Last Updated:
MRPL 2025-26 ಮೂರನೇ ತ್ರೈಮಾಸಿಕದಲ್ಲಿ ₹1445 ಕೋಟಿ ಲಾಭ ಗಳಿಸಿದೆ. ₹29720 ಕೋಟಿ ಆದಾಯ, ಲಿಬಿಯಾದಿಂದ ಸರಿರ್ ಮೆಸ್ಲಾ ಕಚ್ಚಾ ತೈಲ ಸಂಸ್ಕರಣೆ ಮೊದಲ ಬಾರಿ ನಡೆದಿದೆ.
ದಕ್ಷಿಣ ಕನ್ನಡ : ಸರ್ಕಾರಿ ಸ್ವಾಮ್ಯದ ಮಂಗಳೂರು (Mangaluru) ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL), 2025-26ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶ (Result) ಪ್ರಕಟಿಸಿದ್ದು, ಬರೋಬ್ಬರಿ 1445 ಕೋಟಿ ಲಾಭಗಳಿಸುವ (Benefit) ಮೂಲಕ ಎಂಆರ್ ಪಿಎಲ್ (MRPL) ಮತ್ತೆ ತನ್ನ ಲಾಭದ ಹಾದಿಗೆ ಬಂದಿದೆ.
ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಅಂಗಸಂಸ್ಥೆ ಮತ್ತು ದೇಶದ A ‘ಮಿನಿ ರತ್ನ ವರ್ಗ-I ಕಂಪನಿಯಾದ MRPL ನ ನಿರ್ದೇಶಕರ ಮಂಡಳಿಯು ಜನವರಿ 14, 2026 ರಂದು ನಡೆದ ತನ್ನ 272 ನೇ ಸಭೆಯಲ್ಲಿ ಮೂರನೇ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ಡಿಸೆಂಬರ್ 31, 2025 ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ, ಕಾರ್ಯಾಚರಣೆಗಳಿಂದ MRPL ನ ಆದಾಯವು ₹29,720 ಕೋಟಿಗೆ ಏರಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹25,601 ಕೋಟಿ ಆದಾಯ ಬಂದಿತ್ತು. ತೆರಿಗೆಗೆ ಮುಂಚಿನ ಲಾಭವು ಸುಮಾರು ಐದು ಪಟ್ಟು ಹೆಚ್ಚಾಗಿ ₹2,214 ಕೋಟಿಗೆ ತಲುಪಿದೆ, ಆದರೆ ತೆರಿಗೆ ನಂತರದ ಲಾಭವು ₹1,445 ಕೋಟಿಗೆ ಏರಿಕೆಯಾಗಿದೆ.
ಲಿಬಿಯಾದಿಂದ ತಂದ ಕಚ್ಚಾ ತೈಲದ ಸಂಸ್ಕರಣ
ಒಂಬತ್ತು ತಿಂಗಳ ಅವಧಿಯಲ್ಲಿ, MRPL ₹76,661 ಕೋಟಿಗಳ ಆದಾಯವನ್ನು ದಾಖಲಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಎಂಆರ್ ಪಿಎಲ್ ನಷ್ಟದಲ್ಲಿತ್ತು. ಕಾರ್ಯಾಚರಣೆಯ ದೃಷ್ಟಿಯಿಂದ, MRPL ಮೂರನೇ ತ್ರೈಮಾಸಿಕದಲ್ಲಿ 4.70 ಮಿಲಿಯನ್ ಮೆಟ್ರಿಕ್ ಟನ್ (MMT) ಕಚ್ಚಾ ಮತ್ತು ಇತರ ಫೀಡ್ಸ್ಟಾಕ್ ಅನ್ನು ಮತ್ತು ಒಂಬತ್ತು ತಿಂಗಳಲ್ಲಿ 12.65 MMT ಅನ್ನು ಸಂಸ್ಕರಿಸಿತು. ಕಂಪನಿಯು ಮಂಗಳೂರಿನ ISPRL ನಲ್ಲಿ ಕಚ್ಚಾ ತೈಲದ ಸಂಗ್ರಹವನ್ನು ಪ್ರಾರಂಭಿಸಿದ್ದು ಮತ್ತು ಮೊದಲ ಬಾರಿಗೆ ಲಿಬಿಯಾದಿಂದ ಸರಿರ್ ಮೆಸ್ಲಾ ಕಚ್ಚಾ ತೈಲವನ್ನು ಸಂಸ್ಕರಿಸಿದೆ.
Dakshina Kannada,Karnataka
Jan 16, 2026 12:48 PM IST