ರೋಡ್ ಟ್ರಿಪ್‌ಗೆ ಸಿದ್ಧತೆಗಳನ್ನು ಸರಿಯಾಗಿ ಮಾಡಬೇಕಾಗುತ್ತದೆ. ತಿಂಡಿ ತಿನಿಸುಗಳು, ನೀರಿನ ಸಂಗ್ರಹಣೆ, ಬಟ್ಟೆ ಬರೆ, ಪಾತ್ರೆ ಪಗಡೆ, ಆಹಾರ ಸಲಕರಣೆಗಳು ಇದರೊಂದಿಗೆ ನೀವು ಕೆಲವೊಂದು ಪ್ರಮುಖ ಗ್ಯಾಜೆಟ್‌ಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಬೇಕಾಗುತ್ತದೆ. ಟಯರ್ ಇನ್‌ಫ್ಲೇಟರ್‌ನಿಂದ ಹಿಡಿದು ಡ್ಯಾಶ್ ಕ್ಯಾಮೆರಾದವರೆಗೆ, ಈ ಅಗತ್ಯ ಪರಿಕರಗಳು ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸುತ್ತದೆ ಅದರೊಂದಿಗೆ ಆರಾಮವಾಗಿಯೇ ನೀವು ರೋಡ್ ಟ್ರಿಪ್ ಅನ್ನು ಕೈಗೊಳ್ಳಬಹುದು. ಹಾಗಿದ್ದರೆ ನಿಮ್ಮಲ್ಲಿರಲೇಬೇಕಾದ ಗ್ಯಾಜೆಟ್‌ಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ
ರೋಡ್ ಟ್ರಿಪ್ ಮಾಡುವಾಗ ಬ್ಯಾಟರಿ ಖಾಲಿಯಾಯಿತು ಎಂದಾದಾಗ ಅದು ನಿಜಕ್ಕೂ ದಿಗಿಲು ಹುಟ್ಟಿಸುತ್ತದೆ. ಹಾಗಾದಾಗ ನೆರವಿನ ಸ್ಥಳದಲ್ಲಿ ನಾವಿಲ್ಲ ಎಂದಾಗ ನಮ್ಮ ಬಳಿ ಪೋರ್ಟೇಬಲ್ ಕಾರ್ ಜಂಪ್ ಸ್ಟಾರ್ಟರ್ ಅನ್ನು ಹೊಂದಿರುವುದು ನಮ್ಮ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ಈ ಡಿವೈಸ್ ಒಂದು ಬ್ಯಾಟರಿಯನ್ನೊಳಗೊಂಡಿದ್ದು ಕಾರನ್ನು ಹಲವಾರು ಸ್ಟಾರ್ಟ್ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. NOCO ಬೂಸ್ಟ್ ಪ್ಲಸ್ GB40 ನಂತಹ ಆಧುನಿಕ ಜಂಪ್ ಸ್ಟಾರ್ಟರ್‌ಗಳು ಚಿಕ್ಕದಾಗಿದ್ದು ಕಾರ್ಯನಿರ್ವಹಿಸಲು ಸರಳವಾಗಿದೆ. ಇನ್ನು ಕೆಲವು ಗ್ಯಾಜೆಟ್‌ಗಳು ಯುಎಸ್‌ಬಿ ಪೋರ್ಟ್ ಹಾಗೂ ಟಾರ್ಚ್‌ಗಳೊಂದಿಗೂ ಬರುತ್ತವೆ. ತುರ್ತು ಸಮಯದಲ್ಲಿ ಇವುಗಳ ಬಳಕೆಯನ್ನು ನೀವು ಮಾಡಬಹುದು.
ರಸ್ತೆ ಸುರಕ್ಷತೆಗೆ ಹಾಗೂ ಇಂಧನ ಆರ್ಥಿಕತೆಗೆ ಅಗತ್ಯವಾಗಿ ಬೇಕಾಗಿರುವುದು ಉತ್ತಮ ಟಯರ್ ಪ್ರೆಶರ್ ಆಗಿದೆ. ಪೋರ್ಟೇಬಲ್ ಟಯರ್ ಇನ್ಫ್ಲೇಟರ್ ತುರ್ತು ಪರಿಸ್ಥಿತಿಗಳಲ್ಲಿ ನೆರವನ್ನೊದಗಿಸುತ್ತದೆ. ಡ್ರೈವಿಂಗ್‌ಗೂ ಮುನ್ನ ಡಿಜಿಟಲ್ ಟೈರ್ ಪ್ರೆಶರ್ ಗೇಜ್‌ನೊಂದಿಗೆ ಜೋಡಿಸುವ ಮೂಲಕ ಟಯರ್ ಒತ್ತಡದ ಮಟ್ಟವನ್ನು ಪರಿಶೀಲಿಸಿ. ಇದೊಂದು ಸಣ್ಣ ಗ್ಯಾಜೆಟ್ ಆಗಿದ್ದು ಟಯರ್ ಬಾಳಿಕೆಯನ್ನು ಇದು ಹೆಚ್ಚಿಸುತ್ತದೆ ಇದರೊಂದಿಗೆ ಆರಾಮದಾಯಕ, ಸುರಕ್ಷಿತ ಪ್ರಯಾಣ ನಿಮ್ಮದಾಗುತ್ತದೆ.
ಗೂಗಲ್ ಮ್ಯಾಪ್ಸ್ ಹಾಗೂ ವೇಜ್‌ನಂತಹ ಅಪ್ಲಿಕೇಶನ್‌ಗಳನ್ನು ನೀವು ಹೊಂದಿದ್ದರೂ ಇವುಗಳಿಗಿಂತಲೂ ಪರಿಣಾಮಕಾರಿಯಾಗಿರುವ ವಿಶೇಷ ಜಿಪಿಎಸ್ ವ್ಯವಸ್ಥೆಯನ್ನು ಹೊಂದಿರುವುದು ಹೆಚ್ಚು ವಿಶ್ವಾಸಾರ್ಹವಾಗಿದೆ.
ವಾಯ್ಸ್ ಕಮಾಂಡ್ಸ್, ಆಫ್‌ಲೈನ್ ಮ್ಯಾಪ್ಸ್, ರಿಯಲ್ – ಟೈಮ್ ಟ್ರಾಫಿಕ್ ಅಪ್‌ಡೇಟ್ಸ್, ಮೊದಲಾದ ಫೀಚರ್ಸ್ ಒಳಗೊಂಡಿರುವ ಟಾಮ್‌ಟಾಮ್ ಗೊ ಸುಪ್ರೀಂ ಹಾಗೂ ಗಾರ್ಮಿನ್ ಡ್ರೈವ್‌ಸ್ಮಾರ್ಟ್ 66 ನಂತಹ ಡಿವೈಸ್‌ಗಳು ದಾರಿ ತಪ್ಪದಂತೆ ನಿಮ್ಮನ್ನು ಮುನ್ನಡೆಸುತ್ತದೆ.
ಪ್ರಯಾಣ ಸಮಯದಲ್ಲಿ ನಿಮ್ಮ ಫೋನ್, ಕ್ಯಾಮೆರಾ, ಟ್ಯಾಬ್ಲೆಟ್ ಹಾಗೂ ಲ್ಯಾಪ್‌ಟಾಪ್‌ಗಳ ಚಾರ್ಜಿಂಗ್ ಇನ್ನೊಂದು ದೊಡ್ಡ ತಲೆನೋವಾಗಿದೆ. ನಿಮ್ಮ ಕಾರಿನ DC ವಿದ್ಯುತ್ ಅನ್ನು AC ಆಗಿ ಪರಿವರ್ತಿಸುವ ಮೂಲಕ BESTEK 300W ನಂತಹ ಪವರ್ ಇನ್ವರ್ಟರ್ ಲ್ಯಾಪ್‌ಟಾಪ್‌ಗಳು ಅಥವಾ ಮಿನಿ-ಫ್ರಿಡ್ಜ್‌ಗಳಂತಹ ದೊಡ್ಡ ಉಪಕರಣಗಳನ್ನು ಸಂಪರ್ಕಿಸಲು ಸಾಧ್ಯವಾಗಿಸುತ್ತದೆ. ಆ್ಯಂಕರ್ ಪವರ್‌ಕೋರ್ 26800 ನಂತಹ ಹೆಚ್ಚಿನ ಸಾಮರ್ಥ್ಯದ ಪವರ್ ಬ್ಯಾಂಕ್ ಮೂಲಕ ನಿಮ್ಮ ಡಿವೈಸ್‌ಗಳ ಚಾರ್ಜ್ ಅನ್ನು ಕೂಡಲೇ ಮಾಡಬಹುದಾಗಿದೆ.
ರೋಡ್ ಟ್ರಿಪ್‌ಗಳಿಗೆ ಡ್ಯಾಶ್ ಕ್ಯಾಮ್ ಅತ್ಯಂತ ಸೂಕ್ತವಾದುದಾಗಿದೆ. ಅತ್ಯಾಧುನಿಕ ಡ್ಯಾಶ್ ಕ್ಯಾಮೆರಾಗಳು ಪಾರ್ಕಿಂಗ್ ಮೋಡ್ ಅನ್ನು ಒಳಗೊಂಡಿರುತ್ತವೆ. ಹೆಚ್ಚುವರಿ ಭದ್ರತೆಯನ್ನೊದಗಿಸಲು ಕೂಡ ಡ್ಯಾಶ್ ಕ್ಯಾಮ್ ಪ್ರಯೋಜನಕಾರಿಯಾದುದಾಗಿದೆ. ನಿಮ್ಮ ರೋಡ್ ಟ್ರಿಪ್‌ನಲ್ಲಿ ಡ್ಯಾಶ್ ಕ್ಯಾಮ್ ಖರೀದಿಯನ್ನು ತಪ್ಪದೆ ಮಾಡಿ.
ನೀವು ಅತಿ ದೀರ್ಘವಾದ ರೋಡ್ ಟ್ರಿಪ್‌ಗೆ ತಯಾರಾಗುತ್ತಿದ್ದರೆ ನಿಮ್ಮ ಬಳಿ ಇರುವ ಆಹಾರಗಳ ಸುರಕ್ಷತೆಯನ್ನು ಕಾಪಾಡುವುದು ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಪೋರ್ಟೇಬಲ್ ಕಾರ್ ಕೂಲರ್ ಇಲ್ಲವೇ ಮಿನಿ ಫ್ರಿಡ್ಜ್ ಆಹಾರವನ್ನು ಕೂಲ್ ಆಗಿರಿಸುತ್ತದೆ. ವಾಹದನ ಪವರ್ ಸೋರ್ಸ್ ಅನ್ನು ಬಳಸಿಕೊಂಡು ಡೊಮೆಟಿಕ್ CFX3 45 ಮತ್ತು ಆಸ್ಟ್ರೋಎಐ 12V ಕಾರ್ ರೆಫ್ರಿಜರೇಟರ್‌ಗಳು ಪ್ರಯಾಣ ಸಮಯದಲ್ಲಿ ಆಹಾರ ಮತ್ತು ತಂಪು ಪಾನೀಯಗಳನ್ನು ಕೂಲ್ ಆಗಿರಿಸುತ್ತದೆ.
ರೋಡ್ ಟ್ರಿಪ್‌ಗಳನ್ನು ಒಮ್ಮೊಮ್ಮೆ ಅಚಾನಕ್ ಆಗಿ ಕೈಗೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಎಮರ್ಜನ್ಸಿ ಕಿಟ್ ಒಂದನ್ನು ಹೊಂದಿರುವುದು ಅಗತ್ಯವಾಗಿದೆ. ಲೆದರ್‌ಮ್ಯಾನ್ ವೇವ್+ ಮೊದಲಾದ ಬಹು ಉಪಕರಣಗಳುಳ್ಳ ಕಿಟ್ ತುರ್ತು ದುರಸ್ತಿಗೆ ಪರ್ಫೆಕ್ಟ್ ಆಗಿದೆ. ಇದರಲ್ಲಿ ಇಕ್ಕಳ, ಚಾಕುಗಳು, ಸ್ಕ್ರೂಡ್ರೈವರ್‌ಗಳು ಮತ್ತು ಇತರ ಪರಿಕರಗಳಿರುತ್ತವೆ.