Last Updated:
ಮಂಗಳೂರು ಯುವಕ ಸೋಹನ್ ಎಂ. ರೈ ಆವಿಷ್ಕರಿಸಿದ MOM ಸಾಧನ ಹೊಟ್ಟೆ ಹಸಿವಿನ ಶಬ್ದವನ್ನು ಪತ್ತೆಹಚ್ಚಿ Zomato ಮೂಲಕ ಆಹಾರ ಆರ್ಡರ್ ಮಾಡುತ್ತದೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.
ಮಂಗಳೂರು: ಪ್ರಪಂಚದಲ್ಲಿ (World) ನಾನಾ ತರದ ಅವಿಷ್ಕಾರಗಳು ನಡೆದಿವೆ. ಆದರೆ ಹೊಟ್ಟೆ ಹಸಿದಾಗ ನೆನಪಿಸುವ ಸಂಶೋಧನೆ (Invention) ಆಗಿದೆಯಾ? ಮಾಹಿತಿ ಪ್ರಕಾರ ಅಂತಹ ಯೋಚನೆಗಳನ್ನು ಮಾಡಿರುವವರ ಸಂಖ್ಯೆಯೇ ಕಡಿಮೆ. ಆದರೆ ಹೊಟ್ಟೆ ಹಸಿದಾಗ (Hunger) ಬರುವ ಶಬ್ದ ಕೇಳಿ ಫುಡ್ ಆರ್ಡರ್ ಮಾಡುವ ಎಐ ಸಾಧನವನ್ನು ಮಂಗಳೂರಿನ ಯುವಕ (Young Man) ಕಂಡು ಹಿಡಿದಿದ್ದಾನೆ.
ಮಂಗಳೂರಿನ ಸೋಹನ್ ಎಂ. ರೈ ಕೃತಕ ಬುದ್ಧಿಮತ್ತೆ ಚಾಲಿತ ‘MOM’ ಎಂಬ ಸಾಧನವನ್ನು ಆವಿಷ್ಕರಿಸಿದ್ದಾರೆ. ಈ ಸಾಧನವು ಹೊಟ್ಟೆ ಹಸಿವನ್ನು ಪತ್ತೆ ಹಚ್ಚಿ, ಸ್ವಯಂಚಾಲಿತವಾಗಿ Zomato ಮೂಲಕ ಆಹಾರ ಆರ್ಡರ್ ಮಾಡುತ್ತದೆ. ಕ್ಲೌಡ್ AI ಬಳಸುವ ಈ ಆವಿಷ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಕನ ಈ ತಾಂತ್ರಿಕ ಪ್ರಗತಿ ಹಲವರ ಗಮನ ಸೆಳೆದಿದೆ. ವಿಶೇಷವೇನೆಂದರೆ ತನ್ನ ತಂಗಿಯ ಸ್ಟೆತಸ್ಕೋಪ್ ಬಳಸಿ ಅದನ್ನು ಕೆಲ ಸೌಂಡ್ ಸೆನ್ಸಾರ್ ಜೊತೆ ಸೇರಿಸಿ ವೈರ್ಲೆಸ್ ವೈಫೈಯೊಂದಿಗೆ ತನ್ನ ಕಂಪ್ಯೂಟರ್ಗೆ ಕನೆಕ್ಟ್ ಮಾಡಿದ್ದಾರೆ.
24 ವರ್ಷದ ಸೋಹನ್ ಎಂ. ರೈ ಕೃತಕ ಬುದ್ಧಿಮತ್ತೆ ಚಾಲಿತ ಸಾಧನದ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಹೊಟ್ಟೆ ಹಸಿವಿನಿಂದ ಗುರ್ರ್ ಎಂದು ಶಬ್ದ ಮಾಡಿದರೆ ಈ ಕೃತಕ ಬುದ್ಧಿಮತ್ತೆ ಚಾಲಿತ ಸಾಧನ ಆಟೋಮ್ಯಾಟಿಕ್ ಫುಡ್ ಆರ್ಡರ್ ಮಾಡುತ್ತದೆ. ಇದರ ವಿಶೇಷತೆ ಏನೆಂದರೆ ನಿಮ್ಮ ಹೊಟ್ಟೆಯಿಂದ ಹೊರಡುವ ಶಬ್ದ ಎಷ್ಟು ತೀವ್ರವಾಗಿದೆಯೋ ಅಷ್ಟೇ ಮಟ್ಟದ ಆರ್ಡರ್ ಅನ್ನು ಇದು ಮಾಡುತ್ತದೆ, ಅದೂ ಕೂಡ ಬೆಸ್ಟ್ ಆಫ್ ದಿ ಬೆಸ್ಟ್ ಹಾಗೂ ನಿಮ್ಮದೇ ಟೇಸ್ಟ್ ಹುಡುಕಿ! ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ.
ಈ ವಿಡಿಯೋದಲ್ಲಿ ಅವರು ಆವಿಷ್ಕರಿಸಿದ ಸಾಧನದ ಬಗ್ಗೆ ಸೋಹನ್ ಎಂ. ರೈ ಹೀಗೆ ವಿವರಿಸಿದ್ದಾರೆ. “ನಾನು ಹಸಿವಾದಾಗ ಅರ್ಥಮಾಡಿಕೊಳ್ಳುವ ಮತ್ತು ಜೊಮಾಟೊದಲ್ಲಿ ಸ್ವಯಂಚಾಲಿತವಾಗಿ ಆಹಾರವನ್ನು ಆರ್ಡರ್ ಮಾಡುವ ಈ ಸಾಧನವನ್ನು ಕಂಡುಹಿಡಿದಿದ್ದೇನೆ. ಇದನ್ನು ಸೊಂಟಕ್ಕೆ ಹಾಕುವ ಬೆಲ್ಸ್ನಲ್ಲಿ ಫಿಕ್ಸ್ ಮಾಡಬಹುದಾದ ಸಾಧನವಾಗಿದೆ. ಇದನ್ನು MOM (ಊಟ ಆರ್ಡರ್ ಮಾಡ್ಯೂಲ್) ಎಂದು ಕರೆಯಲಾಗುತ್ತದೆ.
ಹೊಟ್ಟೆಯಲ್ಲಿ ಹಸಿದಾಗ ಬರುವ ಶಬ್ದವನ್ನು ಚಾಲಿತವಾಗಿ ಆಹಾರವನ್ನು ಆರ್ಡರ್ ಮಾಡುತ್ತದೆ. ಇದನ್ನು ತಯಾರಿಸಲು ನಾನು, ನನ್ನ ಸಹೋದರಿಯ ಸ್ಟೆತೋಸ್ಕೋಪ್ ಸೇರಿದಂತೆ ಹಲವಾರು ವಸ್ತುಗಳನ್ನು ಬಳಸಿದ್ದೇನೆ. ಈ ಸಾಧನವು ಹಸಿವಿನ ಮಟ್ಟವನ್ನು ನಿರ್ಧರಿಸಲು ಪ್ರೌಡ್ AI ಅನ್ನು ಬಳಸಿದ್ದೇನೆ” ಎಂದು ಹೇಳಿದ್ದಾರೆ. ಸೋಹನ್ ಎಂ. ರೈ ಆವಿಷ್ಕಾರ ಮಾಡಿದ ಹೊಸ ಸಾಧನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಊಟವಿಲ್ಲದೆ ಇಡೀ ದಿನ ಕುಳಿತುಕೊಳ್ಳಬೇಕು ಎಂದು ತಮಾಷೆಯಾಗಿ ಕೆಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಹೊಟ್ಟೆ ಗೊಣಗುವುದು ಎಂದರೆ ಹಸಿವು ಎಂದರ್ಥವಲ್ಲ, ಅದರೂ ನಿಮ್ಮ ಹೊಸ ಸಾಧನೆಗೆ ಮೆಚ್ಚಲೇಬೇಕು ಎಂದು ಹೇಳಿದ್ದಾರೆ. ಇದಕ್ಕೆ 2 ಲಕ್ಷ ರೂಪಾಯಿ ಖರ್ಚಾಗಿದೆಯಂತೆ!
ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಪದವಿಯನ್ನು ಪಡೆದು, ಬೇರೆ ಬೇರೆ ಕಂಪೆನಿಗಳಲ್ಲಿ ಇಂಟರ್ನ್ಶಿಪ್ ಮಾಡಿದ ನಂತರ ತಮ್ಮದೇ ಆದ ಸ್ಟಾರ್ಟ್ ಅಪ್ ಅನ್ನು ಪ್ರಾರಂಭಿಸಿದರು. ಇವರ ತಂದೆ ಮಂಜುನಾಥ್ ರೈ ಉದ್ಯಮಿ, ತಾಯಿ ಸುಜಾತಾ ರೈ ಗೃಹಿಣಿ.
ಈ ಹಿಂದೆಯೂ ಸುದ್ದಿಯಾಗಿದ್ದ ಸೋಹನ್
ಸೋಹನ್ 20 “zikiguy ಇನ್ ಸ್ಟಾಗ್ರಾಮ್ ಪುಟದಲ್ಲಿ ಟೆಕ್ ಅಪ್ಡೇಟ್ಗಳನ್ನು ಹಾಗೂ ಹೊಸ ಹೊಸ ತಂತ್ರಜ್ಞಾನದ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. 2023ರಲ್ಲಿ ಜೋಮಾಟೋದಲ್ಲಿ ಡೆಲಿವರಿ ಬಾಯ್ ಆಗಿ ಸೇರಿಕೊಂಡು, ಅಲ್ಲಿ ಡ್ರೋನ್ ಬಳಸಿ ಆಹಾರವನ್ನು ಹೇಗೆ ಸಾಗಿಸಬಹುದು ಎಂಬ ಬಗ್ಗೆ ವಿಡಿಯೋವನ್ನು ಹಂಚಿಕೊಂಡು ಸುದ್ದಿಯಾಗಿದ್ದರು. ಇದೀಗ ಹಸಿದಾಗ ಎಚ್ಚರಿಸುವ ತಂತ್ರಜ್ಞಾನ ಭಾರೀ ಚರ್ಚೆಯಲ್ಲಿದ್ದು, ಮುಂದುವರಿಸುವ ಆಲೋಚನೆಯನ್ನು ಸೋಹನ್ ಮಾಡಿದ್ದಾರೆ.
ನ್ಯೂಸ್ 18 ಕನ್ನಡ ಟೆಕ್ನಾಲಜಿ ವಿಭಾಗದಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಹಿತಿ, ಮೊಬೈಲ್ ವಿಮರ್ಶೆಗಳು, ಗ್ಯಾಜೆಟ್ಗಳು, ತಂತ್ರಜ್ಞಾನ ಸಲಹೆಗಳು, ಇ-ಕಾಮರ್ಸ್ ಮಾರಾಟ, ಆನ್ಲೈನ್ ಶಾಪಿಂಗ್, ಅಪ್ಲಿಕೇಶನ್ಗಳು, ವಾಟ್ಸಾಪ್ ಅಪ್ಡೇಟ್ಸ್, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
Mangalore,Dakshina Kannada,Karnataka
Dec 22, 2025 12:01 PM IST
Invention: ಇನ್ಮೇಲೆ ಹೊಟ್ಟೆ ಗುರ್ರ್ ಅಂದ್ರೆ ಮನೆ ಬಾಗಿಲಿಗೆ ಊಟ ಬರುತ್ತೆ! ತಂಗಿಯ ಸ್ಟೆತೋಸ್ಕೋಪ್ನಿಂದ ಹುಟ್ಟಿದ ʼMoMʼ ನ ಪವಾಡ!!