Kambala Record: ಕಂಬಳದಲ್ಲಿ ಮತ್ತೊಂದು ಹೊಸ ದಾಖಲೆ, ಇನ್ನೊಂದು ಇತಿಹಾಸ ನಿರ್ಮಿಸಿದ್ದು ಇವರೇ ನೋಡಿ! | Kambala race | ದಕ್ಷಿಣ ಕನ್ನಡ

Kambala Record: ಕಂಬಳದಲ್ಲಿ ಮತ್ತೊಂದು ಹೊಸ ದಾಖಲೆ, ಇನ್ನೊಂದು ಇತಿಹಾಸ ನಿರ್ಮಿಸಿದ್ದು ಇವರೇ ನೋಡಿ! | Kambala race | ದಕ್ಷಿಣ ಕನ್ನಡ

Last Updated:

ಮಂಗಳೂರು ಕಂಬಳದಲ್ಲಿ ಮಾಸ್ತಿಕಟ್ಟೆ ಸ್ವರೂಪ್ ಕುಮಾರ್ 125 ಮೀಟರ್ ಓಟವನ್ನು 10.87 ಸೆಕೆಂಡಿನಲ್ಲಿ ಪೂರೈಸಿ ಶ್ರೀನಿವಾಸ ಗೌಡರ ದಾಖಲೆಯನ್ನು ಮೀರಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ನಾಲ್ಕು ವರ್ಷಗಳ ಹಿಂದೆ ಕಂಬಳದ (Kambala) ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ನೂರು ಮೀಟರ್ ಓಟವನ್ನು ಕೇವಲ 8.76 ಸೆಕೆಂಡಿನಲ್ಲಿ ಪೂರೈಸುವ ಮೂಲಕ ಜಗತ್ತಿನ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಸಾಧನೆಯನ್ನು ಮೀರಿಸಿದ್ದು ದೇಶದ ಗಮನ ಸೆಳೆದಿತ್ತು. ಆದರೆ, ಕಂಬಳ ಓಟದಲ್ಲಿ ಶ್ರೀನಿವಾಸ ಗೌಡರ ದಾಖಲೆಯನ್ನು (Record) ಮೀರಿಸಿದ ಹೊಸ ದಾಖಲೆ ಮಂಗಳೂರು (Mangaluru) ಕಂಬಳದಲ್ಲಿ ದಾಖಲಾಗಿದೆ.

ನೂತನ ದಾಖಲೆ

ಮಂಗಳೂರಿನ ಕುಳೂರಿನಲ್ಲಿ ನಡೆದ ರಾಮ ಲಕ್ಷ್ಮಣ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಶ್ರೀಕ ಸಂದೀಪ್ ಶೆಟ್ಟಿ ಅವರ ಕೋಣಗಳು 125 ಮೀಟರ್ ಉದ್ದದ ಕರೆಯನ್ನು 10.87 ಸೆಕೆಂಡುಗಳಲ್ಲಿ ಕ್ರಮಿಸಿ ನೂತನ ದಾಖಲೆ ಬರೆದಿದೆ. ಈ ಕೋಣಗಳನ್ನು ಕುಂದ ಬಾರಂದಾಡಿ ಮಾಸ್ತಿಕಟ್ಟೆ ಸ್ವರೂಪ್ ಕುಮಾರ್ ಓಡಿಸಿದ್ದು ಹೊಸ ದಾಖಲೆಗೆ ಸಾಕ್ಷಿಯಾಗಿದ್ದಾರೆ. ನೂರು ಮೀಟರ್ ಓಟವನ್ನು ಕೇವಲ 8.69 ಸೆಕೆಂಡಿನಲ್ಲಿ ಕ್ರಮಿಸಿ ಶ್ರೀನಿವಾಸ ಗೌಡರ ಸಾಧನೆಯನ್ನು ಮೀರಿಸಿದ್ದು ಮಂಗಳೂರು ಕಂಬಳದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅತಿ ವೇಗದ ಓಟವೆಂದು ದಾಖಲೆ

ಇದೇ ಕಂಬಳದ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಇವರದ್ದೇ ಸಂತು ಮತ್ತು ಪಾಂಚ ಕೋಣಗಳು 125 ಮೀಟರ್ ಓಟವನ್ನು 11.06 ಸೆಕೆಂಡಿನಲ್ಲಿ ಕ್ರಮಿಸಿ ಈ ಋತುವಿನ ಅತಿ ವೇಗದ ಓಟವೆಂದು ದಾಖಲೆ ಮಾಡಿದ್ದವು. ಆದರೆ ಮುಂದಿನ ಓಟದಲ್ಲಿಯೇ ಈವರೆಗಿನ ಕಂಬಳದ ಎಲ್ಲ ದಾಖಲೆಯನ್ನೂ ಮೀರಿಸಿ ಮಾಸ್ತಿಕಟ್ಟೆ ಸ್ವರೂಪ್ ಹೊಸ ದಾಖಲೆ ಸ್ಥಾಪಿಸಿದ್ದಾರೆ.

ಇದನ್ನೂ ಓದಿ: Lord Ayyappa: ದಕ್ಷಿಣ ಕನ್ನಡದಲ್ಲಿ ಅಯ್ಯಪ್ಪ ದೀಪೋತ್ಸವ ಸಂಭ್ರಮ, ಈ ಸೇವೆ ಮಾಡಿದ ಭಕ್ತರು!

ಈ ಹಿಂದೆ 2021ರ ಕಕ್ಯಪದವು ಕಂಬಳದಲ್ಲಿ ಮಿಜಾರು ಶಕ್ತಿಪ್ರಸಾದ್ ಅವರ ಕೋಣಗಳನ್ನು ಓಡಿಸಿದ್ದ ಅಶ್ವತ್ಥಪುರ ಶ್ರೀನಿವಾಸ ಗೌಡ 125 ಮೀಟರ್ ಓಟವನ್ನು 10.95 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ (ನೂರು ಮೀಟರಿಗೆ 8.76 ಸೆಕಂಡ್) ಕ್ರಮಿಸಿ ಹೊಸ ದಾಖಲೆ ಬರೆದಿದ್ದರು. ಜಗತ್ತಿನ ಅತಿವೇಗದ ಓಟಗಾರ ಹುಸೇನ್ ಬೋಲ್ಟ್ ನೂರು ಮೀಟರ್ ಓಟವನ್ನು 9 ಸೆಕಂಡಿನಲ್ಲಿ ಪೂರೈಸಿರುವುದು ಅತಿ ವೇಗದ ಓಟದ ದಾಖಲೆಯಾಗಿದ್ದು, ಅದನ್ನು ಮೀರಿಸಿದ್ದಾರೆಂದು ಶ್ರೀನಿವಾಸ ಗೌಡರಿಗೆ ದೇಶ- ವಿದೇಶದಲ್ಲಿ ಖ್ಯಾತಿ ಬಂದಿತ್ತು. ಇದೀಗ ಮಾಸ್ತಿಕಟ್ಟೆ ಸ್ವರೂಪ್ ಅವರು ಶ್ರೀನಿವಾಸ ಗೌಡರ ಹೆಸರಲ್ಲಿದ್ದ ದಾಖಲೆಯನ್ನು ಮೀರಿಸಿ ಅಪರೂಪದ ದಾಖಲೆಯನ್ನು ಸ್ಥಾಪಿಸಿದ್ದಾರೆ.