Puttur Temple: ಪುತ್ತೂರಲ್ಲಿ ವರ್ಷಕ್ಕೊಮ್ಮೆ ಮಾತ್ರ ನಡೆಯುತ್ತೆ ಈ ಪೂಜೆ, ಬಹುಮೌಲ್ಯದ ಬೆಳೆ ಬಾಳೋ ವಸ್ತುಗಳಿಂದ ಆಗುತ್ತೆ ಅಭಿಷೇಕ! | Puttur Mahalingeshwara Temple | ದಕ್ಷಿಣ ಕನ್ನಡ

Puttur Temple: ಪುತ್ತೂರಲ್ಲಿ ವರ್ಷಕ್ಕೊಮ್ಮೆ ಮಾತ್ರ ನಡೆಯುತ್ತೆ ಈ ಪೂಜೆ, ಬಹುಮೌಲ್ಯದ ಬೆಳೆ ಬಾಳೋ ವಸ್ತುಗಳಿಂದ ಆಗುತ್ತೆ ಅಭಿಷೇಕ! | Puttur Mahalingeshwara Temple | ದಕ್ಷಿಣ ಕನ್ನಡ

Last Updated:

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಮಾತ್ರ ಧನುರ್ಮಾಸ ಮುಗಿದು ಮಕರ ಸಂಕ್ರಮಣದಂದು ಕನಕಾಭಿಷೇಕ ಹಾಗೂ ಬಲಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು (Putturu) ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ (Temple) ಧನುರ್ಮಾಸ ಮುಗಿದು ಉತ್ತರಾಯಣ ಪ್ರವೇಶದ ಪುಣ್ಯಕಾಲ ಜ.14ರ ಮಕರ ಸಂಕ್ರಮಣದಂದು (Sankranti) ರಾತ್ರಿ ಪೂಜೆ ನಂತರ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಪೂರ್ವಶಿಷ್ಟ ಪದ್ಧತಿಯಂತೆ ಶ್ರೀದೇವರಿಗೆ (God) ಕನಕಾಭಿಷೇಕ (Kanakabhisheka) ನಡೆಯಿತು. ಬೆಳಿಗ್ಗೆ ಧನುಪೂಜೆಗೆ ದೇವಳದ ಒಳಗೆ ಭಕ್ತಸಾಗರವೇ ತುಂಬಿತ್ತು. ಭಕ್ತರಿಗೆಲ್ಲರಿಗೂ ಪೂಜೆಯ ಪ್ರಸಾದ ಜೊತೆಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ವರ್ಷಕ್ಕೊಮ್ಮೆ ಮಾತ್ರ ಪೂಜೆ

ರಾತ್ರಿ ಮಹಾಲಿಂಗೇಶ್ವರ ದೇವರಿಗೆ ದೇವಳದ ಪ್ರಧಾನ ಅರ್ಚಕರಾದ ವಿ.ಎಸ್.ಭಟ್ ಅವರಿಂದ ಪೂಜೆ ನಡೆಯಿತು. ನಂತರ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಕನಕಾಭಿಷೇಕ ಜರುಗಿತು. ಅದಕ್ಕೂ ಮೊದಲು ರಾಧಾಕೃಷ್ಣ ನಂದಿಲ ಸೇವಾರ್ಥ ಪಲ್ಲಕಿ ಸೇವೆ ನಡೆಯಿತು. ಅರಸೊತ್ತಿಗೆಯ ಕಾಲದಲ್ಲಿ ದೇವಳದ ಕಾರ್ಯನಿರ್ವಾಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಕನಕಾಭಿಷೇಕ ನೆರವೇರಿಸಿದರು.

ಧನುಪೂಜೆಗೆ ದೇವಳದ ಒಳಗೆ ಭಕ್ತಸಾಗರ

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರಿಗೆ ಸೂತಕದ ಹಿನ್ನಲೆಯಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಅವರು ಕನಕಾಭಿಷೇಕ ನೆರವೇರಿಸಿದರು. ರಾತ್ರಿ ಕನಕಾಭಿಷೇಕದ ಆಗುವ ವೇಳೆ ದೇವಳದ ಕಚೇರಿಯಲ್ಲೇ ಕೂತು ಕಾರ್ಯಕ್ರಮ ವೀಕ್ಷಿಸಿದ ಈಶ್ವರ ಭಟ್ ಪಂಜಿಗುಡ್ಡೆಯವರು ಕಾರ್ಯಕ್ರಮ ಮುಗಿದು ಭಕ್ತರಿಗೆ ಪ್ರಸಾದ ವಿತರಣೆಯ ಬಳಿಕ ಮನೆಗೆ ತೆರಳಿದರು.

ಇದನ್ನೂ ಓದಿ: Birds Festival: ಹಕ್ಕಿಗಳನ್ನು ನೋಡೋಕೆ ಈ ಹಬ್ಬ, ಪಕ್ಷಿ ಪ್ರೇಮಿಗಳಿಗೆ ಖುಷಿಯೋ ಖುಷಿ!

ಭಂಡಾರದ ವತಿಯಿಂದ ಒಂದು ದೊಡ್ಡ ಹರಿವಾಣದಲ್ಲಿ ಹೊದ್ದು, ವೀಳ್ಯದೆಲೆ, ಅಡಿಕೆ, ಕಾಳುಮೆಣಸು, ಚಿನ್ನ ಹಾಗೂ ಬೆಳ್ಳಿಯ ತುಣುಕುಗಳು, ಚಾಲ್ತಿಯಲ್ಲಿರುವ ನಾಣ್ಯಗಳನ್ನು ಒಪ್ಪ ಓರಣವಾಗಿ ಜೋಡಿಸಿ ದೇವರ ಬಲಿಯ ಕೊನೆಯ ಸುತ್ತಿನಲ್ಲಿ ಉಳ್ಳಾಲ್ತಿ ಅಮ್ಮನವರ ನಡೆಯಲ್ಲಿ ಕನಕಾಭಿಷೇಕ ನೆರವೇರಿಸಲಾಯಿತು. ಪ್ರತಿ ವರ್ಷ ದೇವಳದ ಸಿಬ್ಬಂದಿ ಪದ್ಮನಾಭ ಅವರು ಕನಕಾಭಿಷೇಕದ ಸುವಸ್ತುಗಳನ್ನು ಜೋಡಿಸುವ ಕಾರ್ಯ ಮಾಡುತ್ತಿದ್ದಾರೆ.