Kalaparaba: ಮಂಗಳೂರಲ್ಲಿ ಮೋಡಿ ಮಾಡಿದ ಕಲಾಪರ್ಬ, ಕರಾವಳಿ ಮಂದಿ ಫುಲ್ ಖುಷ್! | Mangaluru art exhibition | ದಕ್ಷಿಣ ಕನ್ನಡ

Kalaparaba: ಮಂಗಳೂರಲ್ಲಿ ಮೋಡಿ ಮಾಡಿದ ಕಲಾಪರ್ಬ, ಕರಾವಳಿ ಮಂದಿ ಫುಲ್ ಖುಷ್! | Mangaluru art exhibition | ದಕ್ಷಿಣ ಕನ್ನಡ

Last Updated:

ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆದ ಕಲಾಪರ್ಬ ಚಿತ್ರಕಲಾ ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ಚಿತ್ರಕಲಾ ಮಳಿಗೆಗಳು ಭಾಗವಹಿಸಿ ವಿವಿಧ ಶೈಲಿಯ ಚಿತ್ರಕಲೆಗಳನ್ನು ಪ್ರದರ್ಶಿಸಿ ಜನರನ್ನು ಆಕರ್ಷಿಸಿವೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ವೀಕೆಂಡ್ ನಲ್ಲಿ ಬೀಚ್ ಅಥವಾ ಮಾಲ್ ಗಳನ್ನು ಸುತ್ತಾಡುವ ಮಂಗಳೂರಿನ ಜನತೆಗೆ ಕಳೆದ ವಾರ ರಸ್ತೆಯಲ್ಲಿ ಸುತ್ತಾಡಿ ಮಜಾ ಪಡುವ ಅವಕಾಶ ದೊರೆತಿತ್ತು. ಹೌದು ಮಂಗಳೂರಿನ (Mangaluru) ಕರಾವಳಿ (Coastal) ಉತ್ಸವದ ಅಂಗವಾಗಿ ದಕ್ಷಿಣ ಕನ್ನಡ (Dakshina Kannada) ಜಿಲ್ಲಾಡಳಿತ ಹಾಗೂ ಶರಧಿ ಪ್ರತಿಷ್ಠಾನದಿಂದ ನಗರದ ಕದ್ರಿ ಪಾರ್ಕ್ ನಲ್ಲಿ ನಡೆದ ಕಲಾಪರ್ಬ (Kalaparaba) ಎನ್ನುವ ಚಿತ್ರಕಲಾ ಪ್ರದರ್ಶನ ಕರಾವಳಿ ಜನರನ್ನು ಮೋಡಿ ಮಾಡಿತ್ತು.

ನಾನಾ ಪ್ರಕಾರಗಳ ಕಲೆಗಳ ವೈಭವ

ರಸ್ತೆ ತುಂಬಾ ಎಲ್ಲಿ ಕಣ್ಣು ಹಾಯಿಸಿದರೂ ಸಿಗುವ ನಾನಾ ರೀತಿಯ, ನಾನಾ ಪ್ರಕಾರಗಳ ಕಲೆಗಳ ವೈಭವ. ಒಮ್ಮೆ ನೋಡಿದಲ್ಲಿ, ಮತ್ತೊಮ್ಮೆ ನೋಡಬೇಕೆಂಬ ಕುತೂಹಲವನ್ನು ಕೆರಳಿಸುವ ಸನ್ನಿವೇಶ ನಿರ್ಮಾಣವಾಗಿತ್ತು. ಮಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ ಕಲಾಪರ್ಬ ಎನ್ನುವ ಚಿತ್ರಕಲೆಗಳ ಪ್ರದರ್ಶನದ ಕಾರ್ಯಕ್ರಮದಲ್ಲಿ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಶರಧಿ ಪ್ರತಿಷ್ಠಾನ ಜಂಟಿಯಾಗಿ ಈ ಕಲಾಪ್ರದರ್ಶನ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದೇ ಮೊದಲ ಬಾರಿ ಆಯೋಜನೆ

ಸಾಮಾನ್ಯವಾಗಿ ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿ ಆಯೋಜಿಸಲಾಗುವ ಈ ಚಿತ್ರಕಲಾ ಪ್ರದರ್ಶನವನ್ನು ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಕದ್ರಿ ಪಾರ್ಕ್ ರಸ್ತೆಯ ಇಕ್ಕೆಲಗಳಲ್ಲಿ ಈ ಚಿತ್ರಕಲೆಗಳ ಪ್ರದರ್ಶನಕ್ಕೆ ಅವಕಾಶವನ್ನು ಮಾಡಲಾಗಿತ್ತು. ಕರಾವಳಿ ಉತ್ಸವದ ಕಾರ್ಯಕ್ರಮಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆಯಲಿದ್ದು, ಕದ್ರಿ ಪಾರ್ಕ್, ತಣ್ಣೀರುಬಾವಿ ಬೀಚ್, ಪಣಂಬೂರು ಬೀಚ್ ಸೇರಿದಂತೆ ಹಲವು ಕಡೆಗಳಲ್ಲಿ ಹಲವು ರೀತಿಯ ಕಾರ್ಯಕ್ರಗಳು ನಡೆಯಲಿವೆ.

ಹಲವು ಕಲೆಗಳ ಪ್ರದರ್ಶನ

ಕಲಾಪರ್ಬದಲ್ಲಿ ಹಲವು ರೀತಿಯ ಕಲೆಗಳ ಪ್ರಕಾರಗಳನ್ನು ನೋಡುವ ಅವಕಾಶವನ್ನು ವೀಕ್ಷಕರಿಗೆ ನೀಡಲಾಗಿದೆ. ಕಲಾಪರ್ಬದಲ್ಲಿ ನಾಡಿನ ನಾನಾ ಜಿಲ್ಲೆ, ರಾಜ್ಯದಿಂದ ಆಗಮಿಸಿದ 100 ಅಧಿಕ ಚಿತ್ರಕಲಾ ಮಳಿಗೆಗಳು ಜನರ ಮನಸೆಳೆಯಿತು. ಜಲವರ್ಣ, ತೈಲವರ್ಣ, ರೇಖಾಚಿತ್ರ, ಪೆನ್ಸಿಲ್ ಸ್ಕೆಚಿಂಗ್, ಆಕ್ರಿಲಿಕ್ ಚಿತ್ರಕಲೆ, ಮಧುಬನಿ, ವಾರ್ಲಿ, ಪಟಚಿತ್ರ, ಫೇಸ್ ಪೈಟಿಂಗ್, ವ್ಯಂಗ್ಯಚಿತ್ರಗಳು, ಭಿತ್ತಿಚಿತ್ರ, ಡಿಜಿಟಲ್ ಚಿತ್ರಕಲೆಗಳು ಪ್ರದರ್ಶನದಲ್ಲಿವೆ. ಕದ್ರಿ ಪಾರ್ಕ್ ರಸ್ತೆಯಲ್ಲೇ ಚಿತ್ರಕಲಾ ಮಳಿಗೆ ಗಳನ್ನು ನಿರ್ಮಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕದ್ರಿ ಪಾರ್ಕ್ ರಸ್ತೆ ಬಂದ್ ಮಾಡಲಾಗಿತ್ತು. ಪಾರ್ಕ್‍ಗೆ ತೆರಳುವ ಎರಡೂ ಕಡೆಯ ಫುಟ್ ಪಾತ್ ನಲ್ಲಿ ಕಲಾವಿದರು ಚಿತ್ರ ಬಿಡಿಸುತ್ತಿರುವುದು ಕಂಡಬಂದಿದೆ.