Kite Festival: ಗಾಳಿಪಟ ಹಾರಿಸಲು ಎಂಟು-ಹತ್ತು ಸಾವಿರ ಕಿ.ಮೀ ಪಯಣ; ತಣ್ಣೀರುಬಾವಿಯಲ್ಲಿ ವಿದೇಶಿಗರ ಸಂಗಮ! | Mangaluru beach kite festival with 15 countries attracted crowds | ಮಂಗಳೂರು ನ್ಯೂಸ್ (Mangaluru News)

Kite Festival: ಗಾಳಿಪಟ ಹಾರಿಸಲು ಎಂಟು-ಹತ್ತು ಸಾವಿರ ಕಿ.ಮೀ ಪಯಣ; ತಣ್ಣೀರುಬಾವಿಯಲ್ಲಿ ವಿದೇಶಿಗರ ಸಂಗಮ! | Mangaluru beach kite festival with 15 countries attracted crowds | ಮಂಗಳೂರು ನ್ಯೂಸ್ (Mangaluru News)

Last Updated:

ಮಂಗಳೂರು ತಣ್ಣೀರುಬಾವಿ ಬೀಚ್‌ನಲ್ಲಿ ಟೀಮ್ ಮಂಗಳೂರು ಆಯೋಜಿಸಿದ 8ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 15 ದೇಶಗಳ ಸ್ಪರ್ಧಿಗಳು ಅಪರೂಪದ ಗಾಳಿಪಟಗಳೊಂದಿಗೆ ಭಾಗವಹಿಸಿದರು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಬಾನೆತ್ತರಕ್ಕೆ ಬಾನಾಡಿಗಳಂತೆ ಹಾರುತ್ತಿರುವ ಗಾಳಿಪಟಗಳು. ಒಂದಕ್ಕಿಂತ ಮತ್ತೊಂದು ಆಕರ್ಷಣೀಯ. ಮತ್ತೊಂದಕ್ಕಿಂತ ಮಗದೊಂದು ಭಿನ್ನ. ಕಣ್ಣುಹಾಯಿಸಿದಷ್ಟು ದೂರ  ಗಾಳಿಪಟಗಳದ್ದೇ ಕಾರುಬಾರು.

ಟೀಮ್‌ ಮಂಗಳೂರು ಸಂಘಟನೆಯ ಸ್ಪರ್ಧೆ

ಹೌದು, ಈ ದೃಶ್ಯ ಕಂಡುಬಂದಿದ್ದು ಟೀಮ್ ಮಂಗಳೂರು ಆಶ್ರಯದಲ್ಲಿ ನಗರದ ತಣ್ಣೀರುಬಾವಿ ಬೀಚ್‌ನಲ್ಲಿ ನಡೆದ 8ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ. ಒಎನ್‌ಜಿಸಿ ಎಂಆರ್‌ಪಿಎಲ್ ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲಾಡಳಿತದ ಸಹಕಾರದೊಂದಿಗೆ ಶನಿವಾರ ಮತ್ತು ರವಿವಾರ ಮಧ್ಯಾಹ್ನ 3ರಿಂದ ರಾತ್ರಿ 9ರವರೆಗೆ ಗಾಳಿಪಟ ಹಾರಾಡಿವೆ.

ನಾನಾ ಅವತಾರದಲ್ಲಿ ಮೈದಳೆದ ಗಾಳಿಪಟಗಳು

ಕುದುರೆ, ಕೋಳಿ, ರೋಸ್, ಸನ್‌ಫ್ಲವರ್, ಗಿಡುಗ, ಏಲಿಯನ್, ಗಗನಯಾನಿ, ಶಾರ್ಕ್, ಮೀನು, ಆಕ್ಟೋಪಸ್, ಆನೆ, ಹಾರ್ಟ್ ಸಿಂಬಲ್, ಹುಲಿ, ಮೊಲ, ಏರೋಪ್ಲೇನ್, ಚಿರತೆ, ಟೆಡ್ಡಿಬೇರ್, ಕ್ರಿಕೆಟ್, ಡ್ರ್ಯಾಗನ್, ಇಂಡಿಯಾ ಫ್ಲ್ಯಾಗ್ ಹೀಗೆ ನೂರಾರು ವೈವಿಧ್ಯಮಯ ಗಾಳಿಪಟಗಳು ನೋಡುಗರ ಕಣ್ಮನ ಸೆಳೆಯುತ್ತಿತ್ತು. ಪುಟ್ಟಪುಟ್ಟ ಗಾಳಿಪಟಗಳಿಂದ ಹಿಡಿದು ಬೃಹತ್ ಗಾತ್ರದ ಗಾಳಿಪಟಗಳು ಗಾಳಿಯ ಬೀಸುವಿಕೆಗೆ ತಕ್ಕಂತೆ ಓಲಾಡಿ, ಹಾರಾಡಿ, ಕುಲುಕಾಡಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿತ್ತು.

ಅಬ್ಬಬ್ಬಾ 15 ದೇಶಗಳ ಸ್ಪರ್ಧಿಗಳು ಭಾಗಿ!

ಇಂಗ್ಲೆಂಡ್, ಇಟಲಿ, ಸ್ವೀಡನ್, ಇಂಡೋನೇಶಿಯಾ, ಈಸ್ಟೋನಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ವಿಯಟ್ನಾಮ್, ಕೊರಿಯಾ, ಸಿಂಗಾಪುರ್, ಸ್ವಿಜರ್ಲ್ಯಾಂಡ್, ಉಕ್ರೈನ್ ದೇಶಗಳ ವಿದೇಶಿ ಗಾಳಿಪಟ ತಂಡಗಳು ಸೇರಿದಂತೆ ಒಡಿಸ್ಸಾ, ರಾಜಸ್ತಾನ್, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ರಾಜ್ಯಗಳಿಂದ ಆಗಮಿಸಿದ ಗಾಳಿಪಟ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿದೆ. 15 ದೇಶಗಳ 32 ಅಂತಾರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಸೇರಿದಂತೆ 62ಕ್ಕೂ ಅಧಿಕ ಗಾಳಿಪಟ ಹಾರಾಟಗಾರರು ಇಲ್ಲಿದ್ದರು.

ಇಲ್ಲಿ ಹಾರಾಡಿದ್ದು ಅಪರೂಪದ ವಿನ್ಯಾಸದ ಗಾಳಿಪಟ

ಇದನ್ನೂ ಓದಿ: Israel Partnership: ಇಸ್ರೇಲ್ ಜೊತೆಗೆ ದಕ್ಷಿಣ ಕನ್ನಡ ಸಂಬಂಧ ಆರಂಭ, ದೂರದ ವಿದೇಶಕ್ಕೂ ಇಲ್ಲಿಗೂ ಇರುವ ನಂಟು ಇದೇ ನೋಡಿ!

ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಏರೋಫಾಯ್ಸ್ ಗಾಳಿಪಟಗಳು(ಗಾಳಿ ತುಂಬಿ ಬಲೂನ್ ರೀತಿಯಲ್ಲಿ ಹಾರಾಡುವ ಬೃಹತ್ ಗಾಳಿಪಟಗಳು) ಸೀರೀಸ್ ಕೈಟ್(ಏಕ ದಾರದಲ್ಲಿ ನೂರಾರು ಗಾಳಿಪಟಗಳು) ರೆಕ್ಕೆಬಿಚ್ಚಿ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಜನಾಕರ್ಷಣೆಗೆ ಪಾತ್ರವಾಗಿದೆ. ಒಟ್ಟಿನಲ್ಲಿ ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗಿಯಾಗಲು ಮಂಗಳೂರು ಮಾತ್ರವಲ್ಲದೆ ಬೆಂಗಳೂರು ಮತ್ತಿತರ ಜಿಲ್ಲೆಗಳಿಂದ ಜನರು ಆಗಮಿಸಿ ಸಂತೋಷಪಟ್ಟರು.