Last Updated:
ಮಾವಿನಶುಂಠಿ ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದಲ್ಲಿ ಪ್ರಸಿದ್ಧ, ಆಯುರ್ವೇದದಲ್ಲಿ ಉಪಯೋಗವಾಗುವ ಈ ಗೆಡ್ಡೆ ಅಜೀರ್ಣ ನಿವಾರಣೆ, ರುಚಿ ಹೆಚ್ಚಿಸುವುದು, ಚರ್ಮ ತುರಿಕೆ ತಡೆಯಲು ಸಹಕಾರಿ.
ದಕ್ಷಿಣ ಕನ್ನಡ: ಮಾವಿನ ಕಾಯಿ ಪರಿಮಳ (Smell) ಹೊರಸೂಸುವ ಶುಂಠಿಯಂತೆ ಕಾಣುವ ಈ ಗೆಡ್ಡೆಗಳು ಸಾಮಾನ್ಯವಾಗಿ (Common) ಎಲ್ಲಾ ಕಡೆಗಳಲ್ಲಿ ಕಂಡುಬರುತ್ತವೆ. ಮಾವಿನ ಪರಿಮಳ ಹೊಂದಿರುವ ಕಾರಣಕ್ಕೆ ಮತ್ತು ಶುಂಠಿಯಂತೆ ಕಾಣುವ ಕಾರಣಕ್ಕೆ ಈ ಗೆಡ್ಡೆಗೆ ಮಾವಿನಶುಂಠಿ ಎಂಬ ಹೆಸರಿದೆ.
ಈ ಗೆಡ್ಡೆಯಲ್ಲಿ ಸಾಕಷ್ಟು ಔಷಧೀಯ ಗುಣಗಳಿರುವ ಕಾರಣ ಇದನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದರ ಗಿಡ ನೋಡಲು ಅರಿಶಿಣ ಗಿಡದಂತೆ ಕಾಣುತ್ತದೆ. ಇದರ ಗೆಡ್ಡೆ ಮತ್ತು ಎಲೆಗಳಲ್ಲಿ ಶುಂಠಿಯ ಪರಿಮಳವಿದೆ. ಇದಕ್ಕೆ ಮಾಂಗನಾರಿ, ಅಂಬೆಅರಿಶಿಣ, ಅಂಬೆಕೊಂಬು, ಕುಕ್ಕುಶುಂಠಿ ಇತ್ಯಾದಿ ಹೆಸರುಗಳಿವೆ. ಇಂಗ್ಲಿಷ್‌ನಲ್ಲಿ ‘ಮ್ಯಾಂಗೋ ಜಿಂಜರ್’ ಎಂಬ ಹೆಸರಿದೆ.
ಮಳೆಗಾಲದಲ್ಲಿ ಮನೆಯ ಹಿತ್ತಿಲಲ್ಲಿ ಒಂದು ಗೆಡ್ಡೆಯನ್ನು ನಾಟಿ ಮಾಡಿದರೆ ಸಾಕು. ಅದು ಮೊಳಕೆ ಒಡೆದು ಹಲವು ಸಣ್ಣ ಕಂದುಗಳು ಹುಟ್ಟಿಕೊಳ್ಳುತ್ತವೆ. ಈ ಕಂದುಗಳನ್ನೂ ಕಿತ್ತು ನಾಟಿ ಮಾಡಿ ಬೆಳೆಸಬಹುದು. ಗೆಡ್ಡೆಗಳನ್ನು ಮಣ್ಣಿನಲ್ಲಿ ಎಷ್ಟು ದಿನ ಬಿಟ್ಟರೂ ಹಾಳಾಗುವುದಿಲ್ಲ. ಬೇಕಾದಾಗ ಗೆಡ್ಡೆಗಳನ್ನು ಕಿತ್ತು ಬಳಸಬಹುದು.
ಮಾವಿನಕಾಯಿ ಶುಂಠಿಗೆ ರೋಗ, ಕೀಟಗಳ ಹಾವಳಿ ಕಡಿಮೆ. ಫಲವತ್ತಾದ ಮಣ್ಣು, ಬೂದಿ, ಸ್ವಲ್ಪ ಕೊಟ್ಟಿಗೆ ಗೊಬ್ಬರದ ಹುಡಿ ಹಾಕಿದರೆ ಸಾಕು. ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕರಾವಳಿ ಮತ್ತು ಮಲೆನಾಡಿನ ರೈತರ ಹಿತ್ತಲುಗಳಲ್ಲಿ ಇದು ಸಾಮಾನ್ಯವಾಗಿ ಇದ್ದೇ ಇರುತ್ತದೆ.
ಬೇಸಿಗೆಯಲ್ಲಿ ಗಿಡ ಒಣಗಿದಂತೆ ಕಂಡರೂ ಮಣ್ಣಿನೊಳಗೆ ಗೆಡ್ಡೆಗಳು ಹಸಿಯಾಗಿರುತ್ತವೆ. ಮಳೆ ಬಂದ ನಂತರ ಮತ್ತೆ ಚಿಗುರುತ್ತವೆ. ಒಮ್ಮೆ ನಾಟಿ ಮಾಡಿದರೆ ನಾಲ್ಕೈದು ವರ್ಷ ಗೆಡ್ಡೆ ಪಡೆಯಬಹುದು. ಮಾವಿನಶುಂಠಿ ಬಳಸಿ ಚಟ್ನಿ, ಗೊಜ್ಜು, ತಂಬುಳಿ, ಉಪ್ಪಿನಕಾಯಿ ಇತ್ಯಾದಿಗಳನ್ನು ಮಾಡಬಹುದು. ಗೆಡ್ಡೆ ತುರಿಯನ್ನು ರುಚಿ ಮತ್ತು ಸ್ವಾದಕ್ಕಾಗಿ ಸಲಾಡ್‌ಗಳಲ್ಲಿ ಬಳಸಬಹುದು.
ಅಜೀರ್ಣಕ್ಕೆ ಇದು ರಾಮಬಾಣ!
Disclaimer
ಇಲ್ಲಿ ಔಷಧಿ ಮತ್ತು ಚಿಕಿತ್ಸೆಯ ಕುರಿತಾಗಿ ನೀಡಿರುವ ಎಲ್ಲಾ ಮಾಹಿತಿ ತಜ್ಞರನ್ನು ಸಂಪರ್ಕಿಸಿದ ನಂತರವೇ ನೀಡಲಾಗಿದೆ. ಇದು ಕೇವಲ ಸಾಮಾನ್ಯ ಮಾಹಿತಿಯಾಗಿದ್ದು ವ್ಯಕ್ತಿಗತವಾದ ಸಲಹೆ ಅಲ್ಲ. ಆದ್ದರಿಂದ ಇವುಗಳನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಲೋಕಲ್ 18 ಈ ಮಾಹಿತಿಯ ಬಳಕೆಯಿಂದ ಉಂಟಾದ ಯಾವುದೇ ಹಾನಿ/ನಷ್ಟಕ್ಕೆ ಜವಾಬ್ದಾರರಲ್ಲ.
Dakshina Kannada,Karnataka
Health Tips: ಅಂಗೈ ಅಗಲದ ಅಂಬೆಕೊಂಬು ಏನೆಲ್ಲ ಮಾಡುತ್ತೆ ಗೊತ್ತಾ? ರುಚಿಗೂ ಸೈ, ಆರೋಗ್ಯಕ್ಕೂ ಸೈ ಈ ಪದಾರ್ಥ!