Last Updated:
ಪುತ್ತೂರಿನ ಅಂಬಿಕಾ ಶಿಕ್ಷಣ ಸಂಸ್ಥೆ ಹಾಗೂ ಮಾಜಿ ಸೈನಿಕರ ಸಂಘ ಪರಮವೀರ ಚಕ್ರ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸನ್ಮಾನಿಸಿ ದೇಶಭಕ್ತಿಗೆ ಪ್ರೇರಣೆ ನೀಡಿತು.
ದಕ್ಷಿಣ ಕನ್ನಡ: ದೇಶದ ಗಡಿ ಕಾಯುವ ಸೈನಿಕರಿಗೆ ಎಷ್ಟು ಗೌರವ (Respect) ಕೊಟ್ಟರೂ ಕಡಿಮೆಯೇ. ದೇಶಕ್ಕಾಗಿ ಸೈನಿಕ ಹುತಾತ್ಮರಾದಾಗ (Martyr) ಅಥವಾ ಸೈನಿಕರ ದಿನಾಚರಣೆಯಂತಹ ಕಾರ್ಯಕ್ರಮಗಳು ನಡೆದಾಗ ಸೈನಿಕರ (Soldier) ನೆನಪಾಗುತ್ತೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur) ಪ್ರತಿಬಾರಿಯೂ ಸೈನಿಕರಿಗಾಗಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತದೆ.
ಕಾರ್ಗಿಲ್ ಯುದ್ಧದಲ್ಲಿ ವೀರ ಸೇನಾನಿಗಳಾಗಿ ಹೋರಾಡಿ, ತನ್ನ ಜೀವಿತ ಕಾಲದಲ್ಲಿ ಸೈನ್ಯದ ಅತ್ಯುನ್ನತ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಪಡೆದ ದೇಶದ ಇಬ್ಬರೇ ಯೋಧರಲ್ಲಿ ಒಬ್ಬರಾದ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ಅವರನ್ನ ಈಗಾಗಲೇ ಪುತ್ತೂರಿನ ಜನತೆಗೆ ಪರಿಚಯಿಸಿರುವ ಅಂಬಿಕಾ ಶಿಕ್ಷಣ ಸಂಸ್ಥೆ ಈ ಬಾರಿ ಪುತ್ತೂರು ಮಾಜಿ ಸೈನಿಕರ ಸಂಘ ಇನ್ನೋರ್ವ ಪರಮವೀರ ಚಕ್ರ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನೂ ಪುತ್ತೂರಿಗೆ ಕರೆತಂದಿದೆ.
ದೇಶಪ್ರೇಮ, ಧರ್ಮಜಾಗೃತಿ, ಸಂಸ್ಕೃತಿ-ಸಂಸ್ಕಾರಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಿರುವ ಅಂಬಿಕಾ ಶಿಕ್ಷಣ ಸಂಸ್ಥೆ ಭಾರತೀಯ ಸೇನೆ, ಸೈನಿಕರೆಡೆಗೆ ಗೌರವ ಭಾವವನ್ನು ಹೊಂದಿವೆ. ಅಂಬಿಕಾದಲ್ಲಿ ಶಿಕ್ಷಣ ಪಡೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಭಾರತೀಯ ಸೇನೆ ಹಾಗೂ ಸೈನಿಕರ ತ್ಯಾಗ, ಪರಿಶ್ರಮಗಳ ಬಗೆಗೆ ಅರಿವು ಮೂಡಿಸುವ ಕಾರ್ಯ ನಿರಂತರ ನಡೆಯುತ್ತಿವೆ.
ಸೈನಿಕರ ಮಕ್ಕಳಿಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಶುಲ್ಕ ವಿನಾಯಿತಿಯನ್ನೂ ನೀಡಲಾಗುತ್ತಿದೆ. 2024 ರಲ್ಲಿ ಕಾರ್ಗಿಲ್ ವಿಜಯೋತ್ಸವಕ್ಕೆ ಇಪ್ಪತ್ತೈದು ವರ್ಷ ತುಂಬಿದ ಸಂದರ್ಭದಲ್ಲಿ ಅಂಬಿಕಾ ಸಂಸ್ಥೆಗಳು, ಪುತ್ತೂರಿನ ಮಾಜಿ ಸೈನಿಕರ ಸಂಘ ಹಾಗೂ ಅನ್ಯಾನ್ಯ ಸಂಘಟನೆಗಳು ಹಾಗೂ ನಾಗರಿಕರ ಸಹಯೋಗದೊಂದಿಗೆ ಆದ್ಧೂರಿ ಕಾರ್ಯಕ್ರಮ ಈ ಹಿಂದೆ ಹಮ್ಮಿಕೊಳ್ಳಲಾಗಿತ್ತು.
ಭಾರತಾಂಬೆಯ ಹೆಮ್ಮೆಯ ಸುಪುತ್ರ ಲೆಫ್ಟಿನೆಂಟ್ ಸಂಜಯ್ ಕುಮಾರ್ ಪುತ್ತೂರಿಗೆ ಆಗಮಿಸಿದ್ದಾರೆ. ಪುತ್ತೂರಿಗೆ ಬಂದ ಅವರನ್ನು ಭವ್ಯ ಮೆರವಣಿಗೆಯ ಮೂಲಕ ಸಾರ್ವಜನಿಕರು ಸ್ವಾಗತಿಸಿದರು. ಹೆಚ್ಚಾಗಿ ಪರಮವೀರ ಚಕ್ರವನ್ನು ದೇಶಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದ ಸೈನಿಕನಿಗೆ ಮರಣೋತ್ತರವಾಗಿ ನೀಡಲಾಗುತ್ತದೆ. ಪರಮವೀರ ಚಕ್ರದ ಪ್ರಶಸ್ತಿಯ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶಕ್ಕಾಗಿ ಹೋರಾಡಿ ಜೀವಂತವಾಗಿ ಉಳಿದ ಇಬ್ಬರಿಗೆ ಮಾತ್ರ ಪರಮವೀರ ಚಕ್ರವನ್ನು ಪ್ರಧಾನ ಮಾಡಲಾಗಿದೆ. ಪರಮಚಕ್ರ ಪ್ರಶಸ್ತಿ ಪುರಸ್ಕೃತ ಸಂಜಯ್ ಕುಮಾರ್ ಆಗಮಿಸಿದ್ದಾರೆ.
ಭರ್ಜರಿಯಾಗಿ ನಡೆದ ಕಾರ್ಯಕ್ರಮ
ಪುತ್ತೂರಿಗೆ ಆಗಮಿಸಿದ ಸಂಜಯ್ ಕುಮಾರ್ ಅವರನ್ನು ದರ್ಬೆ ಸರ್ಕಲ್ನಿಂದ ರಥದಲ್ಲಿ ಕುಳ್ಳಿರಿಸಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ನೂರಾರು ಸಂಖ್ಯೆಯ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿ, ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಡೊಲ್ಲು ಕುಣಿತ, ಪಟ ಕುಣಿತ, ಕೇರಳ ಚೆಂಡೆ ಮೊದಲಾದ ಕಲಾಪ್ರಕಾರಗಳೂ ಮೆರವಣಿಗೆಯಲ್ಲಿ ಪಾಲ್ಗೊಂಡವು.
Dakshina Kannada,Karnataka