Last Updated:
ಪುತ್ತೂರಿನ ಅಜಿತಪ್ರಸಾದ್ ರೈ 20 ಎಕರೆ ಭೂಮಿಯಲ್ಲಿ 3 ಸಾವಿರ ಸಿಲ್ವರ್ ವುಡ್ ಮರಗಳನ್ನು ಬೆಳೆಸಿ, ಕಾಳುಮೆಣಸು ಸಹ ಬೆಳೆದು ಡಬಲ್ ಆದಾಯದ ನಿರೀಕ್ಷೆಯಲ್ಲಿ ಯಶಸ್ವಿ ಪ್ರಯತ್ನ ಮಾಡಿದ್ದಾರೆ.
ದಕ್ಷಿಣಕನ್ನಡ: ಕೊಡಗು ಮತ್ತು ಚಿಕ್ಕಮಗಳೂರಿನಂತಹ ತಂಪಾದ ಹವಾಗುಣದಲ್ಲಿ ಬೆಳೆಯುವ ಸಿಲ್ವರ್ ವುಡ್ ಮರಗಳನ್ನ ಬೆಳೆಸಲು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಯತ್ನಿಸಲಾಗಿದೆ. ಫ್ಲೈವುಡ್ ಮತ್ತು ಇತರ ಪೀಠೋಪಕರಣಗಳ ತಯಾರಿಕೆಗಾಗಿ ಬಳಸುವ ಈ ಮರಗಳನ್ನು (Trees) ದೊಡ್ಡ ಮಟ್ಟದಲ್ಲಿ ಬೆಳೆಸಲು ಪುತ್ತೂರಿನ ಕೃಷಿಕರೊಬ್ಬರು (Farmer) ಮುಂದಾಗಿದ್ದು, ಕೃಷಿಯಲ್ಲಿ (Agriculture) ಪರ್ಯಾಯ ಬೆಳೆಯ ಶೋಧನೆಯಲ್ಲಿದ್ದವರಿಗೆ ಈ ಸಿಲ್ವರ್ ವುಡ್ ಸಹಕಾರಿಯಾಗುತ್ತಾ (Helpful) ಅನ್ನೋ ಆಶಾಭಾವವೂ ಈ ಪ್ರಯತ್ನದಿಂದ ಮೂಡಿದೆ.
ಅತೀ ಎತ್ತರಕ್ಕೆ ಉದ್ದವಾಗಿ ಬೆಳೆಯುವ ಸಿಲ್ವರ್ ವುಡ್ ಮರಗಳು ದಕ್ಷಿಣಕನ್ನಡ ಜಿಲ್ಲೆಗೆ ಬಲು ಅಪರೂಪ. ಆದರೆ ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಎಲ್ಲಾ ಕೃಷಿ ತೋಟಗಳಲ್ಲಿ ಈ ಮತ ಚಿರಪರಿಚಿತ. ದಕ್ಷಿಣಕನ್ನಡ ಜಿಲ್ಲೆಯ ಮಣ್ಣಿನಲ್ಲೂ ಈ ಗಿಡಗಳನ್ನು ಯಾಕೆ ಬೆಳೆಸಬಾರದು ಎನ್ನುವ ಹಠಕ್ಕೆ ಬಿದ್ದವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ದಾರಂದಕುಕ್ಕ ಕಾಯರ್ತಡಿ ನಿವಾಸಿ ಅಜಿತಪ್ರಸಾದ್ ರೈ. ಕೊಡಗು ಹಾಗು ಚಿಕ್ಕಮಗಳೂರು ಭಾಗದ ಎಲ್ಲಾ ತೋಟಗಳಲ್ಲಿ ಈ ಮರವನ್ನು ಬೆಳೆಸಲಾಗುತ್ತದೆ.
ಅಲ್ಲಿ ನೋಡಿದ್ದ ಈ ಮರಗಳನ್ನು ತಮ್ಮ ತೋಟದಲ್ಲಿ ಯಾಕೆ ಬೆಖೆಯಬಾರದು ಅನ್ನೋ ವಿಚಾರವನ್ನ ಛಾಲೆಂಜ್ ಆಗಿ ತೆಗೆದುಕೊಂಡ ಈ ಕೃಷಿಕ ತಮ್ಮ ಬಳಿ ಇರುವ ಸುಮರು 20 ಎಕರೆ ಕೃಷಿಭೂಮಿಯಲ್ಲಿ ಈ ಸಿಲ್ವರ್ ವುಡ್ ಬೆಳೆಯಲು ನಿರ್ಧರಿಸಿದ್ದರು. ಉಷ್ಣಾಂಶ ಹೆಚ್ಚಾಗಿರುವ ದಕ್ಷಿಣಕನ್ನಡ ಜಿಲ್ಲೆಯ ವಾತಾವರಣದಲ್ಲಿ ಈ ಮರಗಳು ಉಳಿಯುತ್ತದೋ ಎನ್ನುವ ಪ್ರಶ್ನೆಗಳ ಮಧ್ಯೆ ಸುಮಾರು 3 ಸಾವಿರದಷ್ಟು ಸಿಲ್ವರ್ ವುಡ್ ಸಸಿಗಳನ್ನು ನಾಟಿ ಮಾಡಿದ್ದಾರೆ.
ಗಿಡಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಮತ್ತು ಪೋಷಕಾಂಶಗಳನ್ನು ನೀಡಿದಲ್ಲಿ ಉತ್ತಮ ಗುಣಮಟ್ಟದ ಮರಗಳನ್ನು ನಿರೀಕ್ಷಿಸಬಹುದು ಎನ್ನುವ ಹಿನ್ನಲೆಯಲ್ಲಿ ನೀರು ಮತ್ತು ಗೊಬ್ಬರದ ವ್ಯವಸ್ಥೆಯನ್ನೂ ಗಿಡಗಳಿಗೆ ಮಾಡಿದ್ದಾರೆ. ಗಿಡಗಳನ್ನು ನಾಟಿ ಮಾಡಿ ಎರಡು ವರ್ಷಗಳಾಗುತ್ತಿದ್ದಂತೆ ಉತ್ತಮ ರೀತಿಯಲ್ಲಿ ಬೆಳೆದು ನಿಂತಿವೆ. ಜಿಲ್ಲೆಯ ಹವಾಗುಣದಲ್ಲೂ ಸಿಲ್ವರ್ ವುಡ್ ಮರಗಳನ್ನು ಬೆಳೆಸಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಈ ಗಿಡ ಮತ್ತು ಅದರ ನಾಟಿಗೆ ಸುಮಾರು 3 ಲಕ್ಷ ರೂಪಾಯಿಗಳ ಬಂಡವಾಳವನ್ನೂ ಹಾಕಿರುತ್ತಾರೆ.
ಸಿಲ್ವರ್ ವುಡ್ ಮರದಿಂದ ಎರಡು ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಗಿಡ ಬೆಳೆಯುತ್ತಿದ್ದಂತೆ ಈ ಗಿಡಗಳಿಗೆ ಕಾಳುಮೆಣಸಿನ ಬಳ್ಳಿಯನ್ನು ಬಿಡುತ್ತಿದ್ದು, ಈ ಬಳ್ಳಿಗಳಿಗೆ ಈ ಗಿಡಗಳು ಉತ್ತಮ ರೀತಿಯ ಆಸರೆಯನ್ನು ನೀಡುವ ಹಿನ್ನಲೆಯಲ್ಲಿ ಕಾಳುಮೆಣಸಿನ ಗಿಡಗಳಲ್ಲೂ ಉತ್ತಮ ಬೆಳೆ ಪಡೆಯುತ್ತಿದ್ದಾರೆ. ನೇರವಾಗಿ, ಎತ್ತರವಾಗಿ ಬೆಳೆಯವ ಈ ಮರಕ್ಕೆ ಭಾರೀ ಬೇಡಿಕೆಯೂ ಇದೆ. ಹೆಚ್ಚಾಗಿ ಪ್ಲೈವುಡ್ ತಯಾರಿಕೆಗೆ, ಪೀಠೋಪಕರಣಗಳ ತಯಾರಿಕೆಯಲ್ಲೂ ಈ ಮರವನ್ಮು ಬಳಸುತ್ತಾರೆ. ಈ ಮರಗಳು ಅತ್ಯಂತ ಗಟ್ಟಿಯಾಗಿರಯವ ಕಾರಣ ಇವುಗಳನ್ನು ಕಟ್ಟಡ ಕಾಮಗಾರಿಯಲ್ಲಿ ಕಂಬದ ರೂಪದಲ್ಲೂ ಬಳಕೆ ಮಾಡಲಾಗುತ್ತದೆ. ಎಲ್ಲಾ ಸಿಲ್ವರ್ ವುಡ್ ಮರಗಳು ಹುಲುಸಾಗಿ ಬೆಳೆಯುತ್ತಿದ್ದು, ಮುಂದಿನ ಎರಡು,ಮೂರು ವರ್ಷದ ಒಳಗೆ ಕಟಾವು ಮಾಡಿದಲ್ಲಿ, ಮರದಿಂದಳು ಉತ್ತಮ ಆದಾಯ ಬರುವ ನಿರೀಕ್ಷೆಯಿದೆ.
Dakshina Kannada,Karnataka
Dec 20, 2025 11:10 AM IST