Special Marriage: ಅರ್ಜುನನ ವರಿಸಲು ಏಳು ಸಾವಿರ ಮೈಲಿ ದಾಟಿ ಬಂದಳು ಲಿಲ್ಲಿ! ಇದು ಸಾಫ್ಟ್‌ ವೇರ್‌ ಸಂಬಂಧ!! | Mangaluru Arjun New Zealand Lilly Chu marriage breaks boundaries of hearts | ದಕ್ಷಿಣ ಕನ್ನಡ

Special Marriage: ಅರ್ಜುನನ ವರಿಸಲು ಏಳು ಸಾವಿರ ಮೈಲಿ ದಾಟಿ ಬಂದಳು ಲಿಲ್ಲಿ! ಇದು ಸಾಫ್ಟ್‌ ವೇರ್‌ ಸಂಬಂಧ!! | Mangaluru Arjun New Zealand Lilly Chu marriage breaks boundaries of hearts | ದಕ್ಷಿಣ ಕನ್ನಡ

Last Updated:

ಮಂಗಳೂರು ಹೊಸಬೆಟ್ಟಿನ ಅರ್ಜುನ್ ಕುಮಾರ್ ಮತ್ತು ನ್ಯೂಜಿಲೆಂಡ್ ಲಿಲ್ಲಿ ಚೂ ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರಿನ ಯುವಕನೊಬ್ಬ (Young Man) ನ್ಯೂಜಿಲ್ಯಾಂಡ್‌ನ ಕುವರಿಯನ್ನು ವರಿಸಿ ಹೃದಯ ಸಂಬಂಧಗಳಿಗೆ ಗಡಿ (Border) ಇಲ್ಲ ಎಂಬುದನ್ನು ನಿರೂಪಿಸಿದ್ದಾನೆ. ಮಂಗಳೂರಿನ (Mangaluru) ಹೊಸಬೆಟ್ಟುವಿನ ಹುಡುಗ ಅರ್ಜುನ್ ಕುಮಾರ್ ನ್ಯೂಜಿಲೆಂಡ್ ಹುಡುಗಿ (Girl) ಲಿಲ್ಲಿ ಚೂ ಳನ್ನು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಸಾಫ್ಟ್‌ವೇರ್ ಸಂಸಾರದ ಸಾಕ್ಷಾತ್ಕಾರ!

ಅರ್ಜುನ್ ಉನ್ನತ ಶಿಕ್ಷಣಕ್ಕಾಗಿ ನ್ಯೂಜಿಲ್ಯಾಂಡ್‌ಗೆ ತೆರಳಿದ್ದ ವೇಳೆ ಅಲ್ಲಿ ಲಿಲ್ಲಿ ಚೂ ಪರಿಚಯವಾಗಿತ್ತು. ವಿದ್ಯಾಭ್ಯಾಸದ ಬಳಿಕವೂ ಅಲ್ಲೇ ಸಾಫ್ಟ್‌ವೇರ್ ಕಂಪೆನಿಯಲ್ಲಿ ಅರ್ಜುನ್ ಕೆಲಸ ಮುಂದುವರೆಸಿದ್ದಾರೆ. ಇದರ ಜೊತೆಗೆ ಪ್ರೀತಿಯೂ ಮುಂದುವರಿದಿತ್ತು. ಅರ್ಜುನ್‌ಗೆ 29 ವರ್ಷ ವಯಸ್ಸಾಗಿದ್ದರೆ ಲಿಲ್ಲಿ 26 ರ ಪ್ರಾಯದ ಹುಡುಗಿ.

ಯಾವುದೇ ಅಡೆತಡೆಯಿಲ್ಲದೆ ನೆರವೇರಿದ ಮದುವೆ

ಅರ್ಜುನ್ ತಮ್ಮ‌ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಿದಾಗ ಕುಟುಂಬವೂ ಸಂತೋಷದಿಂದಲೇ ಒಪ್ಪಿಕೊಂಡಿದೆ. ಮದುವೆ ಸಂದರ್ಭದಲ್ಲಿ ಎರಡೂ ಕುಟುಂಬಗಳೂ ಉಪಸ್ಥಿತರಿದ್ದು ನೂತನ ವಧುವರರಿಗೆ ಶುಭ ಹಾರೈಸಿದ್ದಾರೆ. ಭಾರತೀಯ ಸಂಪ್ರದಾಯದ ಪ್ರಕಾರವೇ ತಮ್ಮೂರಲ್ಲೇ ಮದುವೆಯಾಗಬೇಕೆಂದು ಮನದಾಸೆ ಹೊಂದಿದ್ದ ಅರ್ಜುನ್, ಲಿಲ್ಲಿಯ ಮನವೊಲಿಸಿ ಸ್ವಂತ ಊರಲ್ಲೇ ಮದುವೆಯಾಗಿದ್ದಾರೆ.

ಯೂಟ್ಯೂಬ್‌ ಮೂಲಕ ಮದುವೆ ಕಲಿಕೆ ತಿಳಿದುಕೊಂಡ ಹುಡುಗಿ