Luxury Cruise: ಬರೋಬ್ಬರಿ 13,000 ಕಿಲೋಮೀಟರ್‌ ದೂರದಿಂದ ಬಂತು ಐಶಾರಾಮಿ ನೌಕೆ, ಬಂದರೋ ಬಂದರೋ ಬಾರ್ಸಿಲೋನಾದಿಂದ ʼಬಂದರು!ʼ | Mangaluru port Bahamas flagged luxury cruise attracts tourists | ದಕ್ಷಿಣ ಕನ್ನಡ

Luxury Cruise: ಬರೋಬ್ಬರಿ 13,000 ಕಿಲೋಮೀಟರ್‌ ದೂರದಿಂದ ಬಂತು ಐಶಾರಾಮಿ ನೌಕೆ, ಬಂದರೋ ಬಂದರೋ ಬಾರ್ಸಿಲೋನಾದಿಂದ ʼಬಂದರು!ʼ | Mangaluru port Bahamas flagged luxury cruise attracts tourists | ದಕ್ಷಿಣ ಕನ್ನಡ

Last Updated:

ಮಂಗಳೂರಿನ ಎನ್ಎಂಪಿಎ ಬಂದರಿಗೆ ಬಹಮಾಸ್‌ ಧ್ವಜದ ಎಂ.ಎಸ್. ಸೆವೆನ್ ಸೀಸ್ ನ್ಯಾವಿಗೇಟರ್ ಕ್ರೂಸ್ ಬಂದು, ಬಾರ್ಸಿಲೋನಾ ಸೇರಿದಂತೆ ವಿವಿಧೆಡೆಯಿಂದ ಬಂದ ಪ್ರವಾಸಿಗರು ಮಂಗಳೂರು ಸೌಂದರ್ಯ ಅನುಭವಿಸಿ ಕೊಚ್ಚಿನ್ ಕಡೆ ಸಾಗಿದರು.

ಐಶಾರಾಮಿ ಹಡಗು
ಐಶಾರಾಮಿ ಹಡಗು

ಮಂಗಳೂರು: ಇದು ವಿದೇಶಿ ನೌಕೆಗಳು ಭಾರತೀಯ (Indian) ಕಡಲತಡಿಗೆ ಬರುವ ಕಾಲ. ಈ ವರ್ಷ 7000 ನಾಟಿಕಲ್‌ ಮೈಲು ದೂರದಿಂದ (Distance) ಒಂದು ಹಡಗು ಮಂಗಳೂರಿಗೆ (Manglore) ಬಂದಿದೆ. 9000 ನಾಟಿಕಲ್‌ ಮೈಲು ಎಂದರೆ ಬರೋಬ್ಬರಿ 13000 ಕಿಲೋಮೀಟರ್‌ (Kilo Meter) ದೂರ! ಹಾಗಾದರೆ ಬಂದವರು ಯಾರು? ಬಂದವರ ಉದ್ದೇಶವೇನು? ಯಾವ ಕಡೆಯಿಂದ ಬಂದರು? ಎಲ್ಲವೂ ಇಲ್ಲಿದೆ!

ಬಹಮಾಸ್‌ ಧ್ವಜ, ಬಾರ್ಸಿಲೋನಾ ಅತಿಥಿಗಳು

ನವಮಂಗಳೂರು ಬಂದರು ಪ್ರಾಧಿಕಾರವು ಈ ಋತುವಿನ ಮೊದಲ ಐಷಾರಾಮಿ ಕ್ರೂಸ್ ಹಡಗು ಎಂ.ಎಸ್. ಸೆವೆನ್ ಸೀಸ್ ನ್ಯಾವಿಗೇಟರ್ ಅನ್ನು ಸ್ವಾಗತಿಸಿತು. ಈ ಐಷಾರಾಮಿ ಕ್ರೂಸ್ ಹಡಗು ಬೆಳಗ್ಗೆ 06:15ಕ್ಕೆ ಎನ್ಎಂಪಿಎಗೆ ಆಗಮಿಸಿ ಬರ್ತ್ ಸಂಖ್ಯೆ 4ರಲ್ಲಿ 07:15ಕ್ಕೆ ನಿಂತಿತು. ಎಂ.ಎಸ್.ಸೆವೆನ್ ಸೀಸ್ ನ್ಯಾವಿಗೇಟರ್ 172.50 ಮೀಟರ್ ಉದ್ದವಿದ್ದು, 7.50 ಮೀಟರ್ ಡ್ರಾಫ್ಟ್ ಮತ್ತು 28,803 ಒಟ್ಟು ನೋಂದಾಯಿತ ಟನ್ನೇಜ್ (GRT) ಹೊಂದಿದೆ. ಈ ನೌಕೆ ಬಹಮಾಸ್‌ ಧ್ವಜ ಹೊಂದಿದ್ದು ಇದು ನಾಸ್ಸು ಬಂದರಿನಲ್ಲಿರುತ್ತದೆ. ಈ ಹಡಗು ಈ ವರ್ಷ ಅಕ್ಟೋಬರ್‌ 31 ರಂದು ಬಾರ್ಸಿಲೋನಾದಿಂದ ಪ್ರಯಾಣ ಆರಂಭಿಸಿತು.

ಮರ್ಮುಗೋವಾದಿಂದ ಮಂಗಳೂರಿಗೆ ಬಂತು ಹಡಗು

ಈ ಹಡಗು ಮರ್ಮುಗೋವಾ ಬಂದರಿನಿಂದ ಮಂಗಳೂರಿಗೆ ಆಗಮಿಸಿದೆ. ಈ ಕ್ರೂಸ್ 360 ಸಿಬ್ಬಂದಿಯೊಂದಿಗೆ 450 ಪ್ರಯಾಣಿಕರನ್ನು ಹೊತ್ತೊಯ್ದು ಬಂದಿದೆ. ಎನ್ಎಂಪಿಎಯು ಈ ಅಂತಾರಾಷ್ಟ್ರೀಯ ಕ್ರೂಸ್ ಪ್ರಯಾಣಿಕರಿಗೆ ಸಾಂಪ್ರದಾಯಿಕ ಸ್ವಾಗತ ನೀಡಿತು. ಮಂಗಳೂರು ಕಸ್ಟಮ್ಸ್ ಆಯುಕ್ತೆ ವಿನಿತಾ ಶೇಖರ್, ಐಆರ್‌ಎಸ್, ಹಡಗಿನ ಮುಖ್ಯಸ್ಥರನ್ನು ಸಂಚಾರ ವ್ಯವಸ್ಥಾಪಕರು, ಅಧಿಕಾರಿಗಳು ಮತ್ತು ಬಂದರಿನ ನೌಕರರನ್ನು ಸ್ವಾಗತಿಸಿದರು.

ಮಂಗಳೂರು ಸೌಂದರ್ಯ ಕಂಡು ಪ್ರವಾಸಿಗರು ಫುಲ್‌ ಖುಷ್

ಇದರೊಂದಿಗೆ ಆಯುಷ್ ಸಚಿವಾಲಯವು ಸ್ಥಾಪಿಸಿದ ಧ್ಯಾನ ಕೇಂದ್ರ, ಎನ್ಎಂಪಿಎ ಒದಗಿಸಿದ ಉಚಿತ ವೈ-ಫೈ ಸಂಪರ್ಕ ಮತ್ತು ಪ್ರವಾಸೋದ್ಯಮ ಸಚಿವಾಲಯ ಸ್ಥಾಪಿಸಿದ ಮಂಗಳೂರಿನ ಯಕ್ಷಗಾನ ಕಲಾ ಪ್ರಕಾರವನ್ನು ಚಿತ್ರಿಸುವ ಸೆಲ್ಫಿ ಸ್ಟ್ಯಾಂಡ್ ಕ್ರೂಸ್ ಪ್ರಯಾಣಿಕರಿಗೆ ವಿಶಿಷ್ಟವಾದ ಅನುಭವ ನೀಡಿತು.

ಕೊಚ್ಚಿನ್‌ ಕಡೆ ಸಾಗಿದ ಹಡಗು