Last Updated:
ಬೆಂಗಳೂರು ಮೂಲದ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್‌ನ ಬ್ರಿಗೇಡಿಯರ್ ರವಿ ಮುನಿಸ್ವಾಮಿ ನೇತೃತ್ವದ ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ ಪುತ್ತೂರಿಗೆ ಆಗಮಿಸಿ ಭವ್ಯ ಸ್ವಾಗತ ಪಡೆದಿತು.
ದಕ್ಷಿಣ ಕನ್ನಡ: ಬೆಂಗಳೂರಿನ (Bengaluru) ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾರತೀಯ ಮಾಜಿ ಸೇನಾ ಅಧಿಕಾರಿ ಹಾಗೂ ಕರ್ನಾಟಕ ಸರಕಾರದ ಮಾಜಿ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸ್ವದೇಶಿ ಜಾಗರಣ (Awakening) ಸೈಕ್ಲಿಂಗ್ (Cycling) ಅಭಿಯಾನ (Campaign) ಪುತ್ತೂರಿಗೆ (Putturu) ಆಗಮಿಸಿದೆ. ಈ ಸಂದರ್ಭ ವಿವೇಕಾನಂದ ವಿದ್ಯಾಸಂಸ್ಥೆಗಳು ಮತ್ತು ಪುತ್ತೂರಿನ ನಾಗರಿಕರು ಭವ್ಯ ಸ್ವಾಗತ ನೀಡಿ ಅವರ ಜೊತೆ ಸೈಕ್ಲಿಂಗ್‍ನಲ್ಲೂ ಭಾಗವಹಿಸುವ ಮೂಲಕ ನೈತಿಕ ಬೆಂಬಲವನ್ನೂ ನೀಡಲಾಗಿದೆ.
ಬೆಂಗಳೂರಿನಿಂದ ಆರಂಭಗೊಂಡ ಈ ಸೈಕ್ಲಿಂಗ್ ಯಾತ್ರೆ ರಾಜ್ಯದ ಉದ್ದಗಲಕ್ಕೂ ಸಂಚರಿಸಲಿದ್ದು, ‘ಸ್ವದೇಶಿ ಬಳಸಿ ದೇಶ ಬೆಳೆಸಿ’ ಎಂಬ ಘೋಷವಾಕ್ಯದಡಿ ಸಾಫ್ಟ್‍ವೇರ್ ಉತ್ಪನ್ನಗಳಿಂದ ಹಿಡಿದು ನಿತ್ಯೋಪಯೋಗಿ ವಸ್ತುಗಳ ತನಕ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿ ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವುದು ಈ ಯಾತ್ರೆಯ ಉದ್ದೇಶವಾಗಿದೆ.
ಸೈಕ್ಲಿಂಗ್‍ನಲ್ಲಿ ಸುಮಾರು 23 ಮಂದಿಯಿದ್ದು, ಅವರಲ್ಲಿ ಮಾಜಿ ಸೈನಿಕರು, ಬ್ಯಾಂಕ್ ಉದ್ಯೋಗಿಗಳು, ವಿಜ್ಞಾನಿಗಳು, ಎಂಜಿನಿಯರ್‍ಗಳು ಹಾಗು ವೈದ್ಯರು ಇದ್ದಾರೆ. ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಡಿಕೇರಿ ಮೂಲಕ ಪುತ್ತೂರಿಗೆ ಬಂದ ಈ ತಂಡವನ್ನು ವಿವೇಕಾನಂದ ವಿದ್ಯಾಸಂಸ್ಥೆಗಳು ಮತ್ತು ಪುತ್ತೂರಿನ ನಾಗರಿಕರ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷ, ಹಿರಿಯರಾದ ಕಲ್ಲಡ್ಕ ಪ್ರಭಾಕರ ಭಟ್ ಸೈಕ್ಲಿಂಗ್ ತಂಡವನ್ನು ಬರಮಾಡಿಕೊಂಡಿದ್ದಾರೆ. ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಸೈಕ್ಲಿಂಗ್ ತಂಡ ಮತ್ತು ನಾಗರಿಕರು, ಮಕ್ಕಳೆಲ್ಲಾ ಸೇರಿ ಪುತ್ತೂರು ನಗರದಲ್ಲಿ ಸೈಕ್ಲಿಂಗ್ ಯಾತ್ರೆ ಮಾಡಿದ್ದಾರೆ. ಆ ಬಳಿಕ ತಂಡ ವಿವೇಕಾನಂದ ಕಾಲೇಜು ಕ್ಯಾಂಪಸ್ ಗೆ ತೆರಳಿ ಅಲ್ಲಿ ನಾಗರಿಕರು ಮತ್ರು ವಿದ್ಯಾರ್ಥಿಗಳ ಜೊತೆಗೆ ಸಂವಾದವನ್ನೂ ನಡೆಸಿದೆ.
Dakshina Kannada,Karnataka