World Record: 6 ಗಂಟೆ 13 ನಿಮಿಷ ಭರತನಾಟ್ಯ ಮಾಡಿ, ಹಾಡು ಹೇಳಿ ಸಾಧನೆ; ಕರಾವಳಿಗೆ ಕೀರ್ತಿ ತಂದ ಕಲಾವಿದೆ! | Bharatanatyam record | ಮಂಗಳೂರು ನ್ಯೂಸ್ (Mangaluru News)

World Record: 6 ಗಂಟೆ 13 ನಿಮಿಷ ಭರತನಾಟ್ಯ ಮಾಡಿ, ಹಾಡು ಹೇಳಿ ಸಾಧನೆ; ಕರಾವಳಿಗೆ ಕೀರ್ತಿ ತಂದ ಕಲಾವಿದೆ! | Bharatanatyam record | ಮಂಗಳೂರು ನ್ಯೂಸ್ (Mangaluru News)

Last Updated:

ಉಡುಪಿಯ ದೀಕ್ಷಾ ರಾಮಕೃಷ್ಣ ಭರತನಾಟ್ಯದಲ್ಲಿ 6 ಗಂಟೆ 13 ನಿಮಿಷಗಳ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಕಲೆಯಲ್ಲಿ ಶ್ರೇಷ್ಠ ಸಾಧನೆ ತೋರಬೇಕು ಎನ್ನುವ ಕಾರಣಕ್ಕೆ ಕಲಾವಿದರು ನಿರಂತರವಾಗಿ ಕಠಿಣ ಪರಿಶ್ರಮದಲ್ಲಿ ತೊಡಗಿಕೊಳ್ಳುತ್ತಾರೆ. ಬೆಳಗ್ಗಿನಿಂದ ರಾತ್ರಿ ತನಕ ನಿರಂತರವಾಗಿ ತಮ್ಮ ಕಲೆಯನ್ನು (Art) ತೋರ್ಪಡಿಸುವ ಮೂಲಕ ಸಾಧನೆಯ ಉತ್ತುಂಗಕ್ಕೆ ಏರಿದ ಕಲಾವಿದರ ಸಾಲಿಗೆ ಇದೀಗ ಉಡುಪಿಯ (Udupi) ದೀಕ್ಷಾ (Deeksha) ರಾಮಕೃಷ್ಣ ಕೂಡ ಸೇರಿಕೊಂಡಿದ್ದಾರೆ.

ಅಪರೂಪದ ದಾಖಲೆ

ಭರತನಾಟ್ಯದಲ್ಲಿ ಅಪರೂಪದ ದಾಖಲೆ ಮಾಡುವ ಮೂಲಕ ದೀಕ್ಷಾ ರಾಮಚಂದ್ರ ಇದೀಗ ಸುದ್ದಿಯಲ್ಲಿದ್ದಾರೆ. ಏಕಕಾಲದಲ್ಲಿ ಈಕೆ ನೃತ್ಯ ಮಾಡುತ್ತಾ, ಹಾಡುತ್ತಾ ಗಮನ ಸೆಳೆಯುವ ದಾಖಲೆ ಇದಾಗಿದೆ. ಪುರಂದರ ದಾಸರ ಕೀರ್ತನೆಗಳನ್ನು ಲಯಬದ್ಧವಾಗಿ ಶಾಸ್ತ್ರೀಯವಾಗಿ ಹಾಡುತ್ತಾ, ಭರತನಾಟ್ಯದ ಸರಳ ಹೆಜ್ಜೆಗಳೊಂದಿಗೆ, ಈ ದಾಖಲೆಯನ್ನು ಪೂರ್ಣಗೊಳಿಸಿದ್ದಾರೆ. ಇವರು ಮಣಿಪಾಲದಲ್ಲಿ ವಾಸವಾಗಿದ್ದು. ಸಂಗೀತ ಮತ್ತು ಭರತನಾಟ್ಯ ಕಳಿಸುತ್ತಿದ್ದಾರೆ. ಭರತನಾಟ್ಯ ಕಲಾವಿದೆ ಯಶ ರಾಮಕೃಷ ಎನ್ನುವವರ ಮಗಳು.

6 ಗಂಟೆ 13 ನಿಮಿಷಗಳ ಕಾಲ ಪ್ರದರ್ಶನ

ಸತತ 6 ಗಂಟೆ 13 ನಿಮಿಷಗಳ ಕಾಲ ಪ್ರದರ್ಶನ ದೀಕ್ಷಾ ನೀಡಿದ್ದಾರೆ. ಸದ್ಯ ಇವರ ಈ ಸಾಧನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರ್ಪಡೆಯಾಗಿದೆ. ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ, ಬೆಳಗ್ಗೆ 10 ಗಂಟೆಯಿಂದ ಆರಂಭಿಸಿ 6 ಗಂಟೆ 13 ನಿಮಿಷಗಳ ಕಾಲ ಕ್ರಮಬದ್ಧವಾಗಿ ಪ್ರದರ್ಶನ ನೀಡಿದರು.