒಂದೊಂದೇ ಫೈಲ್ ಸೆಲೆಕ್ಟ್ ಮಾಡಿ ಡಿಲೀಟ್ ಮಾಡ್ಬೇಕು. ಆದ್ರೆ ಹೊಸ ಅಪ್‌ಡೇಟ್ ಬಂದ್ರೆ ಈ ತಲೆನೋವು ಇರಲ್ಲ.
WABetaInfo ವರದಿ ಮಾಡಿರೋ ಪ್ರಕಾರ, ವಾಟ್ಸ್ಯಾಪ್ ಈಗ ಅಡ್ವಾನ್ಸ್ಡ್ ಚಾಟ್ ಕ್ಲಿಯರಿಂಗ್ ಆಯ್ಕೆಯನ್ನ ತರ್ತಿದೆ. ನೀವು ಚಾಟ್ ಕ್ಲಿಯರ್ ಮಾಡೋಕೆ ಹೋದಾಗ ಕೆಳಗಡೆ ಒಂದು ಲಿಸ್ಟ್ ಓಪನ್ ಆಗುತ್ತೆ. ಅದ್ರಲ್ಲಿ ಫೋಟೋಸ್, ವಿಡಿಯೋಸ್, ಆಡಿಯೋ, ಜಿಐಎಫ್ (GIF) ಅಥವಾ ಸ್ಟಿಕ್ಕರ್ಸ್ ಅಂತ ಬೇರೆ ಬೇರೆ ಆಯ್ಕೆಗಳಿರುತ್ತವೆ.
ಉದಾಹರಣೆಗೆ, ನಿಮಗೆ ಆ ಚಾಟ್‌ನಲ್ಲಿರೋ ಫೋಟೋಸ್ ಮಾತ್ರ ಬೇಕು, ಆದ್ರೆ ವಿಡಿಯೋ ಮತ್ತು ವಾಯ್ಸ್ ಮೆಸೇಜ್ ಬೇಡ ಅನ್ಕೊಳ್ಳಿ. ಆಗ ನೀವು ಬರೀ ವಿಡಿಯೋ ಮತ್ತು ಆಡಿಯೋ ಬಾಕ್ಸ್ ಮೇಲೆ ಟಿಕ್ ಮಾಡಿ ‘ಕ್ಲಿಯರ್’ ಕೊಟ್ರೆ ಸಾಕು. ನಿಮ್ಮ ಫೋಟೋಗಳು ಸೇಫ್ ಆಗಿ ಹಾಗೇ ಇರುತ್ತವೆ, ಬೇಡದ ಕಚಡ ಮಾತ್ರ ಡಿಲೀಟ್ ಆಗುತ್ತೆ.
ಅಷ್ಟೇ ಅಲ್ಲ, ನೀವು ‘ಸ್ಟಾರ್’ (Star) ಮಾಡಿರೋ ಅಥವಾ ಮಾರ್ಕ್ ಮಾಡಿರೋ ಮುಖ್ಯವಾದ ಮೆಸೇಜ್‌ಗಳು ಡಿಲೀಟ್ ಆಗಬಾರದು ಅಂದ್ರೆ ಅದಕ್ಕೂ ಆಪ್ಷನ್ ಇರುತ್ತೆ. ಅಚಾನಕ್ ಆಗಿ ಅಥವಾ ಮಿಸ್ಟೇಕ್ ಆಗಿ ಮುಖ್ಯವಾದ ದಾಖಲೆಗಳು ಡಿಲೀಟ್ ಆಗೋದನ್ನ ಈ ಫೀಚರ್ ತಪ್ಪಿಸುತ್ತೆ.
ದಿನಬೆಳಗಾದ್ರೆ ಬರೋ ಗುಡ್ ಮಾರ್ನಿಂಗ್ ಫೋಟೋಗಳು, ಅನಗತ್ಯ ವಿಡಿಯೋಗಳಿಂದ ಫೋನ್ ಮೆಮೊರಿ ಫುಲ್ ಆಗೋಗುತ್ತೆ. ಈ ಹೊಸ ಫೀಚರ್‌ನಿಂದ ನೀವು ನಿರ್ದಿಷ್ಟವಾಗಿ ವಿಡಿಯೋ ಅಥವಾ ಫೋಟೋಗಳನ್ನ ಮಾತ್ರ ಟಾರ್ಗೆಟ್ ಮಾಡಿ ಡಿಲೀಟ್ ಮಾಡೋದ್ರಿಂದ, ಫೋನ್ ಸ್ಪೇಸ್ ಉಳಿಸೋದು ತುಂಬಾನೇ ಈಜಿ ಆಗುತ್ತೆ.
ಸದ್ಯಕ್ಕೆ ಈ ಫೀಚರ್ ಆಂಡ್ರಾಯ್ಡ್ ಫೋನ್‌ಗಳ ಬೀಟಾ ವರ್ಷನ್‌ನಲ್ಲಿ (2.25.34.5) ಟೆಸ್ಟಿಂಗ್ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ರೆ, ಇನ್ನು ಕೆಲವೇ ವಾರಗಳಲ್ಲಿ ನಿಮ್ಮೆಲ್ಲರ ಮೊಬೈಲ್‌ಗೂ ಈ ಅಪ್‌ಡೇಟ್ ಬರೋದು ಪಕ್ಕಾ.
ಒಟ್ನಲ್ಲಿ ಈ ಅಪ್‌ಡೇಟ್ ಬಂದ್ರೆ ವಾಟ್ಸ್ಯಾಪ್ ಬಳಕೆದಾರರಿಗೆ ತಮ್ಮ ಡೇಟಾ ಮೇಲೆ ಫುಲ್ ಕಂಟ್ರೋಲ್ ಸಿಕ್ಕಂಗೆ ಆಗುತ್ತೆ. ಏನನ್ನು ಉಳಿಸ್ಕೊಬೇಕು, ಏನನ್ನು ಅಳಿಸ್ಬೇಕು ಅನ್ನೋ ಸ್ವಾತಂತ್ರ್ಯ ನಿಮ್ಮ ಕೈಯಲ್ಲೇ ಇರುತ್ತೆ. ಇದು ನಿಜಕ್ಕೂ ಒಂದು ಉಪಯುಕ್ತ ಬದಲಾವಣೆ ಅಂತಾನೇ ಹೇಳ್ಬೋದು.
ನ್ಯೂಸ್ 18 ಕನ್ನಡ ಟೆಕ್ನಾಲಜಿ ವಿಭಾಗದಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಹಿತಿ, ಮೊಬೈಲ್ ವಿಮರ್ಶೆಗಳು, ಗ್ಯಾಜೆಟ್ಗಳು, ತಂತ್ರಜ್ಞಾನ ಸಲಹೆಗಳು, ಇ-ಕಾಮರ್ಸ್ ಮಾರಾಟ, ಆನ್ಲೈನ್ ಶಾಪಿಂಗ್, ಅಪ್ಲಿಕೇಶನ್ಗಳು, ವಾಟ್ಸಾಪ್ ಅಪ್ಡೇಟ್ಸ್, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
December 13, 2025 4:10 PM IST
WhatsApp: ವಾಟ್ಸ್ಯಾಪ್‌ನಲ್ಲಿ ಗುಡ್ ನ್ಯೂಸ್! ಬೇಕಾದ್ದು ಇಟ್ಕೊಳ್ಳಿ, ಬೇಡದ್ದನ್ನ ಮಾತ್ರ ಗುಡಿಸಿ ಹಾಕಿ; ಬರ್ತಿದೆ ಹೊಸ ಫೀಚರ್!