Last Updated:
ಮಂಗಳೂರು ಯುದ್ಧ ಸ್ಮಾರಕದಲ್ಲಿ T-55 ಟ್ಯಾಂಕ್ ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ಧೂಳು ಹಿಡಿಯುತ್ತಿದೆ. ಭಾರತೀಯ ಸೇನೆಯ ಪರಾಕ್ರಮದ ಸಂಕೇತವಾದ ಈ ಟ್ಯಾಂಕ್ ರಕ್ಷಣೆಗಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಂಗಳೂರಿನ ವಾರ್ ಮೆಮೋರಿಯಲ್ (War Memorial) ನಲ್ಲಿ ಆಕರ್ಷಣೆಯ ಕೇಂದ್ರವಾಗಬೇಕಿದ್ದ ಯುದ್ಧ ಟ್ಯಾಂಕ್ ಧೂಳು ಹಿಡಿಯುತ್ತಿದೆ. ಕರಾವಳಿಯ ಯುವಕರಿಗೆ (Youths) ಭಾರತೀಯ ಸೈನ್ಯದ ಸೌರ್ಯ ಪರಾಕ್ರಮ ವಿವರಿಸುವ ದೃಷ್ಟಿಯಿಂದ ಹಾಗೂ ಸೇನೆಗೆ (Armed Force) ಸೇರುವ ಯುವಕರಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಇದನ್ನು ತರಿಸಲಾಗಿತ್ತು. ಆದರೆ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ 1965 ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ (Operation) ಪಾಲ್ಗೊಂಡಿದ್ದ ಈ T55 ಟ್ಯಾಂಕ್ ಗಾಳಿ, ಮಳೆ, ಬಿಸಿಲಿಗೆ ಮೈಯೊಡ್ಡಿ ತುಕ್ಕು ಹಿಡಿಯುತ್ತಿದೆ.
ಪಾಕಿಸ್ತಾನ ವಿರುದ್ಧ 1965 ಮತ್ತು 1971ರಲ್ಲಿ ಪಾಕಿಸ್ತಾನದ ಸೇನಾ ಕಾರ್ಯಾಚರಣೆಯಲ್ಲಿ ಬಳಕೆಯಾಗಿದ್ದ ಭಾರತೀಯ ಭೂಸೇನೆಯ ಯುದ್ಧ T 55 ಟ್ಯಾಂಕರ್ ಮಂಗಳೂರಿನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಭಾರತೀಯ ಸೇನೆಯಲ್ಲಿ 1961ರಿಂದ 2001ರ ವರೆಗೆ ಸೇವೆಯಲ್ಲಿದ್ದ ಈ ಯುದ್ಧ ಟ್ಯಾಂಕರನ್ನು ಪುಣೆಯ ಕಿರ್ಕಿಯಲ್ಲಿರುವ ಭಾರತೀಯ ಸೇನೆಯ ಡಿಪೋದಲ್ಲಿ ಇರಿಸಲಾಗಿತ್ತು.
ಮಂಗಳೂರಿನ ಯುದ್ಧ ಸ್ಮಾರಕದಲ್ಲಿ ಇರಿಸಲು T-55 ಟ್ಯಾಂಕ್ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಕೋರಿಕೆ ಮೇರೆಗೆ ಮಂಗಳೂರಿಗೆ ಕಳುಹಿಸಲಾಗಿತ್ತು. ಆದರೆ ಯುದ್ಧ ಸ್ಮಾರಕದ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ವಾರ್ ಮೆಮೋರಿಯಲ್ನಲ್ಲಿ ಆಕರ್ಷಣೆಯ ಕೇಂದ್ರವಾಗಬೇಕಿದ್ದ ಯುದ್ಧ ಟ್ಯಾಂಕ್ ಮಾತ್ರ ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಧೂಳು ಹಿಡಿಯುತ್ತಿದೆ. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಟ್ಯಾಂಕ್ನ ನಿರ್ವಹಣೆಯ ಜವಾಬ್ದಾರಿಯನ್ನು ಜಿಲ್ಲಾಡಳಿತ ಈ ಕೂಡಲೇ ಹೊರಬೇಕು ಎಂದು ಒತ್ತಾಯಿಸಲಾಗಿದೆ.
ಯೋಧರ ಪರಾಕ್ರಮ ನೆನಪಿಸುವ ಟ್ಯಾಂಕ್
Dakshina Kannada,Karnataka
December 16, 2025 4:03 PM IST