Good News: ಕರಾವಳಿ ಹಾಗೂ ಬೆಂಗಳೂರಿನ ನಡುವೆ ವಂದೇ ಭಾರತ್‌ ಪಕ್ಕಾ?! ಅತೀ ಕಠಿಣ ಕಾಮಗಾರಿಯನ್ನು ಸಾಧಿಸಿದ ಭಾರತೀಯ ರೈಲ್ವೆ! | Sakaleshpur Subrahmanya Ghat rail route electrification success | ದಕ್ಷಿಣ ಕನ್ನಡ

Good News: ಕರಾವಳಿ ಹಾಗೂ ಬೆಂಗಳೂರಿನ ನಡುವೆ ವಂದೇ ಭಾರತ್‌ ಪಕ್ಕಾ?! ಅತೀ ಕಠಿಣ ಕಾಮಗಾರಿಯನ್ನು ಸಾಧಿಸಿದ ಭಾರತೀಯ ರೈಲ್ವೆ! | Sakaleshpur Subrahmanya Ghat rail route electrification success | ದಕ್ಷಿಣ ಕನ್ನಡ

Last Updated:

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ. ಘಟ್ಟದ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಯಶಸ್ವಿಯಾಗಿ ಪೂರ್ಣಗೊಂಡು, ವಂದೇ ಭಾರತ್ ಸಂಚಾರಕ್ಕೆ ದಾರಿ ತೆರೆದಿದೆ.

ರೈಲ್ವೆ ಇಲಾಖೆ
ರೈಲ್ವೆ ಇಲಾಖೆ

ದಕ್ಷಿಣಕನ್ನಡ:  ಭಾರತೀಯ ರೈಲ್ವೆಯಲ್ಲಿ ಅತ್ಯಂತ ಸವಾಲಿನ ರೈಲ್ವೆ (Railway) ಮಾರ್ಗವಾಗಿರುವ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ. ಉದ್ದದ ಘಟ್ಟದ ರೈಲ್ವೆ ಮಾರ್ಗದ (Route) ವಿದ್ಯುದ್ದೀಕರಣ ಕಾಮಗಾರಿಯನ್ನು ರೈಲ್ವೆ ಇಲಾಖೆ ಪೂರ್ಣಗೊಳಿಸಿದ್ದು, ಪ್ರಯೋಗಾತ್ಮಕವಾಗಿ ವಿದ್ಯುತ್ ಲೋಕೊಮೋಟಿವ್ ಚಾಲನೆಯನ್ನು ಭಾನುವಾರ ಯಶಸ್ವಿಯಾಗಿ (Success) ಪೂರ್ಣಗೊಳಿಸಿದೆ.

ಭಾರತೀಯ ರೈಲ್ವೆಯ ಮಹಾ ವಿಕ್ರಮ!

ಭಾರತೀಯ ರೈಲ್ವೆಯಲ್ಲಿ ಅತ್ಯಂತ ಸವಾಲಿನ ಕೆಲಸವಾಗಿರುವ ಘಾಟ್ ವಿಭಾಗವು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಲೋ ಮೀಟರ್​ ಉದ್ದದ ಮಾರ್ಗವನ್ನು ಒಳಗೊಂಡಿದ್ದು, ಇದು ಭಾರತೀಯ ರೈಲ್ವೆಯ ಅತ್ಯಂತ ತಾಂತ್ರಿಕ ಸವಾಲಿನ ವಿಭಾಗಗಳಲ್ಲಿ ಒಂದಾಗಿದೆ. ಈ ಮಾರ್ಗದಲ್ಲಿ 1ಕ್ಕೆ 50 ರಷ್ಟು ಗ್ರೇಡಿಯಂಟ್, 57 ಸುರಂಗಗಳು, 258 ಸೇತುವೆಗಳು, 108 ತೀಕ್ಷ್ಣ ವಕ್ರಗಳು ಇರುವುದರ ಜೊತೆಗೆ, ಭೂಕುಸಿತಗಳಿಗೆ ಹೆಚ್ಚು ಒಳಪಡುವ ಪ್ರದೇಶವಾಗಿರುವುದರಿಂದ, ವಿದ್ಯುದೀಕರಣ ಕಾರ್ಯವು ಅತ್ಯಂತ ಸಂಕೀರ್ಣವಾಗಿತ್ತು.

2 ವರ್ಷದಲ್ಲಿ ಪೂರ್ಣಗೊಂಡ ಕಠಿಣ ಕಾಮಗಾರಿ

ವಿದ್ಯುದೀಕರಣ ಕಾರ್ಯವು 2023ರ ಡಿಸೆಂಬರ್‌ 1ರಂದು ಆರಂಭಗೊಂಡು, ರೂಪಾಯಿ 93.55 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಈ ಯೋಜನೆಯಡಿ ಮಾರ್ಗದೊಳಗೆ ಐದು ಸ್ವಿಚಿಂಗ್ ಸ್ಟೇಷನ್‌ಗಳ ನಿರ್ಮಾಣ ಹಾಗೂ ಸಂಪೂರ್ಣ ವಿಭಾಗದಲ್ಲಿ ಮೇಲ್ಮೈ ವಿದ್ಯುದೀಕರಣ ಕಾರ್ಯ ಕೈಗೊಳ್ಳಲಾಗಿದೆ.

ಗರಿಷ್ಠ 120 ಕಿಲೋಮೀಟರ್‌ ವೇಗದಲ್ಲಿ ಓಡಲಿದೆ ರೈಲು

ಮೇಲ್ಮೈ ವಿದ್ಯುತ್ ವ್ಯವಸ್ಥೆಯನ್ನು ಗರಿಷ್ಠ 120 ಕಿ.ಮೀ. ಪ್ರತಿ ಗಂಟೆ ವೇಗಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಎರಡು ವಿದ್ಯುತ್ ಕಂಬಗಳ ನಡುವಿನ ಗರಿಷ್ಠ ಅಂತರವನ್ನು 67.5 ಮೀಟರ್‌ಗೆ ಮಿತಿಗೊಳಿಸಲಾಗಿದೆ. ಇದರಿಂದ ಕಾರ್ಯಾಚರಣಾ ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ಖಚಿತಗೊಂಡಿದೆ.

57 ಸುರಂಗಗಳಿಗೂ ವಿದ್ಯುದ್ದೀಕರಣ

ಈ ವಿಭಾಗದಲ್ಲಿರುವ 57 ಸುರಂಗಗಳಲ್ಲಿ, ಮೇಲ್ಮೈ ವಿದ್ಯುತ್ ಸಾಧನಗಳ ಅಳವಡಿಕೆಗೆ 419 ಮುಖ್ಯ ಬ್ರಾಕೆಟ್‌ಗಳು ಮತ್ತು 419 ಹೆಚ್ಚುವರಿ (ಸ್ಪೇರ್) ಬ್ರಾಕೆಟ್‌ಗಳನ್ನು ಒದಗಿಸಲಾಗಿದೆ. ಸುರಂಗಗಳ ಲೈನ್ಡ್ ಹಾಗೂ ಅನ್ಲೈನ್ಡ್ ಭಾಗಗಳಿಗೆ ಸಂಬಂಧಿಸಿದಂತೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಸವಿಸ್ತಾರವಾದ ಭೌಗೋಳಿಕ ಸಮೀಕ್ಷೆಗಳನ್ನು ನಡೆಸಲಾಗಿದೆ. ಪ್ರತಿಯೊಂದು ಬ್ರಾಕೆಟ್ ಸ್ಥಳದಲ್ಲಿಯೂ ಬೋಲ್ಟ್‌ಗಳ ಸಮರ್ಪಕ ಗ್ರೌಟಿಂಗ್ ಮತ್ತು ದೀರ್ಘಕಾಲೀನ ಸ್ಥಿರತೆಯನ್ನು ಖಚಿತಪಡಿಸಲು ಪುಲ್-ಔಟ್ ಪರೀಕ್ಷೆಗಳನ್ನು ನಡೆಸಲಾಗಿದೆ.

ಯಶಸ್ವಿಯಾಯ್ತು ಲೋಕೋಮೋಟಿವ್‌ ಪರೀಕ್ಷೆ

830 ಮೀಟರ್‌ವರೆಗೆ ವಿಸ್ತರಿಸಿರುವ ತೀವ್ರ ಏರುಗುಡ್ಡಗಳು ಇರುವುದರಿಂದ, ಮೇಲ್ಮೈ ವಿದ್ಯುತ್ ವ್ಯವಸ್ಥೆಯ ಒತ್ತಡ ಮತ್ತು ಸ್ಥಿರತೆಯನ್ನು ಕಾಪಾಡಲು ವಿಶೇಷ ಉಪಕರಣಗಳು ಮತ್ತು ಬಲಿಷ್ಠ ಎಂಜಿನಿಯರಿಂಗ್ ವಿನ್ಯಾಸಗಳನ್ನು ಅಳವಡಿಸಲಾಗಿದೆ.  ವಿದ್ಯುದೀಕರಣ ಕಾರ್ಯ ಮತ್ತು ವಿದ್ಯುತ್ ಲೋಕೊಮೋಟಿವ್ ಪ್ರಯೋಗಾತ್ಮಕ ಚಾಲನೆ ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ, ಸಂಪೂರ್ಣ ಘಾಟ್ ವಿಭಾಗವು ಈಗ ವಿದ್ಯುತ್ ಚಾಲನೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ.

ವಂದೇ ಭಾರತ್‌ ಸಂಚಾರಕ್ಕೆ ಕಾಲ ಕೂಡಿ ಬಂತು!

ಇದನ್ನೂ ಓದಿ: Special News: ಈ ಅಂಗಡಿಗಳಲ್ಲಿ ಏನೇ ಕೊಂಡ್ರೂ ಟಿವಿ, ಬೈಕ್‌, ಕಾರು ಉಚಿತ! ತಮಾಷೆನೇ ಅಲ್ಲ, ಇದು ಪಕ್ಕಾ ಲಕ್ಕಿನ ಆಟ

ಇದರಿಂದ ಸ್ವಚ್ಛ, ಶಕ್ತಿ ಸಮರ್ಥ ಮತ್ತು ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ. ಈ ಸಾಧನೆ ಭಾರತೀಯ ರೈಲ್ವೆಯ ಶೇಕಡಾ 100 ವಿದ್ಯುದೀಕರಣ ಗುರಿಯತ್ತ ಮಹತ್ವದ ಹೆಜ್ಜೆಯಾಗಿದ್ದು, ಕಠಿಣ ಭೌಗೋಳಿಕ ಪರಿಸ್ಥಿತಿಗಳಲ್ಲೂ ಸತತ, ಪರಿಸರ ಸ್ನೇಹಿ ಮತ್ತು ಸ್ಥಿರ ರೈಲು ಮೂಲಸೌಕರ್ಯ ನಿರ್ಮಾಣದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಪ್ರಕಟಣೆ ತಿಳಿಸಿದೆ. ಇದರಿಂದಾಗಿ ಇನ್ನು ಮುಂದೆ ಮಂಗಳೂರು ಬೆಂಗಳೂರು ನಡುವೆ ವಂದೇ ಭಾರತ್ ಸೇರಿದಂತೆ ಹಲವು ರೈಲುಗಳ ಸಂಚಾರಕ್ಕೆ ಅವಕಾಶ ದೊರೆಯಲಿದೆ