ಈ ಹಿಂದೆ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್, ಭಾರತವು ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ದೇಶೀಯ ರಫ್ತುದಾರರಿಗೆ ವಿಶಾಲ ಮಾರುಕಟ್ಟೆ ಪ್ರವೇಶವನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಮಾತುಕತೆಗಳನ್ನು ‘ಸಾಧ್ಯವಾದಷ್ಟು ಬೇಗ’ ಮುಕ್ತಾಯಗೊಳಿಸಲು ಬಯಸುತ್ತಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತೆರಿಗೆ ನೀತಿ, ಹಾಗೂ ಮಾರುಕಟ್ಟೆ ಪ್ರವೇಶದ ಕುರಿತು ಬದಲಾವಣೆಗಳೂ ಆಗಬಹುದೆಂದು ಅಂದಾಜಿಸಲಾಗಿದೆ.
ಸುಂಕ ಮತ್ತು ವ್ಯಾಪಾರ ಒಪ್ಪಂದವೇ ಚರ್ಚೆಯ ಕೇಂದ್ರ
ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಕ್ವಾತ್ರಾ ಮತ್ತು ಗೋರ್ ನಡುವಿನ ಮಾತುಕತೆಯಲ್ಲಿ ಪ್ರಸ್ತಾವಿತ ವ್ಯಾಪಾರ ಒಪ್ಪಂದ ಮತ್ತು ಭಾರತದ ಮೇಲೆ ವಿಧಿಸಲಾದ 50% ಸುಂಕ ಕಡಿತ ಪ್ರಮುಖ ಚರ್ಚಾ ವಿಷಯವಾಗಿತ್ತು. ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಅಮೆರಿಕವು ಭಾರತದ ಕೆಲವು ಪ್ರಮುಖ ರಫ್ತುಗಳ ಮೇಲೆ ಈ ಹೆಚ್ಚುವರಿ ಸುಂಕ ವಿಧಿಸಿದೆ ಎಂಬುದು ಇಲ್ಲಿ ಗಮನಾರ್ಹ.
ರಾಯಭಾರಿ ಕ್ವಾತ್ರಾ ಹೇಳಿದ್ದೇನು?
ಈ ಭೇಟಿಯ ನಂತರ ಸಾಮಾಜಿಕ ಜಾಲತಾಣದ X ನಲ್ಲಿ ಪೋಸ್ಟ್ ಮಾಡಿದ ಕ್ವಾತ್ರಾ, ನಮ್ಮ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ಹಂಚಿಕೆಯ ಗುರಿಯ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಗೋರ್ ಅವರು ವಹಿಸಿಕೊಳ್ಳಲಿರುವ ಹೊಸ ಪಾತ್ರಕ್ಕೆ ಸಂಬಂಧಿಸಿದ ಅವರ ಯೋಜನೆಗಳು ಮತ್ತು ಆದ್ಯತೆಗಳನ್ನೂ ನಾವು ಚರ್ಚಿಸಿದ್ದೇವೆ,‘ ಎಂದು ತಿಳಿಸಿದ್ದಾರೆ. ಸೆರ್ಗಿಯೊ ಗೋರ್ ಜನವರಿ ಮಧ್ಯದಲ್ಲಿ ನವದೆಹಲಿಗೆ ಆಗಮಿಸುವ ನಿರೀಕ್ಷೆಯಿದ್ದು, ಪ್ರಾರಂಭದಲ್ಲಿ ರಾಯಭಾರ ಕಚೇರಿಯಲ್ಲಿ ಕಡಿಮೆ ಸಂಖ್ಯೆಯ ವೃತ್ತಿ-ಅಲ್ಲದ ರಾಜತಾಂತ್ರಿಕರ ತಂಡ ಅವರೊಂದಿಗೆ ಕಾರ್ಯನಿರ್ವಹಿಸಲಿದೆ.
ಆಮದು ತಪಾಸಣೆಯಲ್ಲಿ ಸುಧಾರಣೆ!
ಈ ಮಧ್ಯೆ, ಭಾರತವು ಅಧಿಕಾರಶಾಹಿ ಕಡಿತ ಮತ್ತು ಆಮದು ಗುಣಮಟ್ಟದ ಪರಿಶೀಲನೆಗಳನ್ನು ಸರಳಗೊಳಿಸುವ ಹಲವು ಸುಧಾರಣೆಗಳನ್ನು ಘೋಷಿಸಿದೆ. ಅಮೆರಿಕ ಎತ್ತಿದ ಕಳವಳಗಳಿಗೆ ಉತ್ತರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವಾಣಿಜ್ಯ ಸಚಿವಾಲಯದ ಪ್ರಕಾರ, ಕಾಗದಪತ್ರಗಳ ಕಡಿತ, ಸಮಯಾವಧಿ ಇಳಿಕೆ, ತಪಾಸಣೆಗಳ ಸಂಖ್ಯೆಯಲ್ಲಿ ಕಡಿತ,
ಈ ಸುಧಾರಣೆಗಳ ಪ್ರಮುಖ ಅಂಶಗಳಾಗಿವೆ. ಭಾರತೀಯ ಗುಣಮಟ್ಟ ಮಂಡಳಿಯ ಅಧ್ಯಕ್ಷ ಜಾಕ್ಸೇ ಶಾ, ಪ್ರಕ್ರಿಯೆಗಳನ್ನು ವೇಗಗೊಳಿಸುವುದು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದೇ ಗುರ” ಎಂದು ಹೇಳಿದ್ದಾರೆ.
ಕೃಷಿ ಉತ್ಪನ್ನಗಳ ಮೇಲೆ ಭಿನ್ನಾಭಿಪ್ರಾಯ!
ತಜ್ಞರ ಪ್ರಕಾರ, 50% ಸುಂಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ನಿರ್ಣಾಯಕ. ಅಮೆರಿಕವು ಬಾದಾಮಿ, ಜೋಳ, ಸೇಬು ಸೇರಿ ಕೃಷಿ ಉತ್ಪನ್ನಗಳು ಮತ್ತು ಕೈಗಾರಿಕಾ ಸರಕುಗಳ ಮೇಲಿನ ಸುಂಕ ಕಡಿತ ಬಯಸುತ್ತಿದೆ. ಆದರೆ, ಕೃಷಿ ಮತ್ತು ಡೈರಿ ಉತ್ಪನ್ನಗಳ ಮೇಲಿನ ವಿನಾಯಿತಿಗಳನ್ನು ಭಾರತ ತೀವ್ರವಾಗಿ ವಿರೋಧಿಸಿದೆ, ಇದರಿಂದ ರೈತರು ಹಾಗೂ ಸಣ್ಣ ಉದ್ಯಮಗಳಿಗೆ ಹಾನಿಯಾಗುತ್ತದೆ ಎಂದು ನವದೆಹಲಿ ವಾದಿಸಿದೆ.
ವ್ಯಾಪಾರ ಅಂಕಿಅಂಶಗಳು ಏನು ಹೇಳುತ್ತವೆ?
ಭಾರತ–ಅಮೆರಿಕ ನಡುವೆ ಇದುವರೆಗೆ ಆರು ಸುತ್ತಿನ ಮಾತುಕತೆಗಳು ನಡೆದಿವೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು US$500 ಶತಕೋಟಿಗೆ ಹೆಚ್ಚಿಸುವ ಗುರಿ ಇಡಲಾಗಿದೆ. 2024–25ರಲ್ಲಿ ಅಮೆರಿಕ ಭಾರತಕ್ಕೆ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿಯೇ ಉಳಿದಿದೆ. ಹೆಚ್ಚಿನ ಸುಂಕಗಳ ನಡುವೆಯೂ, ನವೆಂಬರ್‌ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು 22.61% ಏರಿಕೆಯಾಗಿ US$6.98 ಶತಕೋಟಿಗೆ ತಲುಪಿದೆ. ಇದು ವ್ಯಾಪಾರ ಸಂಬಂಧಗಳ ಬಲವನ್ನು ತೋರಿಸುತ್ತದೆ. ಒಟ್ಟಾರಿಯಾಗಿ ಈ ಭೇಟಿ, ಭಾರತ–ಅಮೆರಿಕ ಸಂಬಂಧಗಳಲ್ಲಿ ಅದರದೇ ಆದ ರಾಜತಾಂತ್ರಿಕ ಮಹತ್ವ ಹೊಂದಿದೆ.
Delhi,Delhi,Delhi